• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ರಹಾನೆಗಿಂತ ಮೊದಲು ಜಡೇಜಾ ಬ್ಯಾಟ್ ಮಾಡಲು ಕಾರಣ? ಎರಡನೇ ದಿನದಾಟದಲ್ಲೂ ಮಿಂಚುತ್ತಾರಾ ಬೌಲರ್ಸ್?

ರಹಾನೆಗಿಂತ ಮೊದಲು ಜಡೇಜಾ ಬ್ಯಾಟ್ ಮಾಡಲು ಕಾರಣ? ಎರಡನೇ ದಿನದಾಟದಲ್ಲೂ ಮಿಂಚುತ್ತಾರಾ ಬೌಲರ್ಸ್?

ಇಂಗ್ಲೆಂಡ್ ಟೆಸ್ಟ್ ಆಟಗಾರರು

ಇಂಗ್ಲೆಂಡ್ ಟೆಸ್ಟ್ ಆಟಗಾರರು

England vs India 4th Test Match- ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 191 ರನ್ಗೆ ಅಂತ್ಯಗೊಂಡರೆ, ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ. ಶಾರ್ದೂಲ್ ಠಾಕೂರ್ ಭರ್ಜರಿ 57 ರನ್ ಗಳಿಸಿದ್ದು ಹೈಲೈಟ್.

  • Cricketnext
  • 5-MIN READ
  • Last Updated :
  • Share this:

ಲಂಡನ್: ಇಲ್ಲಿಯ ದ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England 4th Match)) ಮಧ್ಯೆ ನಿನ್ನೆ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೌಲರ್​ಗಳದ್ದೇ ಪಾರುಪತ್ಯ ನಡೆಯಿತು. ಮೊದಲ ದಿನದಾಟದಲ್ಲಿ 13 ವಿಕೆಟ್​ಗಳು ಪತನಗೊಂಡವು. ಭಾರತದ ಮೊದಲ ಇನ್ನಿಂಗ್ಸ್ (India first innings) 191 ರನ್​ಗೆ ಅಂತ್ಯವಾಯಿತು. ಆತಿಥೇಯ ಇಂಗ್ಲೆಂಡ್ ತಂಡ 53 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಂತಿದೆ. ಇವತ್ತಿನ ಎರಡನೇ ದಿನದಾಟದಲ್ಲಿ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 200 ರನ್​ವೊಳಗೆ ನಿಯಂತ್ರಿಸುತ್ತಾರ ಎಂಬ ಕುತೂಹಲ ಇದೆ. ನಿನ್ನೆಯ ಮೊದಲ ದಿನದಾಟದಲ್ಲಿ ಅಚ್ಚರಿ ಮೂಡಿಸುವ ಹೆಚ್ಚಿನ ಅಂಶಗಳು ಇರಲಿಲ್ಲ. ಶಾರ್ದೂಲ್ ಠಾಕೂರ್ (Shardul Thakur) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಪ್ರಮುಖ ಹೈಲೈಟ್ ಆಗಿತ್ತು. ಅದು ಬಿಟ್ಟರೆ ಭಾರತೀಯ ಬ್ಯಾಟುಗಾರರ ನೀರಸ ಪ್ರದರ್ಶನವೇ ಎದ್ದುಕಂಡಿದ್ದು. ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅರ್ಧಶತಕ ಗಳಿಸಿದರು. ಅವರಿಬ್ಬರನ್ನು ಬಿಟ್ಟರೆ ಕೆಎಲ್ ರಾಹುಲ್ ಅವರು ಗಳಿಸಿದ 17 ರನ್ ಗರಿಷ್ಠ ಸ್ಕೋರಾಯಿತು.


ಹಿಂದಿನ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಜಿಂಕ್ಯ ರಹಾನೆ (Ajinkya Rahane) ಅವರಿಗಿಂತ ಮೊದಲು ರವೀಂದ್ರ ಜಡೇಜಾ (Ravindra Jadeja) ಅವರನ್ನ ಬ್ಯಾಟಿಂಗ್​ಗೆ ಕಳುಹಿಸಿದ್ದು ಅಚ್ಚರಿ ಮೂಡಿಸಿದ್ದು. ಥರ್ಡ್ ಡೌನ್​ನಲ್ಲಿ ಜಡೇಜಾ ಆಡಿರುವುದು ತೀರಾ ಅಪರೂಪ. ಅದರಲ್ಲೂ ವಿಶೇಷ ಸಂದರ್ಭ ಇಲ್ಲದಿದ್ದರೂ ಜಡೇಜಾಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದು ಗಮನಾರ್ಹ. ಆ ಸಂದರ್ಭದಲ್ಲಿ ಟಿವಿ ವೀಕ್ಷಕ ವಿವರಣೆಗಾರರಾಗಿದ್ದ ಸುನೀಲ್ ಗವಾಸ್ಕರ್ ಈ ಬೆಳವಣಿಗೆ ಬಗ್ಗೆ ತಮ್ಮದೇ ವಿಶ್ಲೇಷಣೆ ನೀಡಿದರು. ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದಿದ್ದ ಇಂಗ್ಲೆಂಡ್ ಬೌಲರ್​ಗಳ ಲಯ ಮುರಿಯುವ ತಂತ್ರ ಇದಾಗಿರಬಹುದು ಎಂಬುದು ಅವರ ಅನಿಸಿಕೆ. ಜಡೇಜಾ ಎಡಗೈ ಬ್ಯಾಟ್ಸ್​ಮನ್, ವಿರಾಟ್ ಕೊಹ್ಲಿ ಬಲಗೈ ಬ್ಯಾಟ್ಸ್​ಮನ್. ಈ ಎಡಗೈ ಮತ್ತು ಬಲಗೈ ಬ್ಯಾಟಿಂಗ್ ಜೋಡಿ ವಿರುದ್ಧ ಬೌಲಿಂಗ್ ಮಾಡಲು ಇಂಗ್ಲೆಂಡ್ ತಂಡ ತನ್ನ ಕಾರ್ಯತಂತ್ರವನ್ನು ಬದಲಿಸಬೇಕಾಗುತ್ತದೆ. ಇದರಿಂದ ವಿರಾಟ್ ಕೊಹ್ಲಿಗೆ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಇರಬಹುದು.


ಇದನ್ನೂ ಓದಿ: Indian cricketer wives: ಟೀಮ್​ ಇಂಡಿಯಾ ತಂಡಕ್ಕೆ ಸ್ಪೂರ್ತಿ ತುಂಬಿದ ಕ್ರಿಕೆಟಿಗರ ಪತ್ನಿಯರು


ರಹಾನೆ ಮೂರನೇ ಕ್ರಮಾಂಕದಲ್ಲಿ ಬರದೇ ಇರಲು ಇನ್ನೊಂದು ಕಾರಣ ಇರಬಹುದು ಎಂದು ಸುನೀಲ್ ಗವಾಸ್ಕರ್ ಅಂದಾಜಿಸಿದರು. ಚೇತೇಶ್ವರ್ ಪೂಜಾರ ಔಟಾದಾಗ ರಹಾನೆ ಬರಬೇಕಿತ್ತು. ಆಗಿನ್ನೂ ಅವರು ಸಿದ್ಧಗೊಂಡಿಲ್ಲದಿರುವುದು ಮೇಲ್ನೋಟಕ್ಕೆ ತೋರುತ್ತದೆ. ಅದಾಗಲೇ ಸಿದ್ಧವಾಗಿದ್ದ ಜಡೇಜಾ ಅಡಿ ಇಟ್ಟಂತಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು. ಅದೇನೇ ಇರಲಿ, ಜಡೇಜಾ ಮೇಲಿನ ಕ್ರಮಾಂಕಕ್ಕೆ ಬಂದ ಉದ್ದೇಶ ಮಾತ್ರ ಈಡೇರಲಿಲ್ಲ. ಜಡೇಜಾ 10 ರನ್ ಗಳಿಸಿ ಔಟಾದರು.


ಭಾರತದ ಮೊದಲ ಇನ್ನಿಂಗ್ಸ್ 191 ರನ್​ಗೆ ಅಂತ್ಯಗೊಂಡ ಬಳಿಕ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ 6 ರನ್ನಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಆದರೆ, ಡೇವಿಡ್ ಮಲನ್ ಮತ್ತು ಜೋ ರೂಟ್ ಇಬ್ಬರೂ 3ನೇ ವಿಕೆಟ್​ಗೆ 46 ರನ್ ಸೇರಿಸಿ ಮಾನ ಉಳಿಸಿದರು. ಜೋ ರೂಟ್ ಭಾರತದ ಪಾಲಿಗೆ ಮತ್ತೊಮ್ಮೆ ಮಗ್ಗುಲು ಮುಳ್ಳಾಗಿ ಪರಿಣಮಿಸಬಹುದು ಎನ್ನುವಷ್ಟರಲ್ಲಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಔಟಾದರು.


ಐದು ಪಂದ್ಯಗಳ ಸರಣಿಯಲ್ಲಿ ಇದು ನಾಲ್ಕನೇ ಪಂದ್ಯವಾಗಿದ್ದು, ಸರಣಿ ಸದ್ಯ 1-1ರಲ್ಲಿ ಸಮವಾಗಿದೆ. ಈ ನಾಲ್ಕನೇ ಪಂದ್ಯದಲ್ಲಿ ಭಾರತ ಕೆಲ ಅಚ್ಚರಿಯ ಬದಲಾವಣೆ ಮಾಡಿತು. ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನ ಸೇರಿಸಿಕೊಳ್ಳಲಾಗಿದೆ. ಆದರೆ, ಆರ್ ಅಶ್ವಿನ್ ಅವರಿಗೆ ಸ್ಥಾನ ಸಿಗದೇ ಇರುವುದೂ ಅಚ್ಚರಿ ಮೂಡಿಸಿತು.

First published: