ಪೃಥ್ವಿ ಶಾ ಸ್ಫೋಟಕ 150 ರನ್; ಹೈಸ್ಕೋರಿಂಗ್ ಪಂದ್ಯದಲ್ಲಿ ಕಿವೀಸ್ ಪಡೆ ವಿರುದ್ಧ ಭಾರತೀಯರಿಗೆ ರೋಚಕ ಜಯ

ಜ. 22ರಿಂದ ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವೆ 3 ಅನಧಿಕೃತ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜ. 30 ಮತ್ತು ಫೆ. 7ರಂದು ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆಯಲಿವೆ.

news18
Updated:January 19, 2020, 5:06 PM IST
ಪೃಥ್ವಿ ಶಾ ಸ್ಫೋಟಕ 150 ರನ್; ಹೈಸ್ಕೋರಿಂಗ್ ಪಂದ್ಯದಲ್ಲಿ ಕಿವೀಸ್ ಪಡೆ ವಿರುದ್ಧ ಭಾರತೀಯರಿಗೆ ರೋಚಕ ಜಯ
ಪೃಥ್ವಿ ಶಾ
  • News18
  • Last Updated: January 19, 2020, 5:06 PM IST
  • Share this:
ಲಿಂಕೋನ್, ನ್ಯೂಜಿಲೆಂಡ್(ಜ. 19): ಪೃಥ್ವಿ ಶಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ನ್ಯೂಜಿಲೆಂಡ್ ಪ್ರವಾಸದ ಎರಡನೇ ಅಭ್ಯಾಸ ಪಂದ್ಯವನ್ನೂ ಜಯಿಸಿದೆ. ಭಾರತ ಎ ತಂಡ ಗಳಿಸಿದ 372 ರನ್​ಗೆ ಪ್ರತಿಯಾಗಿ ನ್ಯೂಜಿಲೆಂಡ್ ಇಲವೆನ್ ತಂಡದ ಹೋರಾಟ 360 ರನ್​ಗೆ ಅಂತ್ಯಗೊಂಡು 12 ರನ್​ಗಳಿಂದ ಸೋಲಪ್ಪಿತು. ಭಾರತದ ಗೆಲುವಿನಲ್ಲಿ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಬೌಲರ್​ಗಳಾದ ಇಶಾನ್ ಪೊರೆಲ್ ಮತ್ತು ಕೃಣಾಲ್ ಪಾಂಡ್ಯ ಕಾರಣರಾದರು. ಜ. 17ರಂದು ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲೂ ಭಾರತೀಯರು ಜಯಭೇರಿ ಭಾರಿಸಿದ್ದರು.

ಲಿಂಕೋನ್(Lincoln) ನಗರದ ಬೆರ್ಟ್ ಸುಕ್ಲಿಫೆ ಓವಲ್ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ ನಿಗದಿತ 50 ಓವರ್ ಮುಗಿಯಲು 4 ಎಸೆತ ಇರುವಂತೆ 372 ರನ್​​ಗೆ ಆಲೌಟ್ ಆಯಿತು. ಯುವ ಪ್ರತಿಭೆ ಪೃಥ್ವಿ ಶಾ ಕೇವಲ 100 ಎಸೆತದಲ್ಲಿ 150 ರನ್ ಚಚ್ಚಿದರು. ಮಯಂಕ್ ಅಗರ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ಜೊತೆ ಎರಡು ಮಹತ್ವದ ಜೊತೆಯಾಟದಲ್ಲಿ ಅವರು ಭಾಗಿಯಾದರು. ಅವರ ಅಮೋಘ ಇನ್ನಿಂಗ್ಸ್​ನಲ್ಲಿ 2 ಸಿಕ್ಸರ್ ಹಾಗೂ 22 ಬೌಂಡರಿ ಒಳಗೊಂಡಿವೆ. ಇನ್ನು, ಆಲ್​ರೌಂಡರ್ ವಿಜಯ್ ಶಂಕರ್ ಕೂಡ 41 ಬಾಲ್​ನಲ್ಲಿ 58 ರನ್ ಭಾರಿಸಿ ಭಾರತೀಯರ ಬೃಹತ್ ಸ್ಕೋರಿಗೆ ನೆರವಾದರು.

ಇದನ್ನೂ ಓದಿ: MS Dhoni: ಮಹೇಂದ್ರ ಸಿಂಗ್ ಧೋನಿ ಎಂಬ ಭಾರತೀಯ ಕ್ರಿಕೆಟ್​ನ ದಶಾವತಾರ!

ಗೆಲ್ಲಲು 373 ರನ್​ಗಳ ಕಠಿಣ ಗುರಿಯನ್ನು ಬೆಂಬತ್ತಿದ ನ್ಯೂಜಿಲೆಂಡ್ ಇಲವೆನ್ ತಂಡ 27 ರನ್ನಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಜ್ಯಾಕ್ ಬೋಯ್ಲೆ ಅಮೋಘ ಶತಕ (130 ರನ್) ಭಾರಿಸಿದರು. ಫಿನ್ ಅಲೆನ್(87), ಡರಿಲ್ ಮಿಶೆಲ್(41) ಮತ್ತು ಡೇನ್ ಕ್ಲೀವರ್ (ಅಜೇಯ 44 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಲವಾಗಿ ಕಿವೀಸ್ ಪಡೆ 360 ರನ್ ಮೊತ್ತ ಪೇರಿಸಲು ಶಕ್ಯಗೊಂಡಿತು.

ಈ ಗೆಲುವಿನೊಂದಿಗೆ ಭಾರತ ಎ ತಂಡ ನ್ಯೂಜಿಲೆಂಡ್ ಪ್ರವಾಸದ ಪೂರ್ವಭಾವಿಯಾಗಿ ನಡೆದ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದಂತಾಗಿದೆ. ಜ. 17ರಂದು ಇದೇ ಲಿಂಕೋನ್ ನಗರದಲ್ಲಿ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತೀಯರು 92 ರನ್​ಗಳಿಂದ ನಿರಾಯಾಸ ಜಯ ಸಂಪಾದಿಸಿದ್ದರು.

ಜ. 22ರಿಂದ ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವೆ 3 ಅನಧಿಕೃತ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜ. 30 ಮತ್ತು ಫೆ. 7ರಂದು ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆಯಲಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ