17 ವರ್ಷಗಳ ಬಳಿಕ ಮತ್ತೊಮ್ಮೆ ತನ್ನ ಟೆಸ್ಟ್ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟ ಟೀಮ್ ಇಂಡಿಯಾ..!

2002ರಲ್ಲಿ ಲಾರ್ಡ್ಸ್​​ನಲ್ಲಿ ನಡೆದ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್​ನಲ್ಲಿ ಭಾರತ 109.4 ಓವರ್‌ಗಳವರೆಗೂ ಬ್ಯಾಟಿಂಗ್ ಮಾಡಿತು. ಇದೇ ವೇಳೆ ಅಜಿತ್ ಅಗರ್ಕರ್ ಟೆಸ್ಟ್ ಶತಕ ಸಿಡಿಸಿದ್ದರು.

Team India

Team India

 • Share this:
  ಭಾರತದ ಬ್ಯಾಟ್ಸ್‌ಮನ್‌ಗಳು ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕನೇ ದಿನದ ಕೊನೆಯ ಸೆಷನ್ ಹಾಗೂ ಐದನೇ ದಿನ ಪೂರ್ತಿ ಬ್ಯಾಟಿಂಗ್ ಮಾಡಿ ತನ್ನ ಟೆಸ್ಟ್ ಬ್ಯಾಟಿಂಗ್ ಸಾಮರ್ಥ್ಯವನ್ನು ವಿಶ್ವದ ಮುಂದಿಟ್ಟಿದೆ. ಇದರೊಂದಿಗೆ ಅಪರೂಪದ ಸಾಧನೆಯನ್ನೂ ಟೀಮ್ ಇಂಡಿಯಾ ಮಾಡಿದೆ.

  ಟೀಮ್ ಇಂಡಿಯಾಗೆ ನಾಲ್ಕನೇ ದಿನದ ಎರಡನೇ ಸೆಷನ್​ನಲ್ಲಿ ಬ್ಯಾಟಿಂಗ್ ನೀಡುವ ಮೂಲಕ ಆಸ್ಟ್ರೇಲಿಯಾ 407 ರನ್ ಟಾರ್ಗೆಟ್ ನೀಡಿತ್ತು. ನಾಲ್ಕನೇ ದಿನ ಒಂದಷ್ಟು ವಿಕೆಟ್ ಪಡೆದು, ಅಂತಿಮ ದಿನ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಆಲೌಟ್ ಮಾಡಲು ಆಸೀಸ್ ಪಡೆ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಆಸ್ಟ್ರೇಲಿಯಾ ಲೆಕ್ಕಚಾರವನ್ನು ರೋಹಿತ್ ಶರ್ಮಾ ಅರ್ಧಶತಕದೊಂದಿಗೆ ತಪ್ಪಿಸಿದರು. ಮೊದಲ ವಿಕೆಟ್​ಗೆ ಶುಭ್​ಮನ್ ಗಿಲ್ ಜೊತೆಗೂಡಿ 71 ರನ್ ಕಲೆಹಾಕಿದರು. ಇದಾಗ್ಯೂ 4ನೇ ದಿನಾಂತ್ಯದ ವೇಳೆಗೆ ಆಸ್ಟ್ರೇಲಿಯಾ ಹಿಟ್​ಮ್ಯಾನ್ ಹಾಗೂ ಗಿಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

  ಐದನೇ ದಿನ ಭಾರತಕ್ಕೆ 309 ರನ್​ಗಳ ಗುರಿಯಿದ್ದರೆ ಅತ್ತ ಆಸ್ಟ್ರೇಲಿಯಾ ಗೆಲುವಿಗೆ 8 ವಿಕೆಟ್ ಉರುಳಿಸಬೇಕಿತ್ತು. ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳಾದ ರಿಷಭ್ ಪಂತ್, ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿ ಸಂಪೂರ್ಣ ಮೇಲುಗೈ ಸಾಧಿಸಿದರು. ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಮತ್ತೆ ಆಸ್ಟ್ರೇಲಿಯಾಗೆ ಗೆಲುವಿನ ಆಸೆ ಚಿರುಗುರೊಡೆಯಿತು. ಆದರೆ ಈ ಹಂತದಲ್ಲಿ ಅಸಲಿ ಟೆಸ್ಟ್​ ಏನು ಎಂದು ತೋರಿಸಿದ ಹನುಮಾ ವಿಹಾರಿ 161 ಎಸೆತಗಳನ್ನು ಎದುರಿಸಿ 23 ರನ್ ಬಾರಿಸಿ ಕ್ರೀಸ್ ಕಚ್ಚಿ ನಿಂತರು. ಇನ್ನು ಅವರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 128 ಎಸೆತಗಳನ್ನು ಐದನೇ ದಿನದವರೆಗೂ ಕ್ರೀಸ್‌ನಲ್ಲಿದ್ದರು.

  ಅಂದರೆ, 4ನೇ ದಿನದ 30 ಓವರ್​ಗಳ ಜೊತೆಗೆ ಐದನೇ ದಿನ ಟೀಮ್ ಇಂಡಿಯಾ 90 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಿದೆ. ಇದರೊಂದಿಗೆ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 100 ಕ್ಕಿಂತ ಹೆಚ್ಚು ಓವರ್ ಬ್ಯಾಟಿಂಗ್ ಮಾಡಿದಂತಾಗಿದೆ. ಇಂತಹದೊಂದು ದೀರ್ಘ 4ನೇ ಇನಿಂಗ್ಸ್​ ಮೂಡಿಬಂದಿದ್ದು 17 ವರ್ಷಗಳ ಹಿಂದೆ.  2002ರಲ್ಲಿ ಲಾರ್ಡ್ಸ್​​ನಲ್ಲಿ ನಡೆದ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್​ನಲ್ಲಿ ಭಾರತ 109.4 ಓವರ್‌ಗಳವರೆಗೂ ಬ್ಯಾಟಿಂಗ್ ಮಾಡಿತು. ಇದೇ ವೇಳೆ ಅಜಿತ್ ಅಗರ್ಕರ್ ಟೆಸ್ಟ್ ಶತಕ ಸಿಡಿಸಿದ್ದರು. ಇದಾಗಿ 17 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಭಾರತದ ಬ್ಯಾಟ್ಸ್​ಮನ್​​ಗಳು 120 ಓವರ್ ಬ್ಯಾಟಿಂಗ್ ನಡೆಸಿದ ಇತಿಹಾಸ ಬರೆದಿದ್ದಾರೆ. ಇನ್ನು 1979 ರಲ್ಲಿ ಭಾರತ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ನ 4ನೇ ಇನಿಂಗ್ಸ್​ನಲ್ಲಿ 150.5 ಓವರ್​ವರೆಗೂ ಬ್ಯಾಟ್ ಮಾಡಿರುವುದು ದಾಖಲೆಯಾಗಿ ಉಳಿದಿದೆ.
  Published by:zahir
  First published: