Michael Holding: ಟೀಮ್ ಇಂಡಿಯಾದಲ್ಲಿ ಧೋನಿಯ ಅನುಪಸ್ಥಿತಿ ಎದ್ದು ಕಾಣುತ್ತಿದೆ..!

ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದರು. ಆದರೆ ಅವರಿಗೆ ಧೋನಿ ಅವರಂತಹ ಆಟಗಾರರ ಅವಶ್ಯಕತೆಯಿದೆ. ಕೌಶಲ್ಯದೊಂದಿಗೆ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕೂಡ ಇರಬೇಕು.

Dhoni

Dhoni

 • Share this:
  ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 66 ರನ್​ಗಳ ಸೋಲನುಭವಿಸಿತು. ಎರಡನೇ ಪಂದ್ಯದಲ್ಲೂ ಭಾರತೀಯ ಬೌಲರುಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 389 ರನ್​ ಕಲೆಹಾಕುವ ಮೂಲಕ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲವನ್ನು ತೆರೆದಿಟ್ಟಿದೆ. ಇತ್ತ ಮೊದಲ ಪಂದ್ಯದ ಹೀನಾಯ ಸೋಲಿನ ಬಗ್ಗೆ ಮಾತನಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಮೈಕಲ್ ಹೋಲ್ಡಿಂಗ್, ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಸಿಡ್ನಿಯಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಎಡವಿತ್ತು. ಇದು ಧೋನಿ ಅವರ ಕೌಶಲ್ಯ ಮತ್ತು ಪಾತ್ರದ ಅನುಪಸ್ಥಿತಿಯನ್ನು ಎದ್ದು ತೋರಿಸಿದೆ. ನನ್ನ ಪ್ರಕಾರ ಸದ್ಯ ಟೀಮ್ ಇಂಡಿಯಾದಲ್ಲಿ ಧೋನಿ ಅವರಲ್ಲಿದ್ದ ಕೌಲಶ್ಯತೆ ಹಾಗೂ ತಂತ್ರಗಾರಿಕೆಗಳು ಕಾಣೆಯಾಗಿದೆ ಎಂದು ಹೋಲ್ಡಿಂಗ್ ತಿಳಿಸಿದರು.

  ಧೋನಿ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿದ್ದರು. ಅದರಲ್ಲೂ ಚೇಸಿಂಗ್ ಪಂದ್ಯದಲ್ಲಿ ಅವರು ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿಯೇ ಹಲವು ಪಂದ್ಯಗಳನ್ನು ಧೋನಿ ನೇತೃತ್ವದಲ್ಲಿ ಭಾರತ ಚೇಸ್ ಮಾಡಲು ಸಾಧ್ಯವಾಗಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದರು. ಆದರೆ ಅವರಿಗೆ ಧೋನಿ ಅವರಂತಹ ಆಟಗಾರರ ಅವಶ್ಯಕತೆಯಿದೆ. ಕೌಶಲ್ಯದೊಂದಿಗೆ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕೂಡ ಇರಬೇಕು. ಧೋನಿ ತಂಡದಲ್ಲಿದ್ದಾಗ ಭಾರತ ಚೇಸ್ ಮಾಡುವ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಹೊಂದಿತ್ತು ಎಂದು ಹೋಲ್ಡಿಂಗ್ ತಿಳಿಸಿದರು.

  ದೊಡ್ಡ ಮೊತ್ತ ಚೇಸ್ ಮಾಡುವ ವೇಳೆ ಧೋನಿ ಎಂದೂ ಗಾಬರಿಯಾಗುತ್ತಿರಲಿಲ್ಲ. ಕೂಲ್ ಆಗಿಯೇ ಬ್ಯಾಟಿಂಗ್ ಕ್ರಮಾಂಕ ಸಿದ್ಧಪಡಿಸುತ್ತಿದ್ದರು. ಧೋನಿಗೆ ಅವರ ಸಾಮರ್ಥದ ಅರಿವಿತ್ತು. ಅವರು ಚೇಸಿಂಗ್ ಸ್ಪೆಷಲಿಸ್ಟ್ ಆಗಿದ್ದರು. ಅಲ್ಲದೆ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಿದ್ದರು ಎಂದು ಹೋಲ್ಡಿಂಗ್ ಧೋನಿ ಅವರ ಗುಣಗಾನ ಮಾಡಿದರು.

  ಇದೀಗ ಧೋನಿ ಅವರಲ್ಲಿದ್ದ ಕೌಶಲ್ಯತೆ ಹಾಗೂ ತಂಡದಲ್ಲಿ ಅವರ ಪಾತ್ರದ ಅನುಪಸ್ಥಿತಿಯು ಎದ್ದು ಕಾಣುತ್ತಿದೆ. ನನ್ನ ಪ್ರಕಾರ ಟೀಮ್ ಇಂಡಿಯಾಗೆ ಸದ್ಯ ಧೋನಿಯಂತಹ ಆಟಗಾರನ ಅವಶ್ಯಕತೆಯಿದೆ ಎಂದು ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ ತಿಳಿಸಿದರು.

  ಇದನ್ನೂ ಓದಿ: ರಾಹುಲ್ ಮುಂದೆ ಮ್ಯಾಕ್ಸ್​ವೆಲ್ ಆರ್ಭಟ: ಕಾಲೆಳೆದ ಕಿಂಗ್ಸ್ ಇಲೆವೆನ್ ಬ್ಯಾಟಿಂಗ್ ಕೋಚ್
  Published by:zahir
  First published: