HOME » NEWS » Sports » CRICKET INDIA FAVOURITES TO WIN T20 WORLD CUP SAY EX ENGLAND CAPTAINS SNVS

T20 World Cup - ಭಾರತ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುತ್ತೆ: ಮಾಜಿ ಇಂಗ್ಲೆಂಡ್ ಕ್ಯಾಪ್ಟನ್ಸ್ ಭವಿಷ್ಯ

ಜಡೇಜಾ, ಬುಮ್ರಾ ಮತ್ತು ಶಮಿ ಅವರ ಗೈರಿನಲ್ಲೂ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಜಯಿಸಿದೆ. ಈ ಮೂವರು ಆಟಗಾರರು ಸೇರ್ಪಡೆಯಾದರೆ ಈ ವರ್ಷದ ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ತಡೆಯುವುದು ಕಷ್ಟ ಎಂದು ಅಥರ್ಟನ್ ಮತ್ತು ವಾನ್ ಅಭಿಪ್ರಾಯಪಟ್ಟಿದ್ಧಾರೆ.

cricketnext
Updated:March 22, 2021, 1:42 PM IST
T20 World Cup - ಭಾರತ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುತ್ತೆ: ಮಾಜಿ ಇಂಗ್ಲೆಂಡ್ ಕ್ಯಾಪ್ಟನ್ಸ್ ಭವಿಷ್ಯ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
  • Cricketnext
  • Last Updated: March 22, 2021, 1:42 PM IST
  • Share this:
ಬೆಂಗಳೂರು(ಮಾ. 22): ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯನ್ನು ಜಯಿಸಿದ ಭಾರತ ತಂಡ ಈ ವರ್ಷದ ಟಿ20 ವಿಶ್ವಕಪ್ ಗೆಲ್ಲಲು ನೆಚ್ಚಿನ ತಂಡ ಎಂದು ಇಂಗ್ಲೆಂಡ್​ನ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡದಲ್ಲಿ ಬಹಳ ಆಳವಿದೆ. ಮೂವರು ಪ್ರಮುಖ ಬೌಲರ್​ಗಳ ಅನುಪಸ್ಥಿತಿಯಲ್ಲೂ ಭಾರತ ವಿಶ್ವದ ನಂಬರ್ ಒನ್ ಟಿ20 ತಂಡವಾದ ಇಂಗ್ಲೆಂಡನ್ನು ಮಣಿಸಿದೆ. ಭಾರತದ ನೆಲದಲ್ಲೇ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಭಾರತವೇ ಚಾಂಪಿಯನ್ ಆಗುವ ಅವಕಾಶ ಹೆಚ್ಚಿದೆ ಎಂದು ಮೈಕ್ ಅಥರ್ಟನ್ ಮತ್ತು ಮೈಕೇನ್ ವಾನ್ ಹೇಳಿದ್ದಾರೆ.

“ಐಪಿಎಲ್ ಮತ್ತು ಟಿ20 ಕ್ರಿಕೆಟನ್ನು ಹೆಚ್ಚಾಗಿ ಆಡುವುದರಿಂದ ಭಾರತ ತಂಡ ಹೆಚ್ಚು ಬಲಿಷ್ಠ ಮತ್ತು ಆಳ ಹೊಂದಿದೆ. ಮೂರು ಪ್ರಮುಖ ಬೌಲರ್​ಗಳಿಲ್ಲದೆಯೇ ಇಂಗ್ಲೆಂಡ್ ತಂಡವನ್ನ ಸೋಲಿಸಿದೆ. ಇದೆಲ್ಲವನ್ನೂ ಗಮನಿಸಿದಾಗ ಹಾಗೂ ಟಿ20 ವರ್ಲ್ಡ್ ಕಪ್ ಅನ್ನು ತವರಿನಲ್ಲಿ ಆಡುವ ವಿಚಾರವನ್ನು ಪರಿಗಣಿಸಿದಾಗ ಭಾರತ ಚಾಂಪಿಯನ್ ಆಗಲು ನೆಚ್ಚಿನ ತಂಡವಾಗಿದೆ” ಎಂದು ಮಾಜಿ ಇಂಗ್ಲೆಂಡ್ ಕ್ಯಾಪ್ಟನ್ ಮೈಕ್ ಅಥರ್ಟನ್ ಅವರು ಸ್ಕೈ ಸ್ಪೋರ್ಟ್ಸ್ ವಾಹಿನಿಗೆ ಹೇಳಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮತ್ತೊಬ್ಬ ಮಾಜಿ ನಾಯಕ ಮೈಕೇಲ್ ವಾನ್ ಕೂಡ ಭಾರತ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಈ ಭಾರತ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಜಸ್​ಪ್ರೀತ್ ಬುಮ್ರಾ ಕೂಡ ಸೇರಿದರೆ ತಂಡ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: India vs England 5th T20: ಇಂಗ್ಲೆಂಡ್​ ತಂಡವನ್ನು ಬಗ್ಗು ಬಡಿದು ಸರಣಿ ಗೆದ್ದ ಟೀಮ್ ಇಂಡಿಯಾ..!

“ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಅದ್ಭುತವಾಗಿ ಆಡಿದೆ. ಉತ್ತಮ ತಂಡ ಸರಣಿ ಜಯಿಸಿದೆ. ಭಾರತದ ವಾತಾವರಣದಲ್ಲಿ ಈ ತಂಡಕ್ಕೆ ಜಸ್​ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಕೂಡ ಸೇರಿದರೆ ಟಿ20 ವಿಶ್ವಕಪ್ ಗೆಲ್ಲಲು ನೆಚ್ಚಿನ ತಂಡವೆನಿಸಲಿದೆ. ಭಾರತ ಇಂಗ್ಲೆಂಡ್ ಕ್ರಿಕೆಟ್ ಸರಣಿ ಒಂದು ಅದ್ಭುತ ಅನುಭವ” ಎಂದು ವಾನ್ ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿಯಲ್ಲಿ ಭಾರತ ಟೆಸ್ಟ್ ಮತ್ತು ಟಿ20 ಸರಣಿಗಳನ್ನ ಗೆದ್ದಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೂ ಪ್ರವೇಶ ಪಡೆದಿದೆ. ಮುಂದೆ, ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ಇದೇ ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಭಾರತದಲ್ಲೇ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
Published by: Vijayasarthy SN
First published: March 22, 2021, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories