ಬೆಂಗಳೂರು (ಸೆ. 02): ತಿರುವನಂತ ಪುರಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೂರನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ.
ಮಳೆ ಬಂದ ಕಾರಣ 30 ಓವರ್ಗೆ ಪಂದ್ಯವನ್ನು ನಿಗದಿ ಪಡಿಸಲಾಯಿತು.
ಟಾಸ್ ಗೆದ್ದ ಬ್ಯಾಟಿಂಗ್ಗೆ ಇಳಿದ ಹರಿಣಗಳಿಗೆ ಆರಂಭದಲ್ಲೇ ದೀಪಕ್ ಚಹಾರ್ ಶಾಕ್ ನೀಡಿದರು. ರೀಜಾ ಹೆಂಡ್ರಿಕ್ಸ್ರನ್ನು 9 ರನ್ಗೆ ಪೆವಿಲಿಯನ್ಗೆ ಅಟ್ಟಿದರು. ಬಳಿಕ ಮಲನ್ ಹಾಗೂ ಮ್ಯಾಥ್ಯೂ ಬ್ರೀಥ್ಕ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮಲನ್ 37 ರನ್ ಗಳಿಸಿದರೆ, ಮ್ಯಾಥ್ಯೂ 36 ರನ್ ಬಾರಿಸಿದರು.
ಬಳಿಕ ಬಂದ ಬ್ಯಾಟ್ಸ್ಮನ್ಗಳ ಪೈಕಿ ನಾಯಕ ತೆಂಬ ಬವುಮಾ 27 ರನ್ ಕಲೆಹಾಕಿದರೆ, ಹೆನ್ರಿಚ್ ಕ್ಲಾಸೆನ್ 21 ಎಸೆತಗಳಲ್ಲಿ 4 ಸಿಕ್ಸ್ ಸಿಡಿಸಿ 44 ರನ್ ಚಚ್ಚಿದರು. ಪರಿಣಾಮ ಆಫ್ರಿಕಾ ಎ ನಿಗದಿತ 30 ಓವರ್ಗೆ 207 ರನ್ ಗಳಿಸಿತು. ಭಾರತ ಪರ ದೀಪಕ್ ಚಹಾರ್ ಹಾಗೂ ಕ್ರುನಾಲ್ ಪಾಂಡ್ಯ ತಲಾ 2 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.
IND vs WI: ಧೋನಿಯ ಮತ್ತೊಂದು ಮಹತ್ವದ ದಾಖಲೆ ಮುರಿದ ಪಂತ್
ಸದ್ಯ 208 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಎ ಆರಂಭದಲ್ಲೇ ಆಘಾತ ಅನುಭವಿಸಿದೆ. 50 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರುತುರಾಜ್ ಗಾಯಕ್ವಾಡ್ 1 ರನ್ಗೆ ಔಟ್ ಆದರೆ, ರಿಕಿ ಭುಯ್ ಸೊನ್ನೆ ಸುತ್ತಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕ್ರುನಾಲ್ ಪಾಂಡ್ಯ ಆಟ 13 ರನ್ಗೆ ಅಂತ್ಯವಾಯಿತು. ಸದ್ಯ ನಾಯಕ ಮನೀಶ್ ಪಾಂಡೆ ಹಾಗೂ ಕೀಪರ್ ಇಶಾನ್ ಕಿಶನ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.
WATCH: @ishankishan51's one-handed stunner against South Africa A
Full video 📹📹https://t.co/Kjc7GWWxMH
— BCCI Domestic (@BCCIdomestic) September 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ