IND vs WI: ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ!

ಹಾರ್ದಿಕ್ ಪಾಂಡ್ಯ ಹಾಗೂ ಜಸ್​ಪ್ರೀತ್ ಬುಮ್ರಾ ಈಗಷ್ಟೆ ಗುಣಮುಖರಾಗುತ್ತಿದ್ದು ಜನವರಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಸದ್ಯದ ವೆಸ್ಟ್​ ಇಂಡೀಸ್ ಏಕದಿನ ಸರಣಿಗೆ ಭುವಿ ಹೊರತು ಪಡಿಸಿದರೆ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ಇಬ್ಬರು ವೇಗಿಗಳಿದ್ದಾರಷ್ಟೆ.

Vinay Bhat | news18-kannada
Updated:December 13, 2019, 1:23 PM IST
IND vs WI: ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ!
ಟೀಂ ಇಂಡಿಯಾ ಆಟಗಾರರು
  • Share this:
ಬೆಂಗಳೂರು (ಡಿ. 13): ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕೊಹ್ಲಿ ಪಡೆ ಚೆನ್ನೈ ತಲುಪಿದೆ. ಆದರೆ, ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತಕ್ಕೆ ಮಗದೊಂದು ಆಘಾತ ಉಂಟಾಗಿದೆ.

ಈಗಾಗಲೇ ಇಂಜುರಿಯಿಂದ ಗುಣಮುಖರಾಗದ ಕಾರಣ ಶಿಖರ್ ಧವನ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಮಯಾಂಕ್ ಅಗರ್ವಾಲ್​ಗೆ ಅವಕಾಶ ಕಲ್ಪಿಸಲಾಗಿದೆ.

(VIDEO): ಅಂಪೈರ್ ಔಟ್ ಕೊಟ್ಟರೂ ನಾನು ಔಟ್ ಅಲ್ಲ ಎಂದು ಕ್ರೀಸ್ ಬಿಟ್ಟು ಕದಲದ ಯೂಸುಫ್ ಪಠಾಣ್

ಹೀಗಿರುವಾಗ ಟೀಂ ಇಂಡಿಯಾದ ಮತ್ತೊಬ್ಬ ಪ್ರಮುಖ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ವಿಂಡೀಸ್ ಏಕದಿನ ಸರಣಿಗೆ ಅನುಮಾನ ಎನ್ನಲಾಗುತ್ತಿದೆ.

ಸ್ನಾಯು ಸೆಳೆತಕ್ಕೊಳಗಾಗಿರುವ ಭುವಿ ವಿಂಡೀಸ್ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೆ ಅಧಿಕೃತ ಮಾಹಿತಿ ತಿಳಿಸಿಲ್ಲ. ಭುವನೇಶ್ವರ್ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗಲಿದ್ದಾರೆ ಎಂಬುವುದು ಕುತೂಹಲ ಕೆರಳಿಸಿದೆ.

ಹಾರ್ದಿಕ್ ಪಾಂಡ್ಯ ಹಾಗೂ ಜಸ್​ಪ್ರೀತ್ ಬುಮ್ರಾ ಈಗಷ್ಟೆ ಗುಣಮುಖರಾಗುತ್ತಿದ್ದು ಜನವರಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಸದ್ಯದ ವೆಸ್ಟ್​ ಇಂಡೀಸ್ ಏಕದಿನ ಸರಣಿಗೆ ಭುವಿ ಹೊರತು ಪಡಿಸಿದರೆ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ಇಬ್ಬರು ವೇಗಿಗಳಿದ್ದಾರಷ್ಟೆ.

ಹೀಗಾಗಿ ಭವಿ ಜಾಗಕ್ಕೆ ಸೂಕ್ತ ಆಟಗಾರನ ಹೆಸರು ಬಿಸಿಸಿಐ ತಿಳಿಸಬೇಕಿದೆ. ಮೂಲಗಳ ಪ್ರಕಾರ ನವ್​ದೀಪ್ ಸೈನಿ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಕನ್ನಡಿಗರ ಮಧ್ಯೆ ಶುರುವಾಗಿದೆ ಬಿಗ್ ಫೈಟ್!

ಮೊದಲ ಏಕದಿನ ಪಂದ್ಯ ಡಿ. 15 ರಂದು ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಹ್ಲಿ ಪಡೆ ಈಗಾಗಲೇ ಚೆನ್ನೈಗೆ ಬಂದಿಳಿದಿದೆ. ಎರಡನೇ ಪಂದ್ಯ ಡಿ. 18ಕ್ಕೆ ವಿಶಾಖಪಟ್ಟಣ ಹಾಗೂ ಅಂತಿಮ ಕದನ ಡಿ. 22 ರಂದು ಕತಕ್​ನಲ್ಲಿ ಏರ್ಪಡಿಸಲಾಗಿದೆ.

ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಮಯಾಂಕ್ ಅಗರ್ವಾಲ್, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ.

First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ