Vinay BhatVinay Bhat
|
news18-kannada Updated:September 7, 2019, 12:59 PM IST
ಯುವರಾಜ್ ಸಿಂಗ್ (ಟೀಂ ಇಂಡಿಯಾ ಮಾಜಿ ಆಟಗಾರ)
ಬೆಂಗಳೂರು (ಸೆ. 07): ಒಂದು ಕಾಲದಲ್ಲಿ ಟೀಂ ಇಂಡಿಯಾ 4ನೇ ಕ್ರಮಾಂಕದ ಖಾಯಂ ಬ್ಯಾಟ್ಸ್ಮನ್ ಆಗಿದ್ದ ಯುವರಾಜ್ ಸಿಂಗ್ ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದ್ದರು. ಯುವಿಯನ್ನು ಕೈಬಿಟ್ಟ ನಂತರ 4ನೇ ಕ್ರಮಾಂಕದ ಸಮಸ್ಯೆ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂದಿಗೂ ಟೀಂ ಇಂಡಿಯಾ ಈ ತೊಂದರೆಯಿಂದ ಹೊರಬಂದಿಲ್ಲ.
ಸದ್ಯ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ಗೆ ಯುವಿ ರಿಪ್ಲೇ ಮಾಡಿದ್ದು ಹೊಸ ಸಂಚಲನ ಸೃಷ್ಟಿಸಿದೆ.
ನಿನ್ನೆಯಷ್ಟೆ ಮುಕ್ತಾಯಗೊಂಡ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ 5ನೇ ಏಕದಿನ ಪಂದ್ಯದಲ್ಲಿ ಭಾರತ 36 ರನ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಮಳೆ ಬಂದ ಕಾರಣ ಉಭಯ ತಂಡಗಳಿಗೆ 20 ಓವರ್ ನಿಗದಿ ಪಡಿಸಲಾಯಿತು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಭಾರತ ಎ 20 ಓವರ್ಗೆ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 204 ರನ್ ಬಾರಿಸಿತು.
ನಾಡಹಬ್ಬ ದಸರಾದಲ್ಲಿ ಚಿನ್ನದ ಹುಡುಗಿ; ಯುವ ದಸರೆಗೆ ಪಿ.ವಿ.ಸಿಂಧು ಚಾಲನೆ!
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೇವಲ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ 91 ರನ್ ಚಚ್ಚಿದರು. ಸಂಜು ಆಟ ನೋಡಿದ ಹರ್ಭಜನ್, 'ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನಾಗಿ ಸಂಜು ಸ್ಯಾಮ್ಸನ್ರನ್ನು ಯಾಕೆ ಆಡಿಸಬಾರದು?, ಇವರಲ್ಲಿ ಉತ್ತಮ ಟೆಕ್ನಿಕ್ ಇದೆ, ಅತ್ಯುತ್ತಮ ಆಟವಾಡುತ್ತಾರೆ' ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ರಿಪ್ಲೇ ಮಾಡಿರುವ ಯುವರಾಜ್ ಸಿಂಗ್, 'ಭಾರತದ ಟಾಪ್ ಆರ್ಡರ್ ತುಂಬಾನೇ ಬಲಿಷ್ಠವಾಗಿದೆ, ಅವರಿಗೆ ನಂಬರ್ 4 ಬ್ಯಾಟ್ಸ್ಮನ್ನ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು; ಟ್ವಿಟ್ಟರ್ನಲ್ಲಿ ಭಾರತೀಯರ ಬೇಸರ!
ಭಾರತ ಕಳೆದ ಕೆಲ ವರ್ಷಗಳಿಂದ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಟಗಾರರನ್ನು ಹುಡುಕುತ್ತಲೇ ಇದೆ. ಅನೇಕ ಬ್ಯಾಟ್ಸ್ಮನ್ಗಳನ್ನು ಈ ಜಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತಾದರು ಯಶಸ್ಸು ಸಿಗಲಿಲ್ಲ.
ಸದ್ಯ ಟೀಂ ಇಂಡಿಯಾದ ಹೊಸ ಬ್ಯಾಟಿಂಗ್ ಕೋಚ್ ವಿಕ್ರಮ್ ಸಿಂಗ್ ರಾಥೋಡ್ ಈ ಸಮಸ್ಯೆಯನ್ನು ಬಗೆ ಹರಿಸುವತ್ತ ಚಿತ್ತ ನೆಟ್ಟಿದ್ದಾರೆ. ’ಕಳೆದೆರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮನೀಷ್ ಪಾಂಡೆ ಕೂಡಾ ಇದ್ದಾರೆ. ಈ ಆಟಗಾರರು 4ನೇ ಕ್ರಮಾಂಕದಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬಲ್ಲರು' ಎಂದು ರಾಥೋಡ್ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಹೇಳಿದ್ದರು.
First published:
September 7, 2019, 12:57 PM IST