Rani Rampal: ‘ಖೇಲ್​ ರತ್ನ‘ ಪ್ರಶಸ್ತಿಗೆ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ನಾಮನಿರ್ದೇಶನ

India women’s hockey Captain Rani Rampal: ರಾಣಿ ರಾಂಪಾಲ್​​ 2016ರಲ್ಲಿ ‘ಅರ್ಜುನ ಪ್ರಶಸ್ತಿ‘ಗೆ ಮತ್ತು 2020ರಲ್ಲಿ ‘ಪದ್ಮಶ್ರೀ ಪ್ರಶಸ್ತಿ‘ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ರಾಣಿ  ರಾಂಪಾಲ್​ ಭಾರತದ ಪ್ರತಿಷ್ಠಿತ ರಾಜೀವ್​ ಗಾಂಧೀ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಣಿ ರಾಂಪಲ್​

ರಾಣಿ ರಾಂಪಲ್​

 • Share this:
  ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಲ್​ 2020ರ ‘ಖೇಲ್​ ರತ್ನ ಪ್ರಶಸ್ತಿ‘ಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರ ಜೊತೆಗೆ ವಂದನ ಕಟಾರಿಯಾ, ಮೊನಿಕಾ ಮತ್ತು ಪರುಷ ಹಾಕಿ ತಂಡದ ಆಟಗಾರ ಹರ್ಮನ್​​ಪ್ರೀತ್​ ಸಿಂಗ್​ ‘ಅರ್ಜುನ ಪ್ರಶಸ್ತಿ‘ಗೆ ಆಯ್ಕೆಯಾಗಿದ್ದಾರೆ.

  ಲೆಜೆಂಡ್ ಹಾಕಿ ಆಟಗಾರರಾದ ಆರ್​. ಪಿ ಸಿಂಗ್​ ಮತ್ತು ತುಷಾರ್​​ ಖಾಂಡ್ಕರ್​​​ ಅವರನ್ನು ಜೀವಮಾನದ ಸಾಧನೆಗಾಗಿ ನೀಡುವ ಮೇಜರ್​ ‘ಧ್ಯಾನ್​​​ ಚಂದ್‘​ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಅದರ ಜೊತೆಗೆ ತರಬೇತುದಾರರಾದ ಬಿ.ಜೆ ಕರಿಯಪ್ಪ ಮತ್ತು ರೋಮೇಶ್​ ಪಥಾನಿಯಾ ಅವರು ‘ದ್ರೋಣಾಚಾರ್ಯ‘ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

  ಭಾರತದ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ 2020ನೇ ವರ್ಷಕ್ಕೆ ಸಾಧನೆ ಮಾಡಿದ್ದ ಕ್ರೀಡಾಪಟುಗಳಿಂದ ಪ್ರಶಸ್ತಿಗೆ ಹೆಸರುಗಳನ್ನು ಆಹ್ವಾನಿಸಿತ್ತು.  2016ರ ಜನವರಿ 1 ರಿಂದ 2019ರ ಡಿಸೆಂಬರ್​​ 31ರವರೆಗೆ ಕಾಲಾವಧಿಯನ್ನು ನೀಡಿತ್ತು. ಅದರಂತೆ ಭಾರತದ ಹಾಕಿ ಆಟಗಾರ ಈ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ

  ರಾಣಿ ರಾಂಪಾಲ್​​ 2016ರಲ್ಲಿ ‘ಅರ್ಜುನ ಪ್ರಶಸ್ತಿ‘ಗೆ ಮತ್ತು 2020ರಲ್ಲಿ ‘ಪದ್ಮಶ್ರೀ ಪ್ರಶಸ್ತಿ‘ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ರಾಣಿ  ರಾಂಪಾಲ್​ ಭಾರತದ ಪ್ರತಿಷ್ಠಿತ ರಾಜೀವ್​ ಗಾಂಧೀ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಈ ಬಗ್ಗೆ ಮಾತನಾಡಿದ ಭಾರತದ ಹಾಕಿ ತಂಡದ ಅಧ್ಯಕ್ಷ ಮೊಹಮ್ಮದ್​ ಮುಸ್ತಾಕ್​​​ ಅಹ್ಮದ್​​, ಸರ್ದಾರ್​ಸಿಂಗ್​​ ರಾಜೀವ್​ ಗಾಂಧೀ ಖೇಲ್​ ರತ್ನ ಪ್ರಶಸ್ತಿಯನ್ನು ಗೆದ್ದ ಕೊನೆಯ ಹಾಕಿ ಆಟಗಾರ ಎಂದರು. ರಾಣಿ ರಾಂಪಾಲ್​​ ಭಾರತದ ಹಾಕಿತಂಡದಲ್ಲಿ ಸಾಕಷ್ಟು ಪ್ರಸಿದ್ಧಿಗಳಿಸಿದ್ದಾರೆ. ಹಾಗಾಗಿ ಭಾರತ ಸರ್ಕಾರ ನೀಡುವ ಈ ಉನ್ನತ ಪ್ರಶಸ್ತಿಗೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದರು.

  ಇನ್ನೂ 2019ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಂದನಾ ಕಟಾರಿಯಾ, ಮೋನಿಕಾ ಮತ್ತು ಹರ್ಮನ್​ ಪ್ರೀತ್​ ಸಿಂಗ್​​ ಅವರ  ಹೆಸರು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ನಮ್ಮ ಸಂತೋಷವನ್ನು ಹೆಚ್ಚಿಸಿದೆ ಎಂದು ಮೊಹಮ್ಮದ್​ ಮುಸ್ತಾಕ್​​​ ಹೇಳಿದರು.

  ಆರ್​ಪಿ ಸಿಂಗ್​ ಮತ್ತು ತುಷಾರ್​​ ಖಾಂಡ್ಕರ್​​ ಅವರು ಜೀವಮಾನದ ಸಾಧನೆಗಾಗಿ ‘ಮೇಜರ್​ ಧ್ಯಾನ್​ಚಂದ್​​ ಪ್ರಶಸ್ತಿ‘ಗೆ ನಾಮ ನಿರ್ದೇಶನಗೊಂಡಿದ್ದಾರೆ. ‘ದ್ರೋಣಾಚಾರ್ಯ‘ ಪ್ರಶಸ್ತಿಗೆ ಹಾಕಿ ತರಬೇತುದಾರರಾದ ಬಿ.ಜೆ ಕರಿಯಪ್ಪ ಮತ್ತು ರೋಮೇಶ್​​ ಪಥಾನಿಯಾ ಭಾಜನರಾಗಿದ್ದಾರೆ. ಇವರಿಬ್ಬರು ಹಾಕಿ ತರಬೇತುದಾರರಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಾಗಿ ಹಾಕಿ ತಂಡದ ಹೆಸರುಗಳನ್ನು ಶಿಫಾರಸ್ಸು ಮಾಡಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ ಎಂದು ಅಧ್ಯಕ್ಷ ಮೊಹಮ್ಮದ್​​. ಮುಸ್ತಾಕ್​​​ ಅಹ್ಮದ್ ಹೇಳಿದರು.

   

  ‘ಖೇಲ್​ ರತ್ನ‘ ಪ್ರಶಸ್ತಿಗೆ ಹಿಟ್​ ಮ್ಯಾನ್​ ರೋಹಿತ್​​ ನಾಮನಿರ್ದೇಶನ; ಅರ್ಜುನ ಪ್ರಶಸ್ತಿಗೆ ಈ ಮೂರು ಪ್ಲೇಯರ್ಸ್

   
  First published: