Ind Vs WI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು : ವೆಸ್ಟ್ ಇಂಡೀಸ್ ಗೆ ವೈಟ್ ವಾಶ್ ಮುಖಭಂಗ

India Beat West Indies: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 265 ರನ್ ಗೆ ಆಲೌಟ್ ಆಯಿತು. ಇನ್ನು ಭಾರತ ನೀಡಿದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 169 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವೈಟ್ ವಾಶ್ ಮುಖಭಂಗ ಅನುಭವಿಸಿದೆ

3ನೇ ಏಕದಿನ ಪಂದ್ಯ

3ನೇ ಏಕದಿನ ಪಂದ್ಯ

 • Share this:
  ಪ್ರವಾಸಿ ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೂರನೇ ಏಕದಿನ (3rd ODI ) ಪಂದ್ಯದಲ್ಲಿ (Match) ಟೀಂ ಇಂಡಿಯಾ (Team India) 96 ರನ್ ಗಳಿಂದ ಗೆಲುವು ಸಾಧಿಸಿದ್ದು ವಿಂಡೀಸ್ ವಿರುದ್ಧ ವೈಟ್ ವಾಶ್ (White wash)ಸಾಧನೆ ಮಾಡಿದೆ. ಅಹಮದಾಬಾದ್ ನಲ್ಲಿ (Ahmadabad) ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಟಾಸ್ (Toss)ಗೆದ್ದು ಮೊದಲು ಬ್ಯಾಟ್ (Bat) ಮಾಡಿದ ಭಾರತ (India )50 ಓವರ್ (Over)ಗಳಲ್ಲಿ 265 ರನ್ ಗೆ ಆಲೌಟ್ ಆಯಿತು. ಇನ್ನು ಭಾರತ ನೀಡಿದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 169 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವೈಟ್ ವಾಶ್ ಮುಖಭಂಗ ಅನುಭವಿಸಿದೆ.

  ವೆಸ್ಟ್ ಇಂಡೀಸ್ ಪಾಲಿಗೆ ಕೆಟ್ಟ ಸರಣಿ

  ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಷ್ ಅವಮಾನ ಎದುರಿಸಿದ್ದ ಭಾರತ ತಂಡ, ಒಂದು ತಿಂಗಳ ಒಳಗಾಗಿಯೇ ವೆಸ್ಟ್ ಇಂಡೀಸ್ ತಂಡವನ್ನು ತವರಿನಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಕಹಿ ನೆನಪುಗಳನ್ನು ಅಳಿಸಿ ಹಾಕಿದೆ. ಇನ್ನು ಮಾಜಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಪಾಲಿಗೆ ಏಕದಿನ ಮಾದರಿಯಲ್ಲಿ ಮತ್ತೊಂದು ಕೆಟ್ಟ ಸರಣಿ ಸೋಲು ಇದಾಗಿದೆ.

  ಇದನ್ನೂ ಓದಿ: ಅಹಮದಾಬಾದ್ ಫ್ರಾಂಚೈಸಿ ಇದೀಗ ಗುಜರಾತ್ ಟೈಟನ್ಸ್

  ಭಾರತದ ಪರವಾಗಿ ರೋಹಿತ್ ಶರ್ಮ 13, ಶಿಖರ್ ಧವನ್ 10, ವಿರಾಟ್ ಕೊಹ್ಲಿ 0, ಶ್ರೇಯಸ್ ಅಯ್ಯರ್ 80, ರಿಷಬ್ ಪಂತ್ 56, ಸೂರ್ಯಕುಮಾರ ಯಾದವ್ 6, ವಾಷಿಂಗ್ಟನ್ ಸುಂದರ್ 33, ದೀಪಕ್ ಚಹರ್ 38, ಕುಲದೀಪ್ ಯಾದವ್ 5, ಮಹಮದ್ ಶಮಿ 4, ಪ್ರಸಿದ್ಧ ಕೃಷ್ಣ ಅಜೇಯ 0 ರನ್ ಗಳಿಸಿದರು. ವಿಂಡೀಸ್ ಪರವಾಗಿ ಎ. ಜೋಸೆಫ್ 2, ಜೇಸನ್ ಹೋಲ್ಡರ್ 4, ಹೇಡನ್ ವಾಲ್ಶ್ 2 ವಿಕೆಟ್ ಪಡೆದರು.

  ಬೌಲಿಂಗ್ ನಲ್ಲೂ ಭಾರತದ ಪ್ರಾಬಲ್ಯ

  ಇನ್ನು ಬೌಲಿಂಗ್ ನಲ್ಲಿ ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಪ್ರಶಾಂತ್ ಕೃಷ್ಣ ಮತ್ತು ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡಿದರು. ಸಿರಾಜ್ ಮತ್ತು ಕೃಷ್ಣ ತಲಾ 3 ವಿಕೆಟ್ ಪಡೆದರು. ಕುಲದೀಪ್, ದೀಪಕ್ ಚಹಾರ್ ತಲಾ 2 ವಿಕೆಟ್ ಪಡೆದರು.

  ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ 34 ಮತ್ತು ಓಡಿನ್ ಸ್ಮಿತ್ 36 ರನ್ ಗಳಿಸಿದರು. ಟೀಂ ಇಂಡಿಯಾದ ಬೌಲಿಂಗ್ ಮುಂದೆ ಬೇರೆ ಯಾವ ಬ್ಯಾಟ್ಸ್ ಮನ್​ಗೂ ನಿಲ್ಲಲಾಗಲಿಲ್ಲ.

  ಇದನ್ನೂ ಓದಿ: ಇಂದು ನಾರಾಯಣ ಹೆಲ್ತ್ ಸಿಟಿಗೆ ದಾಖಲಾಗಿದ್ದ ದಾದಾ, ಡಾ.ದೇವಿ ಶೆಟ್ಟಿ ತಂಡದಿಂದ ಗಂಗೂಲಿಗೆ ಟ್ರೀಟ್​ಮೆಂಟ್​!

  15ನೇ ಬಾರಿಗೆ ಡಕೌಟ್ ಆದ ವಿರಾಟ್ ಕೊಹ್ಲಿ

  ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯದಲ್ಲೂ ಕೊಹ್ಲಿ ಮುಗ್ಗರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಗಳಿಸಿದ್ದು ಕೇವಲ 8 ರನ್ ರನ್‌, ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್‌ 18 ರನ್‌ಗೆ ವಿಕೆಟ್ ಒಪ್ಪಿಸಿದ್ರು, ಇದೀಗ ಮೂರನೇ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 15 ಬಾರಿ ಡಕೌಟ್ ಆಗಿದ್ದಾರೆ. ಇದರೊಂದಿಗೆ ಕೊಹ್ಲಿ ಅತಿ ಹೆಚ್ಚು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಶೂನ್ಯ ಸುತ್ತಿದ್ದ ವಿರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾರನ್ನ ಹಿಂದಿಕ್ಕಿದ್ದಾರೆ.

  ಸೆಹ್ವಾಗ್ ಮತ್ತು ರೈನಾ ಇದುವರೆಗೆ 14 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದ್ರೆ ಒಟ್ಟಾರೆ ಎಲ್ಲಾ ಫಾರ್ಮೆಟ್‌ ನಿಂದ ಸಚಿನ್ ತೆಂಡೂಲ್ಕರ್ 20 ಬಾರಿ ಶೂನ್ಯಕ್ಕೆ ಔಟಾಗಿ ಅಗ್ರಸ್ಥಾನದಲ್ಲಿದ್ದಾರೆ. ಯುವರಾಜ್ ಸಿಂಗ್ 18 ಅಂಕಗಳೊಂದಿಗೆ ಎರಡನೇ ಮತ್ತು ಸೌರವ್ ಗಂಗೂಲಿ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ..
  Published by:ranjumbkgowda1 ranjumbkgowda1
  First published: