U19 World Cup: ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಜಯಭೇರಿ; ಇಲ್ಲಿವೆ ಮುಂದಿನ ಪಂದ್ಯಗಳು

India U19 team: ಸೌತ್ ಆಫ್ರಿಕಾ ವಿರುದ್ಧ 45 ರನ್​ಗಳಿಂದ ಗೆಲುವು ಪಡೆಯುವ ಮೂಲಕ ಟೀಮ್ ಇಂಡಿಯಾ ಅಂಡರ್19 ವರ್ಲ್ಡ್ ಕಪ್​ನಲ್ಲಿ ಶುಭಾರಂಭ ಮಾಡಿದೆ. ಜ. 19 ಮತ್ತು 22ರಂದು ಐರ್ಲೆಂಡ್ ಹಾಗೂ ಉಗಾಂಡ ವಿರುದ್ಧ ಭಾರತದ ಪಂದ್ಯಗಳಿವೆ.

ಭಾರತದ ಅಂಡರ್19 ಆಟಗಾರರು

ಭಾರತದ ಅಂಡರ್19 ಆಟಗಾರರು

 • Share this:
  ಪ್ರಾವಿಡೆನ್ಸ್: ಸ್ಪಿನ್ನರ್ ವಿಕಿ ಓಸ್ತವಾಲ್ ಅವರ ಸ್ಪಿನ್ ಮ್ಯಾಜಿಕ್ ಹಾಗೂ ನಾಯಕ ಯಶ್ ಧುಲ್ ಭರ್ಜರಿ ಬ್ಯಾಟಿಂಗ್ ಫಲವಾಗಿ ಭಾರತ ತಂಡ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಹಿಂದಿನ ಎರಡೂ ವಾರ್ಮಪ್ ಮ್ಯಾಚ್​ಗಳನ್ನ ಗೆದ್ದಿದ್ದ ಭಾರತೀಯರು ನಿನ್ನೆ ನಡೆದ ವಿಶ್ವಕಪ್ ಬಿ ಗುಂಪಿನ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು 45 ರನ್​ಗಳಿಂದ ಸೋಲಿಸಿತು. ಭಾರತದ 232 ರನ್​ಗಳ ಸಾಮಾನ್ಯ ಮೊತ್ತವನ್ನು ಚೇಸ್ ಮಾಡಲಾಗದ ಸೌತ್ ಆಫ್ರಿಕಾದ ಇನ್ನಿಂಗ್ಸ್ 187 ರನ್​ಗೆ ಮುಕ್ತಾಯಗೊಂಡಿತು.

  ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಅಂಡರ್-19 ತಂಡ ಸಾಧಾರಣ ಆರಂಭ ಪಡೆದರೂ ಯಶ್ ಧುಲ್, ಶೇಖ್ ರಷೀದ್, ನಿಶಾಂತ್ ಸಿಂಧು ಮತ್ತು ಕೌಶನ್ ತಂಬೆ ಉತ್ತಮ ಆಟ ತೋರಿದರು. ನಾಯಕ ಯಶ್ ಧುಲ್ 100 ಎಸೆತದಲ್ಲಿ 82 ರನ್ ಗಳಿಸಿದರು. ಸೌತ್ ಆಫ್ರಿಕಾದ ವೇಗದ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ಭಾರತದ ಬ್ಯಾಟುಗಾರರಿಗೆ ಹೆಚ್ಚು ರನ್ ಗಳಿಸಲು ಅವಕಾಶ ಸಿಗಲಿಲ್ಲ. ಯಶ್ ಧುಲ್ 39ನೇ ಓವರ್​ನಲ್ಲಿ ರನ್ ಔಟ್ ಆಗುವ ಮೂಲಕ 18 ರನ್​ಗಳಿಂದ ಶತಕವಂಚಿತರಾದರು. ಅವರು ಕೊನೆಯವರೆಗೂ ಇದ್ದಿದ್ದರೆ ಭಾರತದ ಸ್ಕೋರು 250 ರನ್ ಗಡಿ ದಾಟುವ ಸಾಧ್ಯತೆ ಇತ್ತು.

  ಈ ಪಿಚ್​ನಲ್ಲಿ ಭಾರತ ಗಳಿಸಿದ 232 ರನ್ ಸ್ಕೋರು ಸೌತ್ ಆಫ್ರಿಕಾ ಪಾಲಿಗೆ ಕಠಿಣವಾಗಿ ಪರಿಣಮಿಸಿತು. ಭಾರತದ ವೇಗದ ಬೌಲರ್​ಗಳಾದ ರಾಜವರ್ಧನ್ ಹಂಗರ್ಗೇಕರ್ ಮತ್ತು ರವಿಕುಮಾರ್ ಅವರು ಉತ್ತಮವಾಗಿ ದಾಳಿ ನಡೆಸಿ ಸೌತ್ ಆಫ್ರಿಕನ್ನರನ್ನ ಕಟ್ಟಿಹಾಕಿದರು. ನಂತರ ವೇಗದ ಬೌಲರ್ ರಾಜ್ ಬಾವ ಮತ್ತು ಸ್ಪಿನ್ನರ್ ವಿಕಿ ಓಸ್ತವಾಲ್ ಅವರು ಉತ್ತಮ ಬೌಲಿಂಗ್ ಮೂಲಕ ಸೌತ್ ಆಫ್ರಿಕಾಗೆ ಒಳ್ಳೆಯ ಜೊತೆಯಾಟ ಸಿಗದಂತೆ ನೋಡಿಕೊಂಡರು.

  ಡೆವಾಲ್ಡ್ ಬ್ರೆವಿಸ್ ಅದರ್ಶಶತಕ ಗಳಿಸಿದರು. ನಾಯಕ ಜಾರ್ಜ್ ವಾನ್ ಹೀರ್ಡನ್ ಮತ್ತು ವೇಲೆಂಟೈನ್ ಕಿಟಿಮೆ ಉತ್ತಮವಾಗಿ ಅಡಿದರಾದರೂ ಗೆಲುವಿಗೆ ಸಮೀಪ ಚೇಸಿಂಗ್ ಕೊಂಡೊಯ್ಯಲಾಗಲಿಲ್ಲ.

  ಎರಡನೇ ವಿಕೆಟ್​ಗೆ 58 ರನ್ ಮತ್ತು 4ನೇ ವಿಕೆಟ್​ಗೆ 55 ರನ್ ಜೊತೆಯಾಟ ಬಂದಿಲ್ಲದೇ ಹೋಗಿದ್ದರೆ ಸೌತ್ ಆಫ್ರಿಕಾ ಹೋರಾಟ ಇನ್ನೂ ಬೇಗನೇ ಮುರುಟಿಹೋಗುತ್ತಿತ್ತು.

  ಇದನ್ನೂ ಓದಿ: Virt Kohli Steps Down: ಭಾರತದ ಸಕ್ಸಸ್ ಫುಲ್ ನಾಯಕ ಈಗ ತಲೆ ಬಾಗಿದ್ದು ಯಾಕೆ? ನಾಯಕತ್ವದಿಂದ ಕೆಳಗಿಳಿಯಲು ಅಸಲಿ ಕಾರಣ ಏನು?

  ಇತರ ಪಂದ್ಯಗಳ ಫಲಿತಾಂಶ:

  ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಉಗಾಂಡ ವಿರುದ್ಧ ಐರ್ಲೆಂಡ್ 39 ರನ್​ಗಳಿಂದ ಗೆಲುವು ಸಾಧಿಸಿತು.

  ಎ ಗುಂಪಿನಲ್ಲಿ ಯುಎಇ ತಂಡವನ್ನು ಕೆನಡಾ 49 ರನ್​ಗಳಿಂದ ಮಣಿಸಿತು. ಸಿ ಗುಂಪಿನಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಜಿಂಬಾಬ್ವೆ 228 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತು.

  ಡಿ ಗುಂಪಿನ ಎರಡು ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ವಿರುದ್ಧ ಶ್ರೀಲಂಕಾ 40 ರನ್​ಗಳಿಂದ, ಹಾಗು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆಲುವು ಸಾಧಿಸಿವೆ.

  ಇಂದಿನ ಪಂದ್ಯ:

  ಹಾಲಿ ಚಾಂಪಿಯನ್ಸ್ ಬಾಂಗ್ಲಾದೇಶ ಕಿರಿಯರ ತಂಡ ಇಂದು ಇಂಗ್ಲೆಂಡ್ ಅಂಡರ್-19 ತಂಡವನ್ನು ಎದುರಿಸುತ್ತಿದೆ.

  ಇದನ್ನೂ ಓದಿ: Paige Spiranac: ವಿಶ್ವದ ಹಾಟೆಸ್ಟ್ ಗಾಲ್ಫ್ ಆಟಗಾರ್ತಿಯ ನಗ್ನ ಚಿತ್ರ ವೈರಲ್ ಮಾಡಿದ್ದ ಪ್ರಿಯಕರ! ಇದೆಂಥಾ ಸೇಡು..

  ಪಂದ್ಯಾವಳಿ ಸ್ವರೂಪ:

  ಒಟ್ಟು 16 ತಂಡಗಳು ಪಾಲ್ಗೊಂಡಿದ್ದು ನಾಲ್ಕು ಗುಂಪುಗಳಾಗಿ ವಿಭಾಗಿಸಲಾಗಿದೆ. ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿದ್ದು, ಪ್ರತೀ ತಂಡವು ಗುಂಪಿನ ಇತರ ತಂಡಗಳನ್ನ ಒಮ್ಮೆ ಎದುರಿಸುತ್ತದೆ. ಅಂದರೆ ಪ್ರತೀ ತಂಡವು ಗ್ರೂಪ್ ಹಂತದಲ್ಲಿ ಮೂರು ಪಂದ್ಯಗಳನ್ನ ಆಡುತ್ತವೆ.

  ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ನೇರ ಸೂಪರ್ ಲೀಗ್ ಕ್ವಾರ್ಟರ್​ಫೈನಲ್ ಪ್ರವೇಶಿಸುತ್ತವೆ. ಎರಡನೇ ಸ್ಥಾನ ಪಡೆದ ನಾಲ್ಕು ತಂಡಗಳು ಪ್ಲೇಟ್ ಕ್ವಾರ್ಟರ್​ಫೈನಲ್ ಪ್ರವೇಶಿಸುತ್ತವೆ.

  ಭಾರತದ ಮುಂದಿನ ಪಂದ್ಯಗಳು:

  ಭಾರತ ಇದೀಗ ತನ್ನ ಗುಂಪಿನಲ್ಲಿ ತನ್ನ ಪ್ರಬಲ ಪ್ರತಿಸ್ಪರ್ಧಿ ಎನಿಸಿದ ಸೌತ್ ಆಫ್ರಿಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್​ಫೈನಲ್ ಹಾದಿಯನ್ನ ಸುಗಮಗೊಳಿಸಿಕೊಂಡಿದೆ. ಇನ್ನೀಗ ಎರಡು ಪಂದ್ಯಗಳಿದ್ದು, ಜ. 19ರಂದು ಐರ್ಲೆಂಡ್ ವಿರುದ್ಧ ಹಾಗು ಜ. 22ರಂದು ಉಗಾಂಡಾ ವಿರುದ್ಧ ಭಾರತೀಯರು ಸೆಣಸಲಿದ್ದಾರೆ.
  Published by:Vijayasarthy SN
  First published: