HOME » NEWS » Sports » CRICKET INDIA A VS AUSTRALIA A UMESH YADAV SHINES BUT CAMERON GREEN FRUSTRATES VISITORS WITH TON VB

AUS A vs IND A Practice match: ಸಿರಾಜ್-ಉಮೇಶ್ ಬೌಲಿಂಗ್ ಬಿರುಗಾಳಿ, ಆಸ್ಟ್ರೇಲಿಯಾ 306-9: ಭಾರತ ಅಲ್ಪ ಮುನ್ನಡೆ

59 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಪೃಥ್ವಿ ಶಾ(19) ಹಾಗೂ ಶುಭ್ಮನ್ ಗಿಲ್(29) ಬೇಗನೆ ನಿರ್ಗಮಿಸಿದರು.

news18-kannada
Updated:December 8, 2020, 8:28 AM IST
AUS A vs IND A Practice match: ಸಿರಾಜ್-ಉಮೇಶ್ ಬೌಲಿಂಗ್ ಬಿರುಗಾಳಿ, ಆಸ್ಟ್ರೇಲಿಯಾ 306-9: ಭಾರತ ಅಲ್ಪ ಮುನ್ನಡೆ
IND A vs AUS A
  • Share this:
ಡಿಸೆಂಬರ್ 17 ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಭಾರತ ತಂಡ ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಸಿಡ್ನಿಯ ಡ್ರುಮ್ನೊಯ್​ನ್ ಓವಲ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು ಮೊಹಮ್ಮದ್ ಸಿರಾಜ್ ಹಾಗೂ ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಎ ತಂಡ ತತ್ತರಿಸಿ 306 ರನ್​ಗೆ ಡಿಕ್ಲೇರ್ ಘೋಷಿಸಿದೆ. ಪರಿಣಾಮ ಭಾರತ ಎ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು ಆರಂಭಿಕ ಆಘಾತ ಅನುಭವಿಸಿದೆ. ಇಂದು ಕೊನೆಯ ದಿನದಾಟ ನಡೆಯುತ್ತಿದ್ದು ಪಂದ್ಯ ಕುತೂಹಲ ಕೆರಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 150 ರನ್​ಗೂ ಮುನ್ನವೇ 6 ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ಹನುಮಾ ವಿಹಾರಿ ಇನ್ನಿಂಗ್ಸ್ ಕಟ್ಟಲು ಹೊರಟರಾದರೂ ಯಶಸ್ವಿಯಾಗಲಿಲ್ಲ. ವಿಹಾರಿ 15 ರನ್​ಗೆ ನಿರ್ಗಮಿಸಿದರು.
ಈ ಸಂದರ್ಭ ತಂಡಕ್ಕೆ ಪೂಜಾರ ಹಾಗೂ ನಾಯಕ ಅಜಿಂಕ್ಯಾ ರಹಾನೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಆಸೀಸ್ ಬೌಲರ್​ಗಳನ್ನು ಎದುರಿಸಿದ ಈ ಜೋಡಿ 76 ರನ್​ಗಳ ಜೊತೆಯಾಟ ಆಡಿತು. ಪೂಜಾರ 140 ಎಸೆತಗಳಲ್ಲಿ 54 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೇ ವೃದ್ದಿಮಾನ್ ಸಾಹ ಸೊನ್ನೆ ಸುತ್ತಿದರೆ, ಆರ್. ಅಶ್ವಿನ್ 5 ರನ್​ಗೆ ಸುಸ್ತಾದರು.

ಹೀಗೆ ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ನಾಯಕ ಅಜಿಂಕ್ಯಾ ರಹಾನೆ ಟೊಂಕಕಟ್ಟಿ ನಿಂತರು. ಆಸೀಸ್ ಮಾರಕ ಬೌಲಿಂಗ್ ದಾಳಿಯನ್ನು ಅಚ್ಚುಕಟ್ಟಾಗಿ ಎದುರಿಸಿದ ರಹಾನೆ ನಾಯಕನ ಆಟವಾಡಿ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇವರಿಗೆ ಕೆಲ ಸಮಯ ಕುಲ್ದೀಪ್ ಯಾದವ್(15) ಉತ್ತಮ ಸಾತ್ ನೀಡಿದರು.

ಅಂತಿಮವಾಗಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 247 ರನ್​ಗೆ 9 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಘೋಷಿಸಿತು. ರಹಾನೆ 242 ಎಸೆತಗಳಲ್ಲಿ 18 ಬೌಂಡರಿ, 1 ಸಿಕ್ಸರ್​ನೊಂದಿಗೆ ಅಜೇಯ 117 ರನ್ ಗಳಿಸಿದರು. ಆಸೀಸ್ ಎ ಪರ ಜೇಮ್ಸ್ ಪ್ಯಾಟಿನ್​ಸನ್ 3 ವಿಕೆಟ್ ಕಿತ್ತರು.

ಇತ್ತ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಎ ಸಿರಾಜ್ ಹಾಗೂ ಉಮೇಶ್ ಬೌಲಿಂಗ್ ದಾಳಿಗೆ ಸಿಲುಕಿತು. ಆದರೆ, ಕಾಮ್ರೋನ್ ಗ್ರೀನ್ ಅಜೇಯ 125 ರನ್ ಹಾಗೂ ಟಿಮ್ ಪೈನ್ 44 ಸಿಡಿಸಿದ ಪರಿಣಾಮ 306 ರನ್​ಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿತು. ಭಾರತ ಪರ ಉಮೇಶ್ ಹಾಗೂ ಸಿರಾಜ್ ತಲಾ 3 ವಿಕೆಟ್ ಕಿತ್ತರೆ, ಅಶ್ವಿನ್ 2 ವಿಕೆಟ್ ಪಡೆದರು.

59 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಪೃಥ್ವಿ ಶಾ(19) ಹಾಗೂ ಶುಭ್ಮನ್ ಗಿಲ್(29) ಬೇಗನೆ ನಿರ್ಗಮಿಸಿದರು. ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದರು. ಸದ್ಯ ಕ್ರೀಸ್​ನಲ್ಲಿ ನಾಯಕ ಅಜಿಂಕ್ಯಾ ರಹಾನೆ ಹಾಗೂ ಹನುಮಾ ವಿಹಾರಿ ಇದ್ದಾರೆ. ಭಾರತ ಅಲ್ಪ ಮುನ್ನಡೆ ಸಾಧಿಸಿದೆ.
Published by: Vinay Bhat
First published: December 8, 2020, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories