ಭಾರತೀಯ ಕ್ರಿಕೆಟ್ ತಂಡದ ಬೌಲರ್ (Team India Bowler), ಎಸ್ ಶ್ರೀಶಾಂತ್ (S Sreesanth ) ಎಂದೇ ಖ್ಯಾತರಾಗಿರುವ ಶಾಂತಕುಮಾರನ್ ನಾಯರ್‌ಗೆ ಇಂದು ಹುಟ್ಟುಹಬ್ಬದ (Birthday) ಸಂಭ್ರಮ. 40ನೇ ವಸಂತಕ್ಕೆ ಕಾಲಿಡುತ್ತಿರುವ ಶ್ರೀಶಾಂತ್ ಭಾರತೀಯ ಕ್ರಿಕೆಟ್ (Cricket) ಲೋಕದಲ್ಲಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡವರು. ಕ್ರಿಕೆಟ್ ಅಷ್ಟೇ ಅಲ್ಲದೇ ನಟನೆಯಲ್ಲೂ (Acting) ಸಕ್ರೀಯರಾಗಿರುವ ಶ್ರೀಶಾಂತ್ ಕೆಲವು ಸಿನಿಮಾಗಳಲ್ಲಿ ಸಹ ತಮ್ಮ ನಟನೆಯ ಕಲೆಯನ್ನು ತೋರಿಸಿದ್ದಾರೆ.
ಆದರೆ ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ನೊಂದಿಗೆ ಎಲ್ಲಾ ಮಾದರಿಗಳಿಗೆ ಶ್ರೀಶಾಂತ್ ನಿವೃತ್ತಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ವಿವಾದ
ಕ್ರಿಕೆಟ್, ಸಿನಿಮಾ, ವಿವಾದ ಮ್ಯಾಚ್ ಫಿಕ್ಸಿಂಗ್ ಆರೋಪ, ಹರ್ಭಜನ್ ಸಿಂಗ್‌ರಿಂದ ಕಪಾಳ ಮೋಕ್ಷ ಹೀಗೆ ಹತ್ತಾರು ವಿಚಾರಗಳಿಂದ ಶ್ರೀಶಾಂತ್ ಸುದ್ದಿಯಲ್ಲಿದ್ದವರು. ಇವೆಲ್ಲದರ ಆಚೆ ಯುವ ಆಟಗಾರ ಸಾಕಷ್ಟು ಪಂದ್ಯಗಳಲ್ಲಿ ತಮ್ಮ ಅಗ್ರೆಸಿವ್ ಬೌಲಿಂಗ್‌ನಿಂದ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಟೀಮ್ ಇಂಡಿಯಾ ಪರ ಆಡಿದ ಫೇಮಸ್ ಫಾಸ್ಟ್ ಬೌಲರ್‌ಗಳಲ್ಲಿ ಎಸ್.ಶ್ರೀಶಾಂತ್ ಒಬ್ಬರು.ಬೌಲಿಂಗ್‌ಗಿಂತ ಹೆಚ್ಚಾಗಿ, ವಿವಾದಗಳಿಂದಲೇ ಪ್ರಸಿದ್ಧರಾಗಿದ್ದರು
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಶಾಂತ್ ಬಗ್ಗೆ ಕೆಲವು ಗೊತ್ತಿರದ ವಿಚಾರಗಳ ಬಗ್ಗೆ ನಾವಿಲ್ಲಿ ತಿಳಿಯೋಣ.
* ಶ್ರೀಶಾಂತ್ ಜನನ
ಕೇರಳದ ಕೋತಮಂಗಲಂನಲ್ಲಿ ಸಂತಕುಮಾರನ್ ನಾಯರ್ ಮತ್ತು ಸಾವಿತ್ರಿ ದೇವಿ ದಂಪತಿಯ ಪುತ್ರ. ಲೆಗ್-ಸ್ಪಿನ್ನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀಶಾಂತ್ಗೆ ಅನಿಲ್ ಕುಂಬ್ಳೆಯೇ ರೋಲ್ ಮಾಡೆಲ್. ಶ್ರೀಶಾಂತ್ಗೆ ಕುಟುಂಬದವರು ಮತ್ತು ಸ್ನೇಹಿತರು ಪ್ರೀತಿಯಿಂದ "ಗೋಪು" ಎಂದು ಕರೆಯುತ್ತಾರಂತೆ.
ಇದನ್ನೂ ಓದಿ: ಇಬ್ಬರು ಹುಡುಗಿಯರ ಮುದ್ದಿನ ಗೆಳೆಯ ಗಿಲ್, ತನಗಿಂತ ದೊಡ್ಡವರ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ ಟೀಂ ಇಂಡಿಯಾ ಯಂಗ್ ಪ್ಲೇಯರ್
* ಕ್ರಿಕೆಟ್ ಜೀವನ
ಯಾರ್ಕರ್‌ನಲ್ಲಿ ಪರಿಣಿತಿ ಹೊಂದಿದ್ದ ಶೀಶಾಂತ್ ಒಂದೊಳ್ಳೆ ಬೌಲರ್ ಆಗಿ ತಂಡದಲ್ಲಿ ಗುರುತಿಸಿಕೊಂಡರು. ಅಷ್ಟೇ ಅಲ್ಲ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕೇರಳ ಮೂಲದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ದಾಖಲೆ ಮಾಡಿದ ಕೇರಳದ ಮೊದಲ ಬೌಲರ್ ಕೂಡ ಹೌದು.
- 2021 ರಲ್ಲಿ, ಸೈಯದ್ ಅಲಿ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳವನ್ನು ಪ್ರತಿನಿಧಿಸಿದರು. ಶ್ರೀಶಾಂತ್ ಎರಡು ವಿಶ್ವಕಪ್ ವಿಜೇತ ಭಾರತ ತಂಡಗಳ ಭಾಗವಾಗಿದ್ದಾರೆ ಮತ್ತು 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ಸ್ ಮತ್ತು 2007 ಐಸಿಸಿ ಟಿ 20 ವಿಶ್ವಕಪ್ ಆಡಿದ್ದಾರೆ.
* ವಿಕೆಟ್ ಕಬಳಿಸುತ್ತಿದ್ದ ಫಾಸ್ಟ್ ಬೌಲರ್
ಶ್ರೀಶಾಂತ್ ಇದುವರೆಗೆ 27 ಟೆಸ್ಟ್ ಪಂದ್ಯಗಳು, 53 ODIಗಳು ಮತ್ತು 10 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. ಶ್ರೀಶಾಂತ್ ಟೆಸ್ಟ್ ಪಂದ್ಯದಲ್ಲಿ 87 ವಿಕೆಟ್‌ಗಳು, ಏಕದಿನ ಪಂದ್ಯದಲ್ಲಿ 75 ವಿಕೆಟ್‌ಗಳು ಮತ್ತು ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿ ಕೊಂಡಿದ್ದಾರೆ.
* ಐಪಿಎಲ್‌ನಲ್ಲಿ ಶೀಶಾಂತ್
ಕೇರಳದ ಕ್ರಿಕೆಟಿಗ, ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್, ಕೊಚ್ಚಿ ಟಸ್ಕರ್ಸ್ ಮತ್ತು ಕಿಂಗ್ಸ್ XI ಪಂಜಾಬ್‌ಗಾಗಿ ಭಾಗವಹಿಸಿದ್ದಾರೆ. ಶ್ರೀಶಾಂತ್ ಮುಂಬರುವ ಆಟಗಾರರ ಹರಾಜಿಗೆ ತಮ್ಮ ಆರಂಭಿಕ ಬೆಲೆಯನ್ನು 75 ಲಕ್ಷ ರೂ.
* ಶ್ರೀಶಾಂತ್ ಸಿನಿಮಾ ಜೀವನ
ಕ್ರಿಕೆಟ್ ಹೊರತಾಗಿ ಸಿನಿಮಾ, ಉದ್ಯಮದಲ್ಲೂ ಶ್ರೀಶಾಂತ್ ತೊಡಗಿಸಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಶ್ರೀಶಾಂತ್ ʼಎಸ್ 36ʼ ಎಂಬ ಸ್ಪೋರ್ಟ್ಸ್ ಸ್ಟೋರ್‌ನ ಮಾಲೀಕತ್ವ ಹೊಂದಿದ್ದಾರೆ. ಶ್ರೀಶಾಂತ್ ಬಿಗ್ ಬಾಸ್ 12 ಮತ್ತು ಜಲಕ್ ದಿಖ್ಲಾ ಜಾ 7 ಸೇರಿದಂತೆ ಹಲವಾರು ಟಿವಿಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
- ಕಾತುವಕುಲ ರೆಂಡು ಕಾದಲ್, ಡಿಪ್ಪಂ ದಪ್ಪಂ ಚಿತ್ರದ ಹಾಡಿನಲ್ಲಿ ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ