HOME » NEWS » Sports » CRICKET INDIA CRICKET TEAMS SCHEDULE FROM 2021 TO 2023 OUT ZP

Team India: 2023ರವರೆಗಿನ ವೇಳಾಪಟ್ಟಿ ಪ್ರಕಟ: ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ ಟೀಮ್ ಇಂಡಿಯಾ..!

2022ರ ನವೆಂಬರ್-ಡಿಸೆಂಬರ್ ವೇಳೆ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, 3 ಟಿ20 ಹಾಗೂ ಶ್ರೀಲಂಕಾ ವಿರುದ್ಧ 5 ಏಕದಿನ ಪಂದ್ಯಗಳನ್ನಾಡಲಿದೆ. ಫೆಬ್ರವರಿ-ಮಾರ್ಚ್ ನಡುವೆ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ 4 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯ ಆಡಲಿದೆ.

news18-kannada
Updated:February 8, 2021, 7:23 AM IST
Team India: 2023ರವರೆಗಿನ ವೇಳಾಪಟ್ಟಿ ಪ್ರಕಟ: ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ ಟೀಮ್ ಇಂಡಿಯಾ..!
Virat kohli
  • Share this:
ಭಾರತದಲ್ಲಿ ಕೋರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಇಂಗ್ಲೆಂಡ್ ವಿರುದ್ದದ ಸರಣಿಯೊಂದಿಗೆ ಮತ್ತೆ ಚಾಲನೆ ದೊರೆತಿದೆ. ಅಲ್ಲದೆ 2021 ರಿಂದ 2023ರೊಳಗೆ ಟೀಮ್ ಇಂಡಿಯಾ ಆಡಲಿರುವ ಪ್ರಮುಖ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯ ದಿನಾಂಕವನ್ನು ಸೂಚಿಸಲಾಗಿದ್ದು, ಅದರಂತೆ ಐಪಿಎಲ್ ಸೀಸನ್ 14 ಏಪ್ರಿಲ್-ಮೇ ನಡುವೆ ನಡೆಯಲಿದೆ.

ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಪ್ರಮುಖ ಸರಣಿಯನ್ನು ಟೀಮ್ ಇಂಡಿಯಾ ಆಡಲಿದ್ದು, ಹೀಗಾಗಿ ಮುಂದಿನ 3 ವರ್ಷಗಳ ಕಾಲ ಟೀಮ್ ಇಂಡಿಯಾ ನಾನ್ ಸ್ಟಾಪ್ ಕ್ರಿಕೆಟ್ ಆಡಲಿದೆ.

ಬಿಸಿಸಿಐ ಬಿಡುಗಡೆ ಮಾಡಿರುವ ಭಾರತದ ಮುಂಬರುವ ಪಂದ್ಯಾವಳಿಗಳ ವೇಳಾಪಟ್ಟಿ ಹೀಗಿದೆ:

  • 2021ರ ಏಪ್ರಿಲ್-ಮೇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್


  • 2021ರ ಜೂನ್-ಜುಲೈನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಶ್ರೀಲಂಕಾ ವಿರುದ್ಧ 3 ಏಕದಿನ, 5 ಟಿ20 ಹಾಗೂ ಏಷ್ಯಾ ಕಪ್.

  • 2021ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ 3 ಏಕದಿನ ಪಂದ್ಯಗಳು


  • 2021ರ ಜುಲೈ-ಸೆಪ್ಟೆಂಬರ್ ನಡುವೆ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.


  • 2021ರ ಅಕ್ಟೋಬರ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ 3 ಏಕದಿನ, 5 ಟಿ20 ಪಂದ್ಯಗಳು ನಡೆಯಲಿದೆ.


  • 2021ರ ಅಕ್ಟೋಬರ್-ನವೆಂಬರ್ ನಡುವೆ ಐಸಿಸಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.


  • 2021ರ ನವೆಂಬರ್-ಡಿಸೆಂಬರ್​ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್, 3 ಟಿ20 ಆಡಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್, 3 ಟಿ20 ಪಂದ್ಯಗಳನ್ನಾಡಲಿದೆ.


  • 2022ರ ಜನವರಿಯಿಂದ ಮಾರ್ಚ್​ ನಡುವೆ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ. ಹಾಗೆಯೇ ಇದೇ ವೇಳೆ ಶ್ರೀಲಂಕಾ ವಿರುದ್ಧ 3 ಟೆಸ್ಟ್, 3 ಟಿ20 ಆಡಲಿದೆ.


  • 2022ರ ಏಪ್ರಿಲ್ ನಿಂದ ಮೇ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಜರುಗಲಿದೆ.


  • 2022ರ ಜೂನ್​ನಲ್ಲಿ ಯಾವುದೇ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿಲ್ಲ.


  • 2022ರ ಜುಲೈ-ಆಗಸ್ಟ್ ನಡುವೆ ಇಂಗ್ಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ. ಅದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನು ಸಹ ಆಡಲಿದೆ.


  • 2022ರ ಸೆಪ್ಟೆಂಬರ್​ನಲ್ಲಿ ಏಷ್ಯಾ ಕಪ್ ನಡೆಯಲಿದೆ.


  • 2022ರ ಅಕ್ಟೋಬರ್ - ನವೆಂಬರ್ ನಡುವೆ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.


  • 2022ರ ನವೆಂಬರ್-ಡಿಸೆಂಬರ್ ವೇಳೆ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, 3 ಟಿ20 ಹಾಗೂ ಶ್ರೀಲಂಕಾ ವಿರುದ್ಧ 5 ಏಕದಿನ ಪಂದ್ಯಗಳನ್ನಾಡಲಿದೆ.


  • 2023ರ ಜನವರಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ.


  • 2023ರ ಫೆಬ್ರವರಿ-ಮಾರ್ಚ್ ನಡುವೆ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ 4 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ.

Published by: zahir
First published: February 8, 2021, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories