India vs West Indies: 2ನೇ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ, 2-0 ಅಂತರದಿಂದ ಸರಣಿ ಕೈ ವಶ

India vs West Indies: ಸೂರ್ಯಕುಮಾರ್ ಯಾದವ್ ಇದುವರೆಗೆ 6 ಏಕದಿನ ಪಂದ್ಯಗಳನ್ನಾಡಿದ್ದು, ಆರೂ ಪಂದ್ಯಗಳಲ್ಲಿ ಅವರು 30 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

2ನೇ ಏಕದಿನ ಪಂದ್ಯ

2ನೇ ಏಕದಿನ ಪಂದ್ಯ

 • Share this:
  ಕನ್ನಡಿಗ(Kannadiga) ಪ್ರಸಿದ್ಧ ಕೃಷ್ಣ(Prasid Krishna) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಟೀಂ ಇಂಡಿಯಾ(Team India) ವೆಸ್ಟ್ ಇಂಡೀಸ್(West Indies) ತಂಡವನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿದೆ. ಅಹ್ಮದಾಬಾದ್ ನಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿಯನ್ನು 44 ರನ್ ಗಳಿಂದ ಮಣಿಸಿ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಟಾಸ್(Toss) ಗೆದ್ದ ವೆಸ್ಟ್‌ ಇಂಡೀಸ್‌ಫೀಲ್ಡಿಂಗ್  (Fielding) ಆಯ್ಕೆ ಮಾಡಿಕೊಂಡಿತು. ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ ಗುರಿ ನೀಡಿತ್ತು. ಟೀಂ ಇಂಡಿಯಾ ನೀಡಿದ 238 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ವಿಂಡೀಸ್ 46 ಓವರ್‌ಗಳಲ್ಲಿ 193 ರನ್‍ಗಳಿಗೆ ಸರ್ವಪತನ ಕಂಡು ಪರಾಜಯಗೊಂಡಿತು.

  ಸೂರ್ಯಕುಮಾರ್ ಯಾದವ್ ಅರ್ಧ ಶತಕ..

  ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಟೀಂ
  ರೋಹಿತ್ ಶರ್ಮಾ (08 ಎಸೆತಗಳಲ್ಲಿ 5 ರನ್) ರಿಷಭ್ ಪಂತ್ (34 ಎಸೆತಗಳಲ್ಲಿ 18 ರನ್) ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದರು, ಇನ್ ವಿರಾಟ್ ಕೊಹ್ಲಿ ಸಹ 18 ರನ್ ಗಳಿಸಿ ಔಟ್ ಆದ್ರೂ ಮೂರನೇ ಕ್ರಮಾಂಕದಲ್ಲಿ ಬಂದ ಕೆ.ಎಲ್ ರಾಹುಲ್ 49 ರನ್ (48 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 64 ರನ್ (83 ಎಸೆತ, 5 ಬೌಂಡರಿ) ನೆರವಿನಿಂದ ಆರಂಭಿಕ ಆಘಾತದಿಂದ ಚೇತರಿಕೆ ಕಂಡಿತು. ಕೆಳ ಕ್ರಮಾಂಕದಲ್ಲಿ ದೀಪಕ್ ಹೂಡಾ 29 ರನ್ (25 ಎಸೆತ, 2 ಬೌಂಡರಿ) ಮತ್ತು ವಾಷಿಂಗ್ಟ್‌ನ್ ಸುಂದರ್ 24 ರನ್ (41 ಎಸೆತ, 1 ಬೌಂಡರಿ) ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿತು.

  ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿನಲ್ಲಿ ಶಾರುಖ್ ಖಾನ್ ಖರೀದಿಗೆ ಕಣ್ಣಿಟ್ಟಿದೆ ಈ 3 ತಂಡ

  ಭಾರತೀಯ ಬೌಲರ್ ಗಳಿಗೆ ಬೆದರಿದ ವೆಸ್ಟ್ ಇಂಡೀಸ್

  ಇನ್ನು ಭಾರತದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರ ಶಾಯ್ ಹೋಪ್ 27 ರನ್ (54 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು ನಂತರ ವಿಕೆಟ್ ಕಳೆದುಕೊಂಡು ಸಾಗಿದ ವಿಂಡೀಸ್ ತಂಡಕ್ಕೆ ಶಮರ್ ಬ್ರೂಕ್ಸ್ ಆಸರೆಯಾದರು. ಆದರೆ 44 ರನ್(64 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿದ ವೇಳೆ ದೀಪಕ್ ಹೂಡಾ ದಾಳಿಯಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ನಂತರ ಕೆಳ ಕ್ರಮಾಂಕದಲ್ಲಿ ಅಕೇಲ್ ಹೋಸೇನ್ 34 ರನ್ (52 ಎಸೆತ, 3 ಬೌಂಡರಿ) ಮತ್ತು ಓಡನ್ ಸ್ಮಿತ್ 24 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‍ ಬೀಸಲು ವಿಫಲರಾದರು

  ಕನ್ನಡಿಗ ಪ್ರಸಿದ್ಧ್ ಕೃಷ್ಣ ಅಬ್ಬರ

  ಇನ್ನು ವೆಸ್ಟ್ ಇಂಡಿಸ್ ವಿರುದ್ಧ ಭಾರತೀಯ ಬೌಲರ್ ಗಳು ಆರಂಭದಿಂದಲೇ ನಿಯಂತ್ರಣ ಸಾಧಿಸಿದರು.  ಭಾರತದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ 38 ರನ್ ನೀಡಿ 1 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 2 ವಿಕೆಟ್ ಕಬಳಿಸಿ 41 ರನ್ ನೀಡಿದರು. ಪ್ರಸಿದ್ಧ್ ಕೃಷ್ಣ 3 ಮೇಡಿನ್ ಮಾಡಿ 4 ವಿಕೆಟ್ ಪಡೆದು 12 ರನ್ ನೀಡುವ ಮೂಲಕ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

  ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೊಂದಾಯಿಸಿ ಕೊಂಡಿರುವ ಹಿರಿಯ ಆಟಗಾರರು ಯಾರು ಗೊತ್ತಾ?

  ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

  ಸೂರ್ಯಕುಮಾರ್ ಯಾದವ್ ಇದುವರೆಗೆ 6 ಏಕದಿನ ಪಂದ್ಯಗಳನ್ನಾಡಿದ್ದು, ಆರೂ ಪಂದ್ಯಗಳಲ್ಲಿ ಅವರು 30 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಅವರು 6 ಪಂದ್ಯಗಳಲ್ಲಿ 31*, 53, 40, 39, 34* ಮತ್ತು 64 ರನ್ ಗಳಿಸಿದ್ದಾರೆ. ಈ ಮೂಲಕ ಪದಾರ್ಪಣೆ ಪಂದ್ಯದ ಬಳಿಕ ಆಡಿದ 6 ಪಂದ್ಯಗಳಲ್ಲೂ 30 ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
  Published by:ranjumbkgowda1 ranjumbkgowda1
  First published: