Deodhar Trophy: ರುತುರಾಜ್-ಅಪರಾಜಿತ್ ಭರ್ಜರಿ ಶತಕ; ಭಾರತ ಬಿ ತಂಡಕ್ಕೆ 303 ರನ್ಸ್​​​ ಟಾರ್ಗೆಟ್!

ರುತುರಾಜ್ ಗಾಯಕ್ವಾಡ್ ಹಾಗೂ ಬಾಬ ಅಪರಾಜಿತ್​ ಅತ್ಯುತ್ತಮ ಆಟ ಪ್ರದರ್ಶಿಸಿದರು. ಭರ್ಜರಿ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 158 ರನ್​ಗಳ ಕಾಣಿಕೆ ನಿಡಿದ ಇವರಿಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು.

Vinay Bhat | news18-kannada
Updated:October 31, 2019, 2:22 PM IST
Deodhar Trophy: ರುತುರಾಜ್-ಅಪರಾಜಿತ್ ಭರ್ಜರಿ ಶತಕ; ಭಾರತ ಬಿ ತಂಡಕ್ಕೆ 303 ರನ್ಸ್​​​ ಟಾರ್ಗೆಟ್!
ರುತುರಾಜ್ ಗಾಯಕ್ವಾಡ್
  • Share this:
ಬೆಂಗಳೂರು (ಅ. 31): ಇಂದಿನಿಂದ 48ನೇ ದೇವಧರ್ ಟ್ರೋಫಿ ಪಂದ್ಯಾವಳಿ ಆರಂಭವಾಗಿದೆ. ರಾಂಚಿಯ ಜೆ.ಎಸ್.ಸಿ.ಎ ಮೈದಾನದಲ್ಲಿ ಭಾರತ ಎ ಮತ್ತು ಭಾರತ ಬಿ ತಂಡ ಸೆಣೆಸಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್​ ಅಂತ್ಯಗೊಂಡಿದ್ದು ಭಾರತ ಬಿ ತಂಡ ರುತುರಾಜ್ ಗಾಯಕ್ವಾಡ್ ಹಾಗೂ ಬಾಬಾ ಅಪರಾಜಿತ್​ರ ಆಕರ್ಷಕ ಶತಕದ ನೆರವಿನಿಂದ 302 ರನ್ ಕಲೆಹಾಕಿದೆ.

ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಹನುಮಾ ವಿಹಾರಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಂತೆ ಬ್ಯಾಟಿಂಗ್​ಗೆ ಇಳಿದ ಪಾರ್ಥಿವ್ ಪಟೇಲ್ ಪಡೆ ಆರಂಭದಲ್ಲೇ ಪ್ರಿಯಾಂಕ್ ಪಂಚಲ್(3) ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 31 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು.

 
ಲಂಕಾ ಸರಣಿ ನಡುವೆಯೇ ಕ್ರಿಕೆಟ್​ನಿಂದ ತಾತ್ಕಾಲಿಕ ವಿರಾಮ ಪಡೆದುಕೊಂಡ ಆಸೀಸ್ ಸ್ಟಾರ್ ಆಟಗಾರ!

ಈ ಸಂದರ್ಭ ಒಂದಾದ ರುತುರಾಜ್ ಗಾಯಕ್ವಾಡ್ ಹಾಗೂ ಬಾಬಾ ಅಪರಾಜಿತ್​ ಅತ್ಯುತ್ತಮ ಆಟ ಪ್ರದರ್ಶಿಸಿದರು. ಭರ್ಜರಿ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 158 ರನ್​ಗಳ ಕಾಣಿಕೆ ನಿಡಿದ ಇವರಿಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು.

ರುತುರಾಜ್ 122 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ನೊಂದಿಗೆ 113 ರನ್ ಬಾರಿಸಿದರೆ, ಅಪರಾಜಿತ್​ 101 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​​ನೊಂದಿಗೆ 101 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಅಂತಿಮವಾಗಿ ಭಾರತ ಬಿ ತಂಡ 50 ಓವರ್​​ನಲ್ಲಿ 6 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು.

 Sourav Ganguly: ಬೆಂಗಳೂರಿನಲ್ಲಿ ಗಂಗೂಲಿ; ಜನರ ಪ್ರೀತಿಗೆ ಮನಸೋತೆ ಎಂದ ದಾದಾ

ಭಾರತ ಎ ಪರ ಜಯದೇವ್ ಉನಾದ್ಕಟ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಕಿತ್ತರೆ, ಸಿದ್ಧಾರ್ಥ್​ ಕೌಲ್ 1 ವಿಕೆಟ್ ಪಡೆರು. ಸದ್ಯ 303 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಎ ತಂಡ ಉತ್ತಮ ಆರಂಭ ಪಡೆದುಕೊಂಡಿದೆ.

 

First published: October 31, 2019, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading