India A vs New Zealand A Unofficial Test: ವರುಣನ ಮುನಿಸು : ಭಾರತ ಎ , ನ್ಯೂಜಿಲೆಂಡ್ ಎ ಮ್ಯಾಚ್ ಡ್ರಾ ನಲ್ಲಿ ಅಂತ್ಯ

ಮಳೆರಾಯನ ಮುನಿಸಿನಿಂದಾಗಿ ಹುಬ್ಬಳ್ಳಿಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವಿನ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ. ಕೆಲ ಓವರ್ ಗಳು ಮಾತ್ರ ನಡೆದಿದ್ದರಿಂದ ಕ್ರೀಡಾಭಿಮಾನಿಗಳಿಗೆ ತೀವ್ರ ನಿರಾಸೆಯಾಯಿತು.

ಭಾರತ ಎ , ನ್ಯೂಜಿಲೆಂಡ್ ಎ ಮ್ಯಾಚ್

ಭಾರತ ಎ , ನ್ಯೂಜಿಲೆಂಡ್ ಎ ಮ್ಯಾಚ್

  • Share this:
ಹುಬ್ಬಳ್ಳಿ: ಹಲವು ವರ್ಷಗಳ ನಂತರ ಹುಬ್ಬಳ್ಳಿಯ ಕ್ರಿಕೆಟ್ ಮೈದಾನದಲ್ಲಿ (Hubballi Cricket Stadium) ನಡೆದ ನಾಲ್ಕು ದಿನಗಳ ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡಿದೆ. ವರುಣರಾಯನ (Rain fall) ಅವಕೃಪೆಯಿಂದಾಗಿ ಹುಬ್ಬಳ್ಳಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡಿದ್ದು, ಕ್ರೀಡಾಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಭಾರತ ಎ (India A) ಹಾಗೂ ನ್ಯೂಜಿಲೆಂಡ್ ಎ (New Zealand A) ತಂಡಗಳ ನಡುವೆ ನಡೆದಿದ್ದ ನಾಲ್ಕು ದಿನಗಳ ಪ್ರಥಮ ದರ್ಜೆ ಟೆಸ್ಟ್ ಮ್ಯಾಚ್ ನಿರೀಕ್ಷೆಯಂತೆ ಡ್ರಾನಲ್ಲಿ ಕೊನೆಗೊಂಡಿದೆ. ಮ್ಯಾಚ್ (Match) ಆರಂಭಗೊಂಡ ದಿನದಿಂದಲೂ ವರುಣರಾಯ ಪದೇ ಪದೇ ಅಡ್ಡಿಪಡಿಸಿದ್ದ.

ಪ್ರಥಮ ಇನ್ನಿಂಗ್ಸ್​ನಲ್ಲಿ ಭಾರತ ಎ ತಂಡ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ 68 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದರೂ, ನಂತರ ಎಚ್ಚರಿಕೆಯ ಆಟವಾಡಿ ಉತ್ತಮವಾಗಿ ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು.

ಪ್ರಿಯಾಂಕ್ 87, ಭರತ್ 74 ರನ್

ಭಾರತ ಎ ತಂಡ 66 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಭಾರತ ಎ ತಂಡದ ಪರ ನಾಯಕ ಪ್ರಿಯಾಂಕ್ ಪಾಂಚಾಲ್ 87 ರನ್, ವಿಕೆಟ್​​ ಕೀಪರ್ ಕೆ.ಎಸ್.ಭರತ್ ಅಜೇಯರಾಗಿ 74 ರನ್,  ಶಾರ್ದೂಲ್ ಠಾಕೂರ್ 25 ರನ್, ಅಭಿಮನ್ಯೂ ಈಶ್ವರನ್ 22 ರನ್, ರಜತ್ ಪಾಟೀದಾರ ಹಾಗೂ ರಾಹುಲ್ ಚಾಹರ್ ತಲಾ 4 ರನ್ ಗಳಿಸಿದ್ದರು.

ನ್ಯೂಜಿಲೆಂಡ್ ಎ ತಂಡದ ಪರ ಲೋಗಾನ್ ಬೀಕ್ ಹಾಗೂ ಜಾಕೋಬ್ ಡೆಫಿ ತಲಾ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.

India A vs New Zealand A Unofficial Test match declared draw saklb mrq
ಪಂದ್ಯ


ಮಳೆ ಅಡ್ಡಿ, ಮ್ಯಾಚ್ ಡ್ರಾ

ಭಾರತ ಎ ತಂಡ ಡಿಕ್ಲೇರ್ ಮಾಡಿಕೊಂಡ ನಂತರ ಬ್ಯಾಟಿಂಗ್​​ಗೆ ಇಳಿದ ನ್ಯೂಜಿಲೆಂಡ್ ಎ ತಂಡ 12 ಓವರ್​​ನಲ್ಲಿ 2 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತ್ತು. ಇಂದು ಕೆಲ ಓವರ್ ಮಾತ್ರ ಮ್ಯಾಚ್ ನಡೆಯಿತು. ಉಳಿದಂತೆ ವರುಣರಾಯನದ್ದೇ ಆಟ ಎನ್ನುವಂತಾಯಿತು. ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಯಾಗಿದ್ದರಿಂದ ಕೊನೆಗೆ ಮ್ಯಾಚ್ ಡ್ರಾ ಎಂದು ಘೋಷಣೆ ಮಾಡಲಾಯಿತು. ಭಾನುವಾರ ಆಗಿದ್ದರಿಂದ ಹೆಚ್ಚಿನ ಪ್ರೇಕ್ಷಕರು ಗ್ಯಾಲರಿಯಲ್ಲಿ ಬಂದು ಕುಳಿತರಾದರೂ, ಮ್ಯಾಚ್ ಸರಿಯಾಗಿ ನಡೆಯದೇ ಇದ್ದುದ್ದರಿಂದ ಕ್ರೀಡಾಭಿಮಾನಿಗಳಿಗೆ ತೀವ್ರ ನಿರಾಸೆಯಾಯಿತು.

ಇದನ್ನೂ ಓದಿ:  Virat Kohli: ವಿರಾಟ್​ ಕೊಹ್ಲಿ ನನಗಿಂತ ಉತ್ತಮ, ಅಚ್ಚರಿಯ ಹೇಳಿಕೆ ನೀಡಿದ ಗಂಗೂಲಿ

ಹುಬ್ಬಳ್ಳಿಯಲ್ಲಿ ಆಡಿದ್ದಕ್ಕೆ ಭರತ್ ಸಂತಸ

ಪಂದ್ಯದ ನಂತರ ಮಾತನಾಡಿದ ಭಾರತ ಎ ತಂಡದ ಬೌಲರ್ ಕೆ.ಎಸ್.ಭರತ್, ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಮ್ಯಾಚ್ ಆಡಿದ್ದಕ್ಕೆ ಸಂತಸವಾಗ್ತಿದೆ. ಈ ಹಿಂದೆ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 116 ರನ್ ಗಳಿಸಿದ್ದೆ. ಈ ಮ್ಯಾಚ್​​ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಪಿಚ್ ಸಹ ಉತ್ತಮವಾಗಿತ್ತು. ನ್ಯೂಜಿಲೆಂಡ್ ಎ ತಂಡದವರು ಕರಾರುವಕ್ ದಾಳಿಯಿಂದ ನಮ್ಮ ನಾಲ್ಕು ವಿಕೆಟ್ ಬೇಗನೇ ಉರುಳಿದವು. ಆದರೆ ನಂತರ ಚೇತರಿಸಿಕೊಂಡು ಉತ್ತಮ ಇನ್ನಿಂಗ್ಸ್ ಕಟ್ಟಿದೆವು.

ಮಳೆಯಿಂದಾಗಿ ಮ್ಯಾಚ್ ಸಂಪೂರ್ಣವಾಗಿ ಆಡಲು ಆಗಲಿಲ್ಲ. ಇಲ್ಲಿನ ಮೈದಾನ ಎಲ್ಲಾ ದೃಷ್ಟಿಯಿಂದಲೂ ಉತ್ತಮವಾಗಿದೆ ಎಂದರು. ಆರ್​ಸಿಬಿ. ತಂಡದಿಂದ ಹೊರಬಿದ್ದಿರೋದಕ್ಕೆ ನನಗೇನೂ ಬೇಜಾರಿಲ್ಲ. ಅವರವರ ತಂಡಗಳ ಲೆಕ್ಕಾಚಾರ ಬೇರೆಯೇ ಇರುತ್ತೆ. ಆರ್​​ಸಿಬಿ. ಒಂದೊಳ್ಳೆಯ ಫ್ರಾಂಚೈಸಿ, ಅದರ ಜೊತೆ ಕೆಲ ವರ್ಷ ಇದ್ದದ್ದಕ್ಕೆ ಹೆಮ್ಮೆ ಇದೆ ಎಂದು ಕೆ.ಎಸ್.ಭರತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ:  PAK vs SL Asia Cup 2022: ಹಸರಂಗ ದಾಳಿಗೆ ತತ್ತರಿಸಿದ ಪಾಕ್​, 6ನೇ ಬಾರಿ ಏಷ್ಯಾ ಕಪ್‌ ಗೆದ್ದ ಶ್ರೀಲಂಕಾ!

ಮತ್ತಷ್ಟು ಪಂದ್ಯಗಳ ನಿರೀಕ್ಷೆಯಲ್ಲಿ ಹುಬ್ಬಳ್ಳಿ ಜನತೆ

ಒಟ್ಟಾರೆ ಕೆಲ ವರ್ಷಗಳ ನಂತರ ಹುಬ್ಬಳ್ಳಿಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ ಮನೆಮಾಡುವಂತೆ ಮಾಡಿತ್ತು. ಮಳೆ ಇಲ್ಲದೇ ಇದ್ದಿದ್ದರೆ ರನ್​​ಗಳ ಹೊಳೆ ಹರಿದು, ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗೋ ಸಾಧ್ಯತೆಗಳಿತ್ತು. ಶೀಘ್ರವೇ ಮತ್ತಷ್ಟು ಮ್ಯಾಚ್​​ಗಳನ್ನು ಇಲ್ಲಿ ಆಡಿಸೋಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿಂತನೆ ನಡೆಸಿದ್ದು, ಕ್ರೀಡಾಭಿಮಾನಿಗಳನ್ನು ಖುಷಿಗೊಳ್ಳುವಂತೆ ಮಾಡಿದೆ.
Published by:Mahmadrafik K
First published: