ಕೊಹ್ಲಿ-ಧೋನಿಯಷ್ಟು ಶ್ರೀಮಂತನಲ್ಲ ಈ ಕ್ರಿಕೆಟಿಗ; ಆದರೂ ಪಂದ್ಯದ ಸಂಭಾವನೆ ದಾನ ಮಾಡಿದ ಸಂಜು!

ಭಾರತ ಎ ತಂಡ ದಕ್ಷಿಣ ಆಫ್ರಿಕ ಎ ವಿರುದ್ಧ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯ ಆತಿಥ್ಯವಹಿಸಿತ್ತು. ಆದರೆ, ಕೇರಳದ ರಾಜಧಾನಿಯಲ್ಲಿ ಮಳೆರಾಯನ ಅಡ್ಡಿಯಿಂದ ಎಲ್ಲ ಪಂದ್ಯಗಳ ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು.

Vinay Bhat | news18-kannada
Updated:September 9, 2019, 9:01 AM IST
ಕೊಹ್ಲಿ-ಧೋನಿಯಷ್ಟು ಶ್ರೀಮಂತನಲ್ಲ ಈ ಕ್ರಿಕೆಟಿಗ; ಆದರೂ ಪಂದ್ಯದ ಸಂಭಾವನೆ ದಾನ ಮಾಡಿದ ಸಂಜು!
ಸಂಜು ಸ್ಯಾಮ್ಸನ್
  • Share this:
ಬೆಂಗಳೂರು (ಸೆ. 08): ವಿಕೆಟ್ ಕೀಪರ್-ಬ್ಯಾಟ್ಸ್​ಮನ್​​ ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ಎ ವಿರುದ್ಧದ  5ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ಎ ತಂಡಕ್ಕೆ ಗೆಲುವು ತಂದಿಟ್ಟಿದ್ದರು.

ತಿರುವನಂತಪುರಂ ನ ಗ್ರೀನ್​ಫೀಲ್ಡ್​ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 48 ಎಸೆತಗಳಲ್ಲಿ 91 ಸಿಡಿಸಿ ಭಾರತವನ್ನು 36 ರನ್​ ಗಳಿಂದ ಗೆಲ್ಲಿಸಿದ್ದರು. ಈ ಮೂಲಕ 4-1 ರಿಂದ ಸರಣಿ ವಶ ಪಡಿಸಿಕೊಂಡಿತ್ತು. ಪಂದ್ಯ ಮುಗಿದ ಬಳಿಕ ಕೇರಳ ಕ್ರಿಕೆಟರ್ ಸಂಜು ಪಂದ್ಯದಲ್ಲಿ ಸಿಕ್ಕ ಸಂಭಾವನೆಯನ್ನು ದಾನ ಮಾಡಿದ್ದಾರೆ.

ಭಾರತ ಎ ತಂಡ ದಕ್ಷಿಣ ಆಫ್ರಿಕ ಎ ವಿರುದ್ಧ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯ ಆತಿಥ್ಯವಹಿಸಿತ್ತು. ಆದರೆ, ಕೇರಳದ ರಾಜಧಾನಿಯಲ್ಲಿ ಮಳೆರಾಯನ ಅಡ್ಡಿಯಿಂದ ಎಲ್ಲ ಪಂದ್ಯಗಳ ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು. ಅದರಲ್ಲೂ ನಾಲ್ಕನೇ ಪಂದ್ಯವನ್ನು ಎರಡು ದಿನಗಳ ತನಕ ಆಡಲಾಗಿತ್ತು.

ನುಚ್ಚು ನೂರಾಯ್ತು ಸೆರೆನಾ ಕನಸು; 19ರ ಚೆಲುವೆಗೆ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ!

ಮಳೆಯಿಂದ ಅಡಚಣೆ ಉಂಟಾಗಿದ್ದ ಪಂದ್ಯದಲ್ಲಿ ಕ್ರೀಡಾಂಗಣದ ಸಿಬ್ಬಂದಿಗಳು ತುಂಬಾ ಶ್ರ,ಮ ವಹಿಸಿ ಯಾವ ಪಂದ್ಯವನ್ನೂ ರದ್ದಾಗದಂತೆ ನೋಡಿದ್ದರು. ಇದಕ್ಕಾಗಿ ತನಗೆ ಸಿಕ್ಕ 1.5 ಲಕ್ಷ ರೂ. ಪಂದ್ಯ ಸಂಭಾವನೆಯನ್ನು ಗ್ರೀನ್​ಫೀಲ್ಡ್ ಸ್ಟೇಡಿಯಂನ ಸಿಬ್ಬಂದಿಗಳಿಗೆ ಸ್ಯಾಮ್ಸನ್ ನೀಡಿದ್ದಾರೆ.

‘ಈ ಸರಣಿ ಉತ್ತಮವಾಗಿ ನಡೆಯಲು ಇಲ್ಲಿನ ಗ್ರೌಂಡ್ಸ್​ಮನ್​ಗಳೇ ಪ್ರಮುಖ ಕಾರಣ. ಅವರಿಂದ ನಾವಿಲ್ಲಿ ಆಡಲು ಸಾಧ್ಯವಾಗಿ ಸರಣಿ ಗೆಲ್ಲಲು ಸಹಕಾರಿ ಆಯಿತು. ಕ್ರೀಡಾಂಗಣ ಸ್ವಲ್ಪ ಒದ್ದೆಯಾಗಿದ್ದರೂ ಪಂದ್ಯ ನಡೆಸಲಾಗುತ್ತಿರಲಿಲ್ಲ. ಅವರಿಗೆ ಧನ್ಯವಾದ ಹೇಳಲೇಬೇಕು. ಹೀಗಾಗಿ ನನ್ನ ಪಂದ್ಯಗಳ ಸಂಭಾವನೆ 1.50 ಲಕ್ಷ ರೂ. ಮೊತ್ತವನ್ನು ಇಲ್ಲಿನ ಸಿಬ್ಬಂದಿಗಳಿಗೆ ನೀಡುತ್ತಿದ್ದೇನೆ’ ಎಂದು ಸ್ಯಾಮ್ಸನ್ ಹೇಳಿದ್ದಾರೆ.

First published:September 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...