IND A vs SA A: ಮಿಂಚಿದ ದುಬೆ-ಅಕ್ಷರ್; ಹರಿಣಗಳಿಗೆ ಭಾರತೀಯರಿಂದ ಕಠಿಣ ಸವಾಲು

ಅಂತಿಮ 10 ಓವರ್ ಇರುವಾಗ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆಫ್ರಿಕನ್ ಬೌಲರ್​ಗಳ ಬೆಂಡೆತ್ತಿದ ಈ ಜೋಡಿ ಅರ್ಧಶತಕ ಸಿಡಿಸಿ ಮಿಂಚಿದರಲ್ಲದೆ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

Vinay Bhat | news18-kannada
Updated:August 29, 2019, 4:05 PM IST
IND A vs SA A: ಮಿಂಚಿದ ದುಬೆ-ಅಕ್ಷರ್; ಹರಿಣಗಳಿಗೆ ಭಾರತೀಯರಿಂದ ಕಠಿಣ ಸವಾಲು
ಅಕ್ಷರ್ ಪಟೇಲ್ ಬ್ಯಾಟಿಂಗ್ ವೈಖರಿ
  • Share this:
ಬೆಂಗಳೂರು (ಆ. 29): ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಎ ತಂಡ ಭಾರತ ಎ ವಿರುದ್ಧ ಮೊದಲ ಅನಧಿಕೃತ ಏಕದಿನ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಬ್ಯಾಟಿಂಗ್ ಮುಗಿಸಿರುವ ಭಾರತ ಎ ತಂಡ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್​ರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹರಿಣಗಳಿಗೆ ಗೆಲ್ಲಲು 328 ರನ್​ಗಳ ಕಠಿಣ ಸವಾಲು ನೀಡಿದೆ.

ಆರಂಭದಲ್ಲಿ ಮಳೆ ಅಡ್ಡಿಸಿದ ಕಾರಣ ಪಂದ್ಯವನ್ನು 47 ಓವರ್​ಗೆ ಸೀಮಿತಗೊಳಿಸಲಾಯಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಎ ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ಆಡಿತು. ರುತುರಾಜ್ ಗಾಯಕ್ವಾಡ್ 10 ಹಾಗೂ ಶುಭ್ಮನ್ ಗಿಲ್ 46 ರನ್ ಗಳಿಸಿದರು. ನಂತರ ಬಂದ ಅನ್ಮೋಲ್​ಪ್ರೀತ್ ಸಿಂಗ್ 29 ರನ್ ಗಳಿಸಿದರೆ, ನಾಯಕ ಮನೀಶ್ ಪಾಂಡೆ 39 ರನ್​ಗೆ ಬ್ಯಾಟ್ ಕೆಳಗಿಟ್ಟರು. ಇಶಾನ್ ಕಿಶನ್ ಆಟ 37 ರನ್​ಗೆ ಅಂತ್ಯವಾದರೆ, ಕ್ರುನಾಲ್ ಪಾಂಡ್ಯ 14 ರನ್​ ಗಳಿಸಿದರಷ್ಟೆ.

IND vs WI: ಕೊಹ್ಲಿ 2ನೇ ಟೆಸ್ಟ್​ ಗೆದ್ದರೆ ಭಾರತೀಯ ಕ್ರಿಕೆಟ್​​ನಲ್ಲೇ ಸೃಷ್ಟಿಯಾಗಲಿದೆ ವಿನೂತನ ದಾಖಲೆ!

ಆದರೆ, ಅಂತಿಮ 10 ಓವರ್ ಇರುವಾಗ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆಫ್ರಿಕನ್ ಬೌಲರ್​ಗಳ ಬೆಂಡೆತ್ತಿದ ಈ ಜೋಡಿ ಅರ್ಧಶತಕ ಸಿಡಿಸಿ ಮಿಂಚಿದರಲ್ಲದೆ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಈ ಜೋಡಿಯ ಖಾತೆಯಿಂದ 68 ಎಸೆತಗಳಲ್ಲಿ 121 ರನ್​ಗಳ ಕಾಣಿಕೆ ಮೂಡಿಬಂತು.

 ಅಂತಿಮವಾಗಿ ಭಾರತ ಎ 47 ಓವರ್​ಗೆ 6 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿತು. ದುಬೆ 60 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್​ನೊಂದಿಗೆ ಅಜೇಯ 79 ರನ್ ಬಾರಿಸಿದರೆ, ಅಕ್ಷರ್ ಕೇವಲ 36 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 60 ರನ್ ಚಚ್ಚಿದರು. ಆಫ್ರಿಕಾ ಎ ಪರ ಬ್ಯೂರನ್ ಹೆಂಡ್ರಿಕ್ಸ್​ ಹಾಗೂ ಫಾರ್ಟುನ್ ತಲಾ 2 ವಿಕೆಟ್ ಪಡೆದರು.

ಸದ್ಯ 328 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎ ತಂಡ ಆರಂಭದಲ್ಲೇ ಆಘಾತ ಅನುಭವಿಸಿದೆ.

ಭಾರತ ಎ ತಂಡ ಸೌತ್ ಆಫ್ರಿಕಾ ಎ ತಂಡದ ವಿರುದ್ಧ ಒಟ್ಟು 5 ಪಂದ್ಯಗಳ ಅನಧಿಕೃತ ಏಕದಿನ ಸರಣಿ ಹಾಗೂ 2 ಟೆಸ್ಟ್​ ಪಂದ್ಯಗಳನ್ನಾಡಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published: August 29, 2019, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading