73ನೇ ಸ್ವಾತಂತ್ರ್ಯೋತ್ಸವ: ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಧೋನಿ ಧ್ವಜಾರೋಹಣ

ಎಂ ಎಸ್ ಧೋನಿ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಎಂ ಎಸ್ ಧೋನಿ

ಎಂ ಎಸ್ ಧೋನಿ

  • News18
  • Last Updated :
  • Share this:
ಬೆಂಗಳೂರು (. 15): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಕಾಶ್ಮೀರದಲ್ಲಿ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿದ್ದಾರೆ.

ಆಗಸ್ಟ್​ 10 ರಂದು ಧೋನಿ ಲಡಾಖ್​​ನ ಲೇಹ್​ಗೆ ಪ್ರಯಾಣ ಬೆಳೆಸಿದ್ದು, ಇಲ್ಲಿನ ಹೊಸ ಕೇಂದ್ರಾಡಳಿತ ಲೇಹ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧೋನಿ ಆಗಸ್ಟ್​ 15 ರಂದು ಸೈನಿಕರ ಜೊತೆಗೂಡಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿದ್ದಾರೆ.

370 ಆರ್ಟಿಕಲ್ ಅನ್ನು ರದ್ದುಗೊಳಿಸಿದ ಕಾರಣ ಕಾಶ್ಮೀರದಲ್ಲಿ ಹೈ ಅಲರ್ಟ್ ಆಗಿರುವ ಸೇನೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದೆ. ಈ ಮಧ್ಯೆ ಧೋನಿ ಲಡಾಖ್​ನ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

 ಕ್ರಿಕೆಟ್ ಇತಿಹಾಸದಲ್ಲೇ ನೂತನ ಸಾಧನೆ; ಒಂದು ದಶಕದಲ್ಲಿ ಕೊಹ್ಲಿ ಬಾರಿಸಿದ ರನ್ ಎಷ್ಟು ಗೊತ್ತಾ?

ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸದ್ಯ ಧೋನಿ ಆಸ್ಪತ್ರೆಗೆ ಭೇಟಿ ನೀಡಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 ಇನ್ನು ಇದೇವೇಳೆ ಧೋನಿ ವಿಶ್ವದ ಅತ್ಯಂತ ಅಪಾಯಕಾರಿ ಸಿಯಾಚಿನ್‌ನ ಗ್ಲೇಸಿಯರ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಸಮುದ್ರ ಮಟ್ಟದಿಂದ 22 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗವಾಗಿದ್ದು, ಇದು ವಿಶ್ವದ ಅತ್ಯಂತ ಅಪಯಕಾರಿ ಯುದ್ಧಭೂಮಿಯಾಗಿದೆ. ಇಲ್ಲಿ ಧೋನಿ ಧ್ವಜಾರೋಹಣ ನೇರವೇರಿಸಲಿದ್ದಾರೆ ಎಂದು ಹೇಳಲಾಗಿದೆ.

 ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಎಂ ಎಸ್ ಧೋನಿ ಮಗಳು ಜೀವಾಳ ನಾಟಕ ಪ್ರದರ್ಶನ ವಿಡಿಯೋ:

First published: