India vs England – ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಅಹ್ಮದಾಬಾದ್​ನ ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

 • Share this:
  ಅಹ್ಮದಾಬಾದ್(ಮಾ. 04): ಎರಡನೇ ದಿನದಲ್ಲಿ ಮುಕ್ತಾಯಗೊಂಡಿದ್ದ ಭಾರತ-ಇಂಗ್ಲೆಂಡ್ ಸರಣಿಯ ಮೂರನೇ ಪಂದ್ಯ ನಡೆದ ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲೇ ಇಂದು ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಗಿಳಿದ ಆಂಗ್ಲರ ಪಡೆ ಆರಂಭಿಕ ಆಘಾತ ಅನುಭವಿಸಿದೆ. 30 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟುಗಾರರಾದ ಜ್ಯಾಕ್ ಕ್ರಾಲೀ, ಡಾಮ್ ಸಿಬ್ಲೀ ಹಾಗೂ ಸೆಕೆಂಡ್ ಡೌನ್ ಬಂದ ಜೋ ರೂಟ್ ಎರಡಂಕಿ ಮೊತ್ತವನ್ನೂ ಗಳಿಸಿದೇ ಔಟಾಗಿ ಪೆವಿಲಿಯನ್​ಗೆ ಮರಳಿದರು. ಆದರೆ, ನಾಲ್ಕನೇ ವಿಕೆಟ್​ಗೆ ಜಾನಿ ಬೇರ್​ಸ್ಟೋ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಜೊತೆಯಾಟದ ಮೂಲಕ ತಂಡದ ಮೊದಲ ಇನಿಂಗ್ಸ್​ಗೆ ಚೇತರಿಕೆ ನೀಡಿದರು.

  ಭಾರತಕ್ಕೆ ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುಂದಿದೆಯಾದರೂ ಈ ಕೊನೆಯ ಪಂದ್ಯ ಬಹಳ ಮಹತ್ವ ಹೊಂದಿದೆ. ಸರಣಿ ಗೆಲುವನ್ನು ಖಚಿತಪಡಿಸಿಕೊಳ್ಳುವುದಷ್ಟೇ ಅಲ್ಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ತಲುಪಲು ಭಾರತಕ್ಕೆ ಈ ಪಂದ್ಯದಲ್ಲಿ ಸೋಲಾಗದಂತೆ ನೋಡಿಕೊಳ್ಳಬೇಕಿದೆ. ಈ ಪಂದ್ಯದಲ್ಲಿ ಡ್ರಾ ಆಗುವ ಸಾಧ್ಯತೆಯಂತೂ ತೀರಾ ಕಡಿಮೆ ಇದ್ದು, ಭಾರತಕ್ಕೆ ಗೆಲುವು ಅನಿವಾರ್ಯ ಎಂಬಂತಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

  ಇದನ್ನೂ ಓದಿ: ತಂಡಕ್ಕೆ ಮರಳಿದ ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್; ಮಾ. 8ಕ್ಕೆ ನಾಕೌಟ್ ಹಂತ ಆರಂಭ

  ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದ ನಂತರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, ನಂತರದ ಎರಡು ಪಂದ್ಯಗಳ ಸೋಲು ಅದನ್ನ ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಈ ನಾಲ್ಕನೇ ಪಂದ್ಯವನ್ನ ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾ ತಂಡ ಭಾರತವನ್ನ ಹಿಂದಿಕ್ಕುತ್ತದೆ. ಭಾರತ ಈ ಪಂದ್ಯವನ್ನ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳುತ್ತದೆ. ನ್ಯೂಜಿಲೆಂಡ್ ತಂಡ ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.

  ಇಂಗ್ಲೆಂಡ್ ತಂಡ: ಜೋ ರೂಟ್, ಜ್ಯಾಕ್ ಕ್ರಾಲೀ, ಡಾಮ್ ಸಿಬ್ಲೀ, ಜಾನಿ ಬೇರ್​ಸ್ಟೋ, ಬೆನ್ ಸ್ಟೋಕ್ಸ್, ಓಲೀ ಪೋಪ್, ಡಾನ್ ಲಾರೆನ್ಸ್, ಬೆನ್ ಫೋಕ್ಸ್, ಡಾಮ್ ಬೆಸ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

  ಭಾರತ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಧ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್
  Published by:Vijayasarthy SN
  First published: