ಎದುರಾಳಿಗಿಂತ 51 ರನ್ ಅಧಿಕ ಬಾರಿಸಿದರೂ ಸೋತ ಭಾರತ ಎ; ಹರಿಣಗಳಿಗೆ 4 ರನ್​ಗಳ ರೋಚಕ ಜಯ!

ಗುರುವಾರವೂ ಕ್ರೀಡಾಂಗಣ ಒದ್ದೆಯಾಗಿದ್ದ ಕಾರಣ ಪಂದ್ಯ ತಡವಾಗಿ ಆರಂಭಗೊಂಡಿತು. 25 ಓವರ್‌ಗಳಲ್ಲಿ ಗೆಲುವಿಗೆ 193 ರನ್ ಗಳಿಸಬೇಕಾದ ಸವಾಲನ್ನು ಪಡೆದ ಭಾರತ ಎ ತಂಡ ಪರ ಶಿಖರ್ ಧವನ್ ಅಬ್ಬರಿಸಿದರು.

ಶಿಖರ್ ಧವನ್ ಹಾಗೂ ಶ್ರೇಯಸ್ ಐಯರ್

ಶಿಖರ್ ಧವನ್ ಹಾಗೂ ಶ್ರೇಯಸ್ ಐಯರ್

  • Share this:
ಬೆಂಗಳೂರು (ಸೆ. 06): ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಸೋಲುಂಡಿದೆ. ಮಳೆಬಾಧಿತ ಪಂದ್ಯವಾಗಿದ್ದರಿಂದ ಎರಡು ದಿನಗಳ ಕಾಲ ಆಟ ನಡೆಯಿತು. ಬುಧವಾರ ಪಂದ್ಯ ಆರಂಭಕ್ಕೆ ವರುಣ ಅಡ್ಡಿ ಪಡಿಸಿದ ಕಾರಣ ಆರಂಭದಲ್ಲಿ 43 ಓವರ್‌ಗಳಿಗೆ ನಿಗದಿ ಮಾಡಲಾಗಿತ್ತು. 

ಇದರಂತೆ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಫ್ರಿಕಾ ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಮ್ಯಾಥ್ಯೂ ಬ್ರೀಟ್ಕ್​ 25 ಹಾಗೂ ನಾಯಕ ತೆಂಬ ಬವುಮಾ 28 ರನ್ ಗಳಿಸಿದರು. ಆದರೆ, 23 ಓವರ್ ಆಗುವ ಹೊತ್ತಿಗೆ ಮತ್ತೆ ಮಳೆ ಸುರಿದ ಪರಿಣಾಮ ಪಂದ್ಯವನ್ನು 25 ಓವರ್​ಗೆ ಇಳಿಸಲಾಯಿತು.

ಆದರೆ, ರೀಜಾ ಹ್ಯಾಂಡ್ರಿಕ್ಸ್​ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 70 ಎಸೆತಗಳಲ್ಲಿ 60 ರನ್ ಕಲೆಹಾಕಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ 12 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 21 ರನ್ ಚಚ್ಚಿದರು. ಪರಿಣಾಮ ಆಫ್ರಿಕಾ ಎ ನಿಗದಿತ 25 ಓವರ್​ನಲ್ಲಿ 1 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು.

ಬೆಂಗಳೂರಿನಲ್ಲೂ ನಡೆಯಲಿದೆ ಭಾರತ-ಆಫ್ರಿಕಾ ಟಿ-20 ಹೈವೋಲ್ಟೇಜ್ ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ

ಹೀಗಾಗಿ ಜಯದೇವನ್ ನಿಯಮ(ವಿಜೆಡಿ ನಿಯಮ) ಪ್ರಕಾರ ಭಾರತ ಎ ತಂಡಕ್ಕೆ ಗೆಲ್ಲಲು 25 ಓವರ್​ನಲ್ಲಿ 193 ಟಾರ್ಗೆಟ್ ನೀಡಲಾಯಿತು.

ಈ ಟಾರ್ಗೆಟ್ ಬೆನ್ನಟ್ಟಿದ ಭಾರತ ಎ 7.4 ಓವರ್‌ಗಳಲ್ಲಿ ಶುಭ್ಮನ್ ಗಿಲ್(12) ವಿಕೆಟ್‌ಗೆ 56 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. ಎಷ್ಟು ಹೊತ್ತು ಕಾದರು ಮಳೆ ನಿಲ್ಲದಿದ್ದಾಗ ಪಂದ್ಯವನ್ನು ಸ್ಥಗಿತಗೊಳಿಸಿ ಮುಂದಿನ ದಿನಕ್ಕೆ ಮುಂದೂಡಲಾಯಿತು.

ಗುರುವಾರವೂ ಕ್ರೀಡಾಂಗಣ ಒದ್ದೆಯಾಗಿದ್ದ ಕಾರಣ ಪಂದ್ಯ ತಡವಾಗಿ ಆರಂಭಗೊಂಡಿತು. 25 ಓವರ್‌ಗಳಲ್ಲಿ ಗೆಲುವಿಗೆ 193 ರನ್ ಗಳಿಸಬೇಕಾದ ಸವಾಲನ್ನು ಪಡೆದ ಭಾರತ ಎ ತಂಡ ಪರ ಶಿಖರ್ ಧವನ್ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಧವನ್ 43 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಪ್ರಶಾಂತ್ ಚೋಪ್ರಾ ನಿಧಾನಗತಿಯಲ್ಲಿ 26 ರನ್ ಕಲೆಹಾಕಿ ಔಟ್ ಆದರು.

 ಮತ್ತಷ್ಟು ರೋಚಕತೆ ಪಡೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಐಯರ್ ಹಾಗೂ ಶಿವಂ ದುಬೆ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು. ಆದರೆ, ಐಯರ್ 26 ಹಾಗೂ ದುಬೆ 31 ರನ್ ಗಳಿಸಿ ಔಟ್ ಆಗಿದ್ದೇ ತಡ ಭಾರತ ದಿಢೀರ್ ಕುಸಿತ ಕಂಡಿತು. ಕೊನೆಯಲ್ಲಿ ದೀಪಕ್ ಚಹಾರ್ ಔಟಾಗದೆ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 17 ರನ್ ಗಳಿಸಿ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.

ಹೊಸ ಟ್ರಾಫಿಕ್ ರೂಲ್ಸ್​; ದಂಡತೆತ್ತಿ ಬಡವನಾದ ವಿರಾಟ್ ಕೊಹ್ಲಿ..!

ಅಂತಿಮವಾಗಿ ಭಾರತ ಎ 25 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಹರಿಣಗಳು 4 ರನ್​ಗಳ ರೋಚಕ ಜಯ ಸಾಧಿಸಿದರು. ಆಫ್ರಿಕಾ ಪರ ಆನ್ರಿಚ್, ಮಾಕ್ರೊ ಜಾನ್ಸೆನ್ ಹಾಗೂ ಲುಥೊ ಸಿಪಾಮ್ಲಾ ತಲಾ 3 ವಿಕೆಟ್ ಪಡೆದರು.

ಈ ಪಂದ್ಯ ಸೋತಿದ್ದರೂ ಭಾರತ ಎ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ 3-1 ರಿಂದ ಮುನ್ನಡೆ ಸಾಧಿಸಿ ವಶ ಪಡಿಸಿಕೊಂಡಿದೆ .

ಏನಿದು ವಿಜೆಡಿ ನಿಯಮ?:

VJD Method
ವಿಜೆಡಿ ನಿಯಮದ ರೇಖೆ


ಜಯದೇವನ್ ನಿಯಮ ಅಥವಾ ವಿಜೆಡಿ ನಿಯಮ ಪ್ರಮುಖವಾಗಿ ಎರಡು ರೇಖೇಗಳನ್ನು ಆಧರಿಸಿದೆ. ಒಂದು ರನ್​ ಗಳಿಕೆಯ ಸಾಮಾನ್ಯ ರೇಖೆಯಾದರೆ ಮತ್ತೊಂದು ಗುರಿ ನಿಗದಿಪಡಿಸುವ ರೇಖೆ. ರನ್​ ಗಳಿಸಿದ ರೇಖೆಯಲ್ಲಿ ಮೊದಲು ಬ್ಯಾಟ್ ಮಾಡುವ ತಂಡದ ಪತನಗೊಂಡ ವಿಕೆಟ್ ಹಾಗೂ ಪವಲ್ ಪ್ಲೇ ಓವರ್ಸ್​ ಜೊತೆ ಕೊನೆಯ ಸ್ಲಾಗ್ ಓವರ್​​ನಲ್ಲಿನ ರನ್​ರೇಟ್ ಆಧರಿಸಿ 2ನೇ ಇನ್ನಿಂಗ್ಸ್​ ಆರಂಭಿಸುವ ತಂಡಕ್ಕೆ ಟಾರ್ಗೆಟ್ ನಿಗದಿಪಡಿಸಲಾಗುತ್ತದೆ.
First published: