ಕಿರಿಯರ ವಿಶ್ವಕಪ್: ಭಾರತ ತಂಡ ಶುಭಾರಂಭ; ಸೌಥ್ ಆಫ್ರಿಕಾಗೆ ಶಾಕ್ ಕೊಟ್ಟ ಆಫ್ಘನ್ನರು

ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಜ. 21ರಂದು ಜಪಾನ್ ವಿರುದ್ಧ ಆಡಲಿದೆ. ಎ ಗುಂಪಿನಲ್ಲಿ ಭಾರತ, ಜಪಾನ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳಿವೆ.

ಭಾರತ ಕಿರಿಯರ ತಂಡ

ಭಾರತ ಕಿರಿಯರ ತಂಡ

  • News18
  • Last Updated :
  • Share this:
ದಕ್ಷಿಣ ಆಫ್ರಿಕಾ(ಜ. 19): ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಬ್ಲೂಮ್​ಫೋಂಟೇನ್ ನಗರದಲ್ಲಿ ಇಂದು ನಡೆದ ಎ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 90 ರನ್​ಗಳಿಂದ ನಿರಾಯಾಸವಾಗಿ ಮಣಿಸಿತು. ಗೆಲ್ಲಲು 298 ರನ್ ಸವಾಲು ಪಡೆದ ಲಂಕನ್ನರ ಇನ್ನಿಂಗ್ಸ್ 207 ರನ್​ಗೆ ಅಂತ್ಯಗೊಂಡಿತು. ಭಾರತೀಯರ ಆಲ್​ರೌಂಡ್ ಆಟಕ್ಕೆ ಶ್ರೀಲಂಕಾ ಆಟ ಹೆಚ್ಚು ನಡೆಯಲಿಲ್ಲ.

ಟಾಸ್ ಸೋತು ಮೊದಲು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ ನಿಗದಿತ 50 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 297 ರನ್ ಪೇರಿಸಿತು. ಯಶಸ್ವಿ ಜೈಸ್ವಾಲ್, ನಾಯಕ ಪ್ರಿಯಮ್ ಗರ್ಗ್ ಮತ್ತು ಧ್ರುವ್ ಜುರೆಲ್ ಭರ್ಜರಿ ಅರ್ಧಶತಕ ಭಾರಿಸಿದರು. ತಿಲಕ್ ವರ್ಮಾ ಮತ್ತು ಸಿದ್ದೇಶ್ ವೀರ್ ಕೂಡ ಅರ್ಧಶತಕದ ಗಡಿ ಸಮೀಪಿಸಿದರು. ಗಮನಾರ್ಹ ಸಂಗತಿ ಎಂದರೆ ಭಾರತದ ಇನ್ನಿಂಗ್ಸಲ್ಲಿ ಆಡಿದ ಆರು ಬ್ಯಾಟುಗಾರರೆಲ್ಲರೂ ಉತ್ತಮ ಪ್ರದರ್ಶನ ನೀಡಿದರು. ದಿವ್ಯಾಂಶ್ ಸಕ್ಸೇನಾ 23 ರನ್ ಗಳಿಸಿದ್ದೇ ಕಡಿಮೆ ಮೊತ್ತವೆನಿಸಿತು.

ಹಸಿರು ಹೊದಿಕೆ ಇದ್ದ ಈ ಪಿಚ್​ನಲ್ಲಿ ಭಾರತದ ದೊಡ್ಡ ಮೊತ್ತಕ್ಕೆ ಪ್ರತಿಯಾಗಿ ಶ್ರೀಲಂಕಾ ಹೆಚ್ಚು ಪ್ರತಿರೋಧ ತೋರಲಿಲ್ಲ. ನಿಪುನ್ ದನಂಜಯ್ ಅವರು 50 ರನ್ ಗಳಿಸಿದ್ದೇ ಗರಿಷ್ಠ ಮೊತ್ತವೆನಿಸಿತು. ರವಿಂದು ರಸಂತ ಮತ್ತು ಕಾಮಿಲ್ ಮಿಶಾರ ಒಂದಷ್ಟು ರನ್ ಪೇರಿಸಿದರು. ಇವರನ್ನು ಹೊರತುಪಡಿಸಿ ಉಳಿದ ಲಂಕಾ ಬ್ಯಾಟುಗಾರರು ರನ್ ಗಳಿಸಲು ಪರದಾಡಿದರು. ಭಾರತದ ಪರ ಬೌಲರ್​ಗಳಾದ ಆಕಾಶ್ ಸಿಂಗ್, ಸಿದ್ದೇಶ್ ವೀರ್, ರವಿ ಬಿಷ್ಣೋಯ್ ಅವರು ತಲಾ ಎರಡೆರಡು ವಿಕೆಟ್ ಸಂಪಾದಿಸಿ ಭಾರತದ ಗೆಲುವನ್ನು ಖಾತ್ರಿಗೊಳಿಸಿದರು.\

ಇದನ್ನೂ ಓದಿ: IND vs AUS: ಚಿನ್ನಸ್ವಾಮಿಯಲ್ಲಿ ಕೊಹ್ಲಿ-ರೋಹಿತ್ ದರ್ಬಾರ್; ಸರಣಿ ವಶಪಡಿಸಿಕೊಂಡು ಸೇಡು ತೀರಿಸಿಕೊಂಡ ಭಾರತ

ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಜ. 21ರಂದು ಜಪಾನ್ ವಿರುದ್ಧ ಆಡಲಿದೆ. ಎ ಗುಂಪಿನಲ್ಲಿ ಭಾರತ, ಜಪಾನ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳಿವೆ.

ನಿನ್ನೆ ಪ್ರಾರಂಭಗೊಂಡ ಈ ಕಿರಿಯರ ವಿಶ್ವಕಪ್​ನಲ್ಲಿ ಒಟ್ಟು 16 ತಂಡಗಳು ನಾಲ್ಕು ಗುಂಪುಗಳಾಗಿ ಆಡುತ್ತಿವೆ. ಇವತ್ತಿನ ಪಂದ್ಯಗಳಲ್ಲಿ ದೊಡ್ಡ ಶಾಕಿಂಗ್ ರಿಸಲ್ಟ್ ಕೊಟ್ಟಿದ್ದು ಆಫ್ಘಾನಿಸ್ತಾನೀಯರು. ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಇವರು 7 ವಿಕೆಟ್​ಗಳಿಂದ ಸೋಲಿಸಿ ಆಘಾತ ನೀಡಿದ್ಧಾರೆ. ಹಾಗೆಯೇ, ಬಿ ಗುಂಪಿನ ಪಂದ್ಯವೊಂದರಲ್ಲಿ ವೆಸ್ಟ್ ಇಂಡೀಸ್ ತಂಡ ಕಾಂಗರೂಗಳ ಪಡೆಯನ್ನು 3 ವಿಕೆಟ್​ಗಳಿಂದ ಮಣಿಸಿದ್ದಾರೆ.

ಸ್ಕೋರು ವಿವರ:

ಭಾರತ ಅಂಡರ್-19 ತಂಡ 50 ಓವರ್ 297/4
(ಯಶಸ್ವಿ ಜೈಸ್ವಾಲ್ 59, ಪ್ರಿಯಂ ಗರ್ಗ್ 56, ಧ್ರುವ್ ಜುರೆಲ್ ಅಜೇಯ 52, ತಿಲಕ್ ವರ್ಮಾ 46, ಸಿದ್ದೇಶ್ ವೀರ್ ಅಜೇಯ 44 ರನ್)

ಶ್ರೀಲಂಕಾ ಅಂಡರ್-19 ತಂಡ 45.2 ಓವರ್ 207/10
(ನಿಪುಣ್ ಧನಂಜಯ್ ಪೆರೆರಾ 50, ರವಿಂದು ರಸಂತ 49, ಕಾಮಿಲ್ ಮಿಶಾರ 39 ರನ್ – ಆಕಾಶ್ ಸಿಂಗ್ 29/2, ಸಿದ್ದೇಶ್ ವೀರ್ 34/2, ರವಿ ಬಿಷ್ಣೋಯ್ 44/2)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: