ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಿತಿ ಈಗ ಹೇಗಿದೆ?; ಬಿಸಿಸಿಐ ನೀಡಿತು ಸಿಹಿ ಸುದ್ದಿ!

Virat Kohli: ಭಾರತ ಕ್ರಿಕೆಟ್​ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಕೊಹ್ಲಿ ಕೈಗೆ ಪೆಟ್ಟಾಗಿತ್ತು. ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದ ಬೆನ್ನಲ್ಲೇ ಅವರು ಮೊದಲ ಪಂದ್ಯಕ್ಕೆ ಲಭ್ಯವಿರುವುದು ಅನುಮಾನ ಎನ್ನಲಾಗಿತ್ತು.

Rajesh Duggumane | news18
Updated:June 3, 2019, 10:11 AM IST
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಿತಿ ಈಗ ಹೇಗಿದೆ?; ಬಿಸಿಸಿಐ ನೀಡಿತು ಸಿಹಿ ಸುದ್ದಿ!
ವಿರಾಟ್ ಕೊಹ್ಲಿ
  • News18
  • Last Updated: June 3, 2019, 10:11 AM IST
  • Share this:
ಬೆಂಗಳೂರು (ಜೂ. 3): ವಿಶ್ವಕಪ್​ನಲ್ಲಿ ಮೊದಲ ಪಂದ್ಯ ಆಡುವುದಕ್ಕೂ ಮೊದಲೇ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ ಎನ್ನುವ ವಿಚಾರ ಆಘಾತ ಉಂಟು ಮಾಡಿತ್ತು. ಆದರೆ, ಈಗ ಬಿಸಿಸಿಐ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿರಾಟ್​ ಸದ್ಯ ಫಿಟ್​ ಆಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದಿದೆ.

ಭಾರತ ಕ್ರಿಕೆಟ್​ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಕೊಹ್ಲಿ ಕೈಗೆ ಪೆಟ್ಟಾಗಿತ್ತು. ತಕ್ಷಣ ಅವರಿಗೆ ಚಿಕಿತ್ಸೆ ನೀಡಿ, ಗಾಯಕ್ಕೆ ಬ್ಯಾಂಡೈಜ್ ಹಾಕಲಾಗಿತ್ತು. ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದ ಬೆನ್ನಲ್ಲೇ ಅವರು ಮೊದಲ ಪಂದ್ಯಕ್ಕೆ ಲಭ್ಯವಿರುವುದು ಅನುಮಾನ ಎನ್ನಲಾಗಿತ್ತು. ಆದರೆ, ಈಗ ನಿರಾಳವಾಗುವ ಮಾಹಿತಿಯೊಂದು ಸಿಕ್ಕಿದೆ.

“ವಿರಾಟ್​ ಬ್ಯಾಟಿಂಗ್​ ಪ್ರ್ಯಾಕ್ಟಿಸ್​ ಮಾಡುವಾಗ ಬಾಲ್​​ ಬಡಿದು ಗಾಯಗೊಂಡಿದ್ದರು. ಆದರೆ ಈಗ ಅವರು ಆರೋಗ್ಯವಾಗಿದ್ದಾರೆ. ಆ ಬಗ್ಗೆ ಚಿಂತೆ ಬೇಡ,” ಎಂದು ತಂಡದ ಮೂಲಗಳು ಪಿಟಿಐಗೆ ತಿಳಿಸಿದೆ.

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾದರೆ ಟೀಂ ಇಂಡಿಯಾ ಸ್ಥಿತಿ ಏನು?

ವಿಶ್ವಕಪ್​ಗಾಗಿ ಇಂಗ್ಲೆಂಡ್​ಗೆ ಕಾಲಿಡುವ ಮುನ್ನವೇ ಭಾರತಕ್ಕೆ ಇಂಜುರಿ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆ. ಐಪಿಎಲ್ ವೇಳೆ ಕೇದರ್ ಜಾಧವ್ ಕೂಡ ಗಾಯಗೊಂಡಿದ್ದರು. ಅವರು ವಿಶ್ವಕಪ್​ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ವಿಶ್ವಕಪ್​ಗೆ ಜಾಧವ್ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆಯಾದರೂ ಇನ್ನಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲೂ ಜಾಧವ್ ಕಣಕ್ಕಿಳಿಯಲಿಲ್ಲ. ಇನ್ನು ಮೊದಲ ಅಭ್ಯಾಸ ಪಂದ್ಯಕ್ಕೆ ಇಂಜುರಿಯಿಂದಾಗಿ ವಿಜಯ್ ಶಂಕರ್ ಕೂಡ ಹೊರಗುಳಿದಿದ್ದರು. ಭಾರತ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ