ಹರ್ಷಿತ್ ಸೇಠ್, 6 ಬಾಲ್​ಗೆ 6 ವಿಕೆಟ್ ಪಡೆದ 16 ವರ್ಷದ ಸ್ಪಿನ್ನರ್; ಪಾಕಿಸ್ತಾನೀ ತಂಡದ ವಿರುದ್ಧ ಸಾಧನೆ

Junior cricketer Harshit Seth record feat- ಯುಎಇ ಜೂನಿಯರ್ ತಂಡದ ಟ್ರಯಲ್​ನಲ್ಲಿರುವ ಹರ್ಷಿತ್ ಸೇಠ್ ದುಬೈನಲ್ಲಿ ನಡೆದ ಜಾಗತಿಕ ಕ್ಲಬ್ ಟೂರ್ನಿಯಲ್ಲಿ ಪಾಕಿಸ್ತಾನೀ ತಂಡವೊಂದರ ವಿರುದ್ಧ ಒಂದೇ ಓವರ್ನಲ್ಲಿ 6 ವಿಕೆಟ್ ಕಿತ್ತಿದ್ದಾರೆ.

ಹರ್ಷಿತ್ ಸೇಠ್

ಹರ್ಷಿತ್ ಸೇಠ್

 • Share this:
  ಬೆಂಗಳೂರು: ದುಬೈನ ಈಡನ್ ಗಾರ್ಡನ್ಸ್ ಗ್ರೌಂಡ್​ನಲ್ಲಿ ನಡೆದ ಕರ್ವಾಲ್ ಗ್ಲೋಬಲ್ ಟ್ವೆಂಟಿ20 ಜೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮೂಲದ ಹರ್ಷಿತ್ ಸೇಠ್ ಒಂದೇ ಓವರ್​ನಲ್ಲಿ 6 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅಜ್ಮನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿಯಲ್ಲಿ ದುಬೈ ಕ್ರಿಕೆಟ್ ಕೌನ್ಸಿಲ್​ನ ಅಂಡರ್-19 ತಂಡದ ಪರ ಆಡಿದ ಹರ್ಷಿತ್ ಸೇಠ್ ಪಾಕಿಸ್ತಾನದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡದ ವಿರುದ್ಧ ಪಂದ್ಯದಲ್ಲಿ ಈ ದಾಖಲೆ ಬೌಲಿಂಗ್ ಮಾಡಿದ್ಧಾರೆ. ನವೆಂಬರ್ 28ರಂದು ಪಂದ್ಯ ನಡೆದಿದ್ದು ಈ ವಿಚಾರ ಭಾರತೀಯ ಮಾಧ್ಯಮಗಳಿಗೆ ತಡವಾಗಿ ಬೆಳಕಗೆ ಬಂದಿದಂತಿದೆ.

  ಆ ಪಂದ್ಯದಲ್ಲಿ ಹರ್ಷಿತ್ ಸೇಠ್ ಅವರು ಆರು ಬಾಲ್​ನಲ್ಲಿ ಆರು ವಿಕೆಟ್ ಪಡೆದದ್ದೂ ಸೇರಿ ಒಟ್ಟು 8 ವಿಕೆಟ್ ಕಬಳಿಸಿರು. ಇವರ ಸ್ಪಿನ್ ಗಾಳಕ್ಕೆ ತರಗೆಲೆಗಳಂತೆ ಉದುರಿಹೋದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡ ಕೇವಲ 44 ರನ್​ಗೆ ಆಲೌಟ್ ಆಯಿತು.

  ಬೇರೆ ಯಾರು ಮಾಡಿದ್ದಾರೆ ಈ ಸಾಧನೆ?

  “ಇಲ್ಲಿ ಡಬಲ್ ಹ್ಯಾಟ್ರಿಕ್ ಸಾಧನೆಯನ್ನು ಯಾರೂ ಮಾಡಿದ್ದಿಲ್ಲ. ನಾನು ಅಧಿಕೃತ ಪಂದ್ಯವೊಂದರಲ್ಲಿ ಈ ದಾಖಲೆ ಮಾಡಿರುವುದಕ್ಕೆ, ಅದರಲ್ಲೂ ಪ್ರವಾಸೀ ಪಾಕಿಸ್ತಾನೀ ತಂಡದ ವಿರುದ್ಧ ಮಾಡಿರುವುದಕ್ಕೆ ಖುಷಿ ಆಗುತ್ತಿದೆ” ಎಂದು 16 ವರ್ಷದ ಹರ್ಷಿತ್ ಸಂತಸ ವ್ಯಕ್ತಪಡಿಸಿದ್ದಾರೆ.

  ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಾರೂ ಕೂಡ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ. ಲಸಿತ್ ಮಾಲಿಂಗ 4 ಬಾಲ್​ಗೆ 4 ವಿಕೆಟ್ ಪಡೆದಿದ್ದರು. ಕ್ಲಬ್ ಕ್ರಿಕೆಟ್ ಮತ್ತು ಸ್ಥಳೀಯ ಕ್ರಿಕೆಟ್​ನಲ್ಲಿ ತೀರಾ ಅಪರೂಪಕ್ಕೆ ಈ ಸಾಧನೆ ಬಂದಿವೆ. ಆಸ್ಟ್ರೇಲಿಯಾದ ಅಲೆಡ್ ಕ್ಯಾರೀ ಅವರು 2017ರಲ್ಲಿ ಸ್ಥಳೀಯ ಕ್ಲಬ್ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 6 ವಿಕೆಟ್ ಕಿತ್ತಿದ್ದರು.

  1930ರಲ್ಲಿ ಅಂದಿನ ಮದ್ರಾಸ್​ನಲ್ಲಿ ವೈ ಎಸ್ ರಾಮಸ್ವಾಮಿ ಅವರು ಶಾಲಾ ಕ್ರಿಕೆಟ್ ಟೂರ್ನಿಯೊಂದರಲ್ಲಿ ಆರು ಬಾಲ್​ಗೆ ಆರು ವಿಕೆಟ್ ಕಬಳಿಸಿದ್ದರಂತೆ. 1951ರಲ್ಲಿ ಇಂಗ್ಲೆಂಡ್​ನ ಜಿ ಸಿರೆಟ್ ಕೂಡ ಈ ದಾಖಲೆ ಬರೆದಿದ್ದರೆನ್ನಲಾಗಿದೆ.

  ದೆಹಲಿ ಸಂಜಾತ ಹರ್ಷಿತ್ ಸೇಠ್:

  ದೆಹಲಿಯಲ್ಲಿ ಹುಟ್ಟಿದ ಹರ್ಷಿತ್ ಸೇಠ್, ಪುಟ್ಟ ಹುಡುಗನಿದ್ದಾಗಲೇ ದುಬೈಗೆ ಕುಟುಂಬದ ಜೊತೆ ಹೋಗಿ ನೆಲಸಿದ್ದಾರೆ. ಓದಿ ಬೆಳೆದಿದ್ದೆಲ್ಲಾ ದುಬೈನಲ್ಲೇ. ಯುಎಇ ಅಂಡರ್-16 ತಂಡದ ಪರ ಅವರು ಆಡಿದ್ಧಾರೆ. ಈಗ ಯುಎಇ ಅಂಡರ್-19 ತಂಡದ ಕ್ಯಾಂಪ್​ನಲ್ಲಿ ಅಭ್ಯಾಸ ನಡೆಸುತ್ತಿದ್ಧಾರೆ. ಕಿರಿಯರ ವಿಶ್ವಕಪ್​ನಲ್ಲಿ ಯುಎಇ ತಂಡದ ಪರ ಆಡುವುದು ಅವರ ಆಸೆ. ಮುಂದೊಂದು ದಿನ ಯುಎಇ ರಾಷ್ಟ್ರೀಯ ತಂಡದ ಪರ ಆಡಿ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಮೂಡಿಸುವ ಅದಮ್ಯ ಆಸೆ ಹೊಂದಿದ್ಧಾರೆ ಹರ್ಷಿತ್ ಸೇಠ್.
  Published by:Vijayasarthy SN
  First published: