ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಚಿನ್, ಕೊಹ್ಲಿ ಸೇರಿ ಪಾಕ್ ಕ್ರಿಕೆಟಿಗರ ಕಂಬನಿ

ಪಾಕಿಸ್ತಾನ ಕ್ರಿಕೆಟಿಗರು ಕೂಡ ನಟ ಸುಶಾಂತ್​ ಸಿಂಗ್​​​ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶೊಯೇಬ್​ ಮಲ್ಲಿಕ್​, ಕಮ್ರಾನ್​ ಅಕ್ಮಲ್​​ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಬೇಸರದ ನುಡಿಗಳನ್ನು ಬರೆದು ಟ್ವೀಟ್​ ಮಾಡಿದ್ದಾರೆ.

news18-kannada
Updated:June 14, 2020, 8:14 PM IST
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಚಿನ್, ಕೊಹ್ಲಿ ಸೇರಿ ಪಾಕ್ ಕ್ರಿಕೆಟಿಗರ ಕಂಬನಿ
ನಟ ಸುಶಾಂತ್ ಸಿಂಗ್ ರಜಪೂತ್
  • Share this:
ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​​ ಆತ್ಮಹತ್ಯೆ ಮೂಲಕ ಬದುಕು ಮುಗಿಸಿದ್ದಾರೆ. ಡ್ಯಾನ್ಸರ್​ ಆಗಿ ನಂತರ ಬೆಳ್ಳಿ ಪರದೆಯ ಮೇಲೆ ನಟಿಸುವ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದ ಸುಶಾಂತ್​ ಸಿಂಗ್​ ಸಾವು ಬಾಲಿವುಡ್​ ಚಿತ್ರರಂಗಕ್ಕೆ ಬೇಸರ ತರಿಸಿದೆ. ಅನೇಕರು ನಟ-ನಟಿಯರು ಸಾವಿಗೆ ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ ಸೇರಿ ಹಲವಾರು ರಾಜಕೀಯ ಗಣ್ಯರು ಕೂಡ ರಜಪೂತ್​ ಸಾವಿಗೆ ಬೇಸರ ಹೊರಹಾಕಿದ್ದಾರೆ. ಇತ್ತ ಕ್ರೀಡಾ ಲೋಕದ ತಾರೆಯರು ಕೂಡ ಸುಶಾಂತ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಟೀಂ ಇಂಡಿಯಾದ ಕ್ರಿಕೆಟಿಗರಾದ ಶಿಖರ್​ ಧವನ್​, ಅಜಿಂಕ್ಯ ರಹಾನೆ, ಕಿರಣ್​​ ಮೋರೆ, ಆಕಾಶ್​ ಚೋಪ್ರಾ, ಸುರೇಶ್​ ರೈನಾ, ಕ್ರುನಾಲ್​ ಪಾಂಡ್ಯ, ಹರ್ಭಜನ್​ ಸಿಂಗ್​, ಆರ್​​ ಆಶ್ವಿನ್​, ವಾಷಿಂಗ್ಟನ್​ ಸುಂದರ, ಆರ್​ ಪಿ ಸಿಂಗ್​ ಕಮೆಂಟರೇಟರ್​​ ಹರ್ಷ ಬೋಗ್ಲೆ, ಟೀಂ ಇಂಡಿಯಾ ಕೋಚ್​​ ರವಿ ಶಾಸ್ತ್ರಿ ಸೇರಿದಂತೆ ಮಾಜಿ ಕ್ರಿಕೆಟಿಗರಾದ ಸಚಿನ್​ ತೆಂಡೂಲ್ಕರ್​, ಇರ್ಫಾನ್​ ಪಠಾಣ್​, ವಿರೇಂದ್ರ ಸೇಹ್ವಾಗ್​, ಅನಿಲ್​ ಕುಂಬ್ಳೆ ಟ್ವೀಟ್​ ಮಾಡುವ ಮೂಲಕ ಸುಶಾಂತ್​ ಸಿಂಗ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಕೂಡ ಟ್ವೀಟ್​ ಮಾಡಿದ್ದಾರೆ.

 

ಪಾಕಿಸ್ತಾನ ಕ್ರಿಕೆಟಿಗರು ಕೂಡ ನಟ ಸುಶಾಂತ್​ ಸಿಂಗ್​​​ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶೋಯೆಬ್​ ಮಲ್ಲಿಕ್​, ಕಮ್ರಾನ್​ ಅಕ್ಮಲ್​​ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಬೇಸರದ ನುಡಿಗಳನ್ನು ಬರೆದು ಟ್ವೀಟ್​ ಮಾಡಿದ್ದಾರೆ.



First published: June 14, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading