Ind Vs WI: ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ

T-20 Cricket: ಇಶಾನ್ ಔಟ್ ಆದ ಬಳಿಕ ಬಂದ್ ಸೂರ್ಯ ಅಮೋಘ ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 31 ಎಸೆತದಲ್ಲಿ 65 ರನ್‌ ಕಲೆಹಾಕಿ ಭಾರತದ ಸ್ಕೋರ್ 180 ರಗಡಿ ದಾಟುವಂತೆ ಮಾಡಿದ್ರು

ಭಾರತ-ವೆಸ್ಟ್ ಇಂಡಿಸ್

ಭಾರತ-ವೆಸ್ಟ್ ಇಂಡಿಸ್

 • Share this:
  ವೆಸ್ಟ್ಇಂಡೀಸ್ (West Indies)ವಿರುದ್ಧದ ಏಕದಿನ (ODI )ಸರಣಿಯಲ್ಲಿ ಕ್ಲೀನ್ ಸ್ವೀಪ್ (ಮಾಡಿದ್ದ ಟೀಮ್ ಇಂಡಿಯಾ (Team India)ಟಿ-ಟ್ವೆಂಟಿಯಲ್ಲಿ (T-20ಪಾರಮ್ಯ ಮೆರೆದಿದೆ.. ಹೌದು ಕೋಲ್ಕತ್ತಾದ (Kolkata )ಈಡನ್ ಗಾರ್ಡನ್(Eden garden)ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತ ತಂಡ 3-0 ಸರಣಿ ವಶಕ್ಕೆ ಪಡೆದುಕೊಂಡಿದೆ.ಈ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ತೀವ್ರ ಮುಖಭಂಗ ಉಂಟುಮಾಡಿದೆ.. ಇನ್ನು ವೆಸ್ಟ್ ಇಂಡೀಸ್ ತಂಡವನ್ನ ಮೂರು ಟಿ20 ಪಂದ್ಯದಲ್ಲೂ ಸೋಲಿಸಿದ ಭಾರತ ಸತತ 9ನೇ ಟಿ20 ಪಂದ್ಯವನ್ನ ಜಯಿಸಿದ ಸಾಧನೆ ಮಾಡಿದೆ. 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 9 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.

  ಮತ್ತೆ ಎಡವಿದ ಇಶಾನ್ ಕಿಶನ್

  ಮೊದಲ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ,ಟಾಸ್ ಸೋತು ಈ ಪಂದ್ಯದಲ್ಲಿ ಕೆಲವು ಪ್ರಯೋಗಗಳೊಂದಿಗೆ ಮೈದಾನಕ್ಕಿಳಿಯಿತು. ಆರಂಭಿಕರಾಗಿ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಕ್ರೀಸಿಗಿಳಿದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ತಂಡದ ಮೊತ್ತ ಕೇವಲ 10 ರನ್ ಆಗಿದ್ದಾಗ ಕೇವಲ 4 ರನ್ ಗಳಿಸಿದ್ದ ಗಾಯಕ್ವಾಡ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

  ಇದನ್ನೂ ಓದಿ: ಪಾಕಿಸ್ತಾನದಲ್ಲೂ ಇದ್ದಾರೆ 'ವಿರಾಟ್' ಫ್ಯಾನ್ಸ್! ಫೋಟೋ ಹಿಡಿದು ಅಭಿಮಾನಿಯ 'ಶಾಂತಿ ಸಂದೇಶ'

  ಅಯ್ಯರ್- ಸೂರ್ಯಕುಮಾರ್ ಭರ್ಜರಿ ಆಟ

  ಬಳಿಕ ಇಶಾನ್ ಜತೆಗೂಡಿದ ಶ್ರೇಯಸ್ ಅಯ್ಯರ್ ಅಬ್ಬರಿಸುವ ಸುಳಿವು ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರುವುದು ಅವರಿಂದಾಗಲಿಲ್ಲ. ಈ ಜೋಡಿ 2ನೇ ವಿಕೆಟ್‌ಗೆ 53 ರನ್ ಕಲೆಹಾಕಿದರು.. ಇನ್ನುಇಶಾನ್ ಔಟ್ ಆದ ಬಳಿಕ ಬಂದ್ ಸೂರ್ಯ ಅಮೋಘ ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 31 ಎಸೆತದಲ್ಲಿ 65 ರನ್‌ ಕಲೆ ಹಾಕಿ ಭಾರತದ ಸ್ಕೋರ್ 180 ರಗಡಿ ದಾಟುವಂತೆ ಮಾಡಿದ್ರು.

  ಇನ್ನು 16 ರಿಂದ 20 ಓವರ್‌ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ವಿಂಡೀಸ್ ಬೌಲರ್‌ಗಳನ್ನ ಧೂಳೀಪಟ ಮಾಡಿದ್ದಲ್ಲದೆ ಡೆತ್‌ ಓವರ್‌ಗಳಲ್ಲಿ ಭಾರತದ ಪರ ದಾಖಲೆಯ ರನ್ ಕಲೆಹಾಕಿದ್ರು

  ನಿಕೋಲಸ್ ಪೂರನ್ 3ನೇ ಅರ್ಧಶತಕ

  ಟಿ20 ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ವಿಂಡೀಸ್ ಉಪನಾಯಕ ನಿಕೋಲಸ್ ಪೂರನ್ ಈ ಸರಣಿಯಲ್ಲಿ ತಮ್ಮ ಮೂರನೇ ಅರ್ಧಶತಕ ದಾಖಲಿಸಿದ್ರು. 31 ಎಸೆತಗಳಲ್ಲಿ 65 ರನ್ ಸಿಡಿಸಿದ ಪೂರನ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಒಳಗೊಂಡಿತ್ತು.

  14 ಎಸೆತಗಳಲ್ಲಿ 25 ರನ್ ಸಿಡಿಸಿದ ರೊಮನ್ ಪೊವೆಲ್ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ್ರು. ಆದ್ರೆ ಈ ಜೋಡಿ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

  ಪೂರನ್ ಮತ್ತು ಪೊವೆಲ್ ಔಟಾದ ಬಳಿಕ ನಾಯಕ ಕಿರಾನ್ ಪೊಲಾರ್ಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆಲ್‌ರೌಂಡರ್ ಜೇಸನ್ ಹೋಲ್ಡರ್ ಕೂಡ ಕೇವಲ 2ರನ್‌ಗೆ ವೆಂಕಟೇಶ್ ಅಯ್ಯರ್‌ಗೆ ವಿಕೆಟ್ ಒಪ್ಪಿಸಿದ್ರು. ಇದಕ್ಕೂ ಮೊದಲು ಪೊಲಾರ್ಡ್ ಕೂಡ 12ರನ್‌ಗಳಿಸಿದ್ದಾಗ ಅಯ್ಯರ್‌ ಬೌಲಿಂಗ್‌ನಲ್ಲೇ ಔಟಾಗಿದ್ದರು.ಕೆಳಕ್ರಮಾಂಕದಲ್ಲಿ ರೊಮಾರಿಯೊ ಶೆಫರ್ಡ್ ಕೊಂಚ ತಂಡಕ್ಕೆ ಗೆಲುವಿನ ನಂಬಿಕೆ ತಂದುಕೊಟ್ಟರು.

  ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಉಡುಗೊರೆ ನೋಡಿ ಕಣ್ಣೀರಿಟ್ಟಿದ್ದ ಸಚಿನ್ ತೆಂಡೂಲ್ಕರ್

  ಆದ್ರೆ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ 29 ರನ್‌ಗಳಿಸಿದ್ದ ಶೆಫರ್ಡ್ ರೋಹಿತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.ಅಂತಿಮವಾಗಿ ವಿಂಡೀಸ್ 17 ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿದ್ದಷ್ಟೇ ಅಲ್ಲದೆ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಭಾರತ ಸರಣಿಯನ್ನ 3-0 ಅಂತರದಲ್ಲಿ ಗೆದ್ದಿತು.
  Published by:ranjumbkgowda1 ranjumbkgowda1
  First published: