IND vs NZ- ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

India beat NZ at Kolkata- ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನ ಭಾರತ 73 ರನ್​ಗಳಿಂದ ಗೆದ್ದಿದೆ. ಇದರೊಂದಿಗೆ ಸರಣಿಯನ್ನ 3-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ. ಮುಂದೆ 2 ಟೆಸ್ಟ್ ಪಂದ್ಯಗಳ ಮತ್ತೊಂದು ಸರಣಿ ಇದೆ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

 • Share this:
  ಕೋಲ್ಕತಾ, ನ. 21: ಐಸಿಸಿ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಸರಿಯಾಗಿ ಸೇಡು ತೀರಿಸಿಕೊಂಡಿದೆ. ಇಂದು ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಕೋಲ್ಕತಾದಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯವನ್ನು ಭಾರತ 73 ರನ್​ಗಳ ಭಾರೀ ಅಂತರಿಂದ ಗೆಲುವು ಸಾಧಿಸಿತು. ಇದರೊಂದಿಗೆ ಟಿ20 ಸರಣಿಯನ್ನ ಭಾರತ 3-0ಯಿಂದ ಗೆದ್ದುಕೊಂಡಿತು. ಗೆಲ್ಲಲು 185 ರನ್ ಗುರಿ ಪಡೆದ ನ್ಯೂಜಿಲೆಂಡ್ ತಂಡ ಕೇವಲ 111 ರನ್​ಗೆ ಆಲೌಟ್ ಆಯಿತು.

  ಮಾರ್ಟಿನ್ ಗಪ್ಟಿಲ್ ಒಬ್ಬರು ಮಾತ್ರ ಭಾರತದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದು. ಅವರು ಬಿಟ್ಟರೆ ಟಿಮ್ ಸೀಫರ್ಟ್ ಮತ್ತು ಲಾಕೀ ಫರ್ಗ್ಯೂಸನ್ ಮಾತ್ರ ಎರಡಂಕಿ ಸ್ಕೋರ್ ಮಾಡಿದ್ದು. ಉಳಿದವರಿಂದ ಒಂದಂಕಿ ರನ್ ಮಾತ್ರವೇ ಬಂದಿದ್ದು. ಮಾರ್ಕ್ ಚಾಪ್ಮನ್ ಮತ್ತು ಗ್ಲೆನ್ ಫಿಲಿಪ್ಸ್ ಸೊನ್ನೆ ಸುತ್ತಿದರು.

  ಅಕ್ಷರ್ ಪಟೇಲ್ ಕೇವಲ 9 ರನ್​ಗೆ 3 ವಿಕೆಟ್ ಪಡೆದು ಹೀರೋ ಎನಿಸಿದರು. ಹರ್ಷಲ್ ಪಟೇಲ್ 2 ವಿಕೆಟ್ ಪಡೆದು ಮತ್ತೊಮ್ಮೆ ಛಾಪು ಮೂಡಿಸಿದರು. ಆರ್ ಅಶ್ವಿನ್ ಅನುಪಸ್ಥಿತಿಯಲ್ಲಿ ಆಡಿದ ಯುಜವೇಂದ್ರ ಚಹಲ್​ಗೆ 1 ವಿಕೆಟ್ ಸಿಕ್ಕಿತು.

  ರೋಹಿತ್ ಶರ್ಮಾ ಅರ್ಧಶತಕ:

  ಇದಕ್ಕೂ ಮೊದಲು ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕೆಎಲ್ ರಾಹುಲ್ ಅವರ ಬದಲು ತಂಡಕ್ಕೆ ಬಂದ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಕೇವಲ 6 ಓವರ್​ನಲ್ಲಿ ಅವರಿಬ್ಬರು 60ಕ್ಕೂ ಹೆಚ್ಚು ರನ್ ಗಳಿಸಿದರು. ಇಶಾನ್ ಔಟಾದ ಬಳಿಕ ಭಾರತಕ್ಕೆ ಒಳ್ಳೆಯ ಜೊತೆಯಾಟ ಬರದೇ ಹೋದರೂ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಮತ್ತು ಬಾಲಂಗೋಚಿಗಳಾದ ಹರ್ಷಲ್ ಪಟೇಲ್ ಹಾಗೂ ದೀಪಕ್ ಚಾಹರ್ ಅವರು ರನ್ ಓಟ ಕಡಿಮೆಯಾಗದಂತೆ ನೋಡಿಕೊಂಡರು. ರೋಹಿತ್ ಶರ್ಮಾ ಅರ್ಧಶತಕ ಭಾರಿಸಿದರು. ದೀಪಕ್ ಚಾಹರ್ ಅವರಂತೂ ಕೇವಲ 8 ಬಾಲ್​ನಲ್ಲಿ 21 ರನ್ ಗಳಿಸಿದ ಫಲವಾಗಿ ಭಾರತದ ಸ್ಕೋರು 184 ರನ್ ತಲುಪಲು ಸಾಧ್ಯವಾಯಿತು.

  ಇದನ್ನೂ ಓದಿ: MS Dhoni- ಐದು ವರ್ಷವೇ ಆದರೂ ಇದೇ ನಗರದಲ್ಲಿ ನನ್ನ ಕೊನೆ ಪಂದ್ಯ: ಎಂಎಸ್ ಧೋನಿ

  ಮುಂದಿದೆ ಟೆಸ್ಟ್ ಸರಣಿ:

  ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೀಮ್ ಇಂಡಿಯಾಗೆ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಸವಾಲು ಎದುರಾಗಲಿದೆ. ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ಅಲಭ್ಯ ಇದ್ದಾರೆ. ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಆಡುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

  ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್ ಮತ್ತು ಪ್ರಸಿದ್ಧ್ ಕೃಷ್ಣ, ಈ ಮೂವರು ಕನ್ನಡಿಗರು ಟೆಸ್ಟ್ ತಂಡದಲ್ಲಿ ಇದ್ದಾರೆ. ನ. 25ರಂದು ಮೊದಲ ಪಂದ್ಯ ಕಾನಪುರ್​ನಲ್ಲಿ ಆರಂಭಗೊಳ್ಳಲಿದೆ.

  ಇದನ್ನು ಓದಿ: 4 Balls 4 Wickets- ಕರ್ನಾಟಕ ವಿರುದ್ಧ 4 ಬಾಲ್​ಗೆ 4 ವಿಕೆಟ್; ದರ್ಶನ್ ನಾಲಕಂಡೆ ದಾಖಲೆ

  ಎರಡನೇ ಪಂದ್ಯ ಮುಂಬೈನಲ್ಲಿ ಡಿಸೆಂಬರ್ 3ರಿಂದ ನಡೆಯಲಿದೆ. ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯ ಇರಲಿದ್ಧಾರೆ. ಅವರೇ ಆ ಪಂದ್ಯವನ್ನು ಮುನ್ನಡೆಸಲಿದ್ಧಾರೆ.

  ಸ್ಕೋರು ವಿವರ:

  ಭಾರತ 20 ಓವರ್ 184/7
  (ರೋಹಿತ್ ಶರ್ಮಾ 56, ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20, ಹರ್ಷಲ್ ಪಟೇಲ್ 18, ದೀಪಕ್ ಚಾಹರ್ ಅಜೇಯ 21 ರನ್- ಮಿಚೆಲ್ ಸ್ಯಾಂಟ್ನರ್ 27/3)

  ನ್ಯೂಜಿಲೆಂಡ್ 17.2 ಓವರ್ 111/10
  (ಮಾರ್ಟಿನ್ ಗಪ್ಟಿಲ್ 51, ಟಿಮ್ ಸೀಫರ್ಟ್ 17, ಲಾಕೀ ಫರ್ಗೂಸನ್ 14 ರನ್ – ಅಕ್ಷರ್ ಪಟೇಲ್ 9/3, ಹರ್ಷಲ್ ಪಟೇಲ್ 26/2)
  Published by:Vijayasarthy SN
  First published: