India vs West Indies 3rd T20I: ಭಾರತ ಪರ ಕಣಕ್ಕಿಳಿಯಲಿದ್ದಾರೆ 3 ಹೊಸ ಆಟಗಾರರು?

ರಾಹುಲ್ ಚಹಾರ್ ಮೂರನೇ ಟಿ-20 ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದ್ದು, ಪದಾರ್ಪಣೆ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

Vinay Bhat | news18
Updated:August 6, 2019, 3:36 PM IST
India vs West Indies 3rd T20I: ಭಾರತ ಪರ ಕಣಕ್ಕಿಳಿಯಲಿದ್ದಾರೆ 3 ಹೊಸ ಆಟಗಾರರು?
ಟೀಂ ಇಂಡಿಯಾ ಆಟಗಾರರು
Vinay Bhat | news18
Updated: August 6, 2019, 3:36 PM IST
ಬೆಂಗಳೂರು (ಆ. 06): ಭಾರತ ಇಂದು ವೆಸ್ಟ್​ ಇಂಡೀಸ್ ವಿರುದ್ಧ ಅಂತಿಮ ಟಿ-20 ಪಂದ್ಯವನ್ನಾಡುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿ ಪೈಕಿ 2-0 ಮುನ್ನಡೆಯೊಂದಿಗೆ ಸರಣಿ ವಶ ಪಡಿಸಿಕೊಂಡಿರುವ ಕೊಹ್ಲಿ ಪಡೆಗೆ ಇದೊಂದು ಔಪಚಾರಿಕ ಪಂದ್ಯ. ಆದರೂ ಕಡೆಗಣಿಸದೆ ಸರಣಿ ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ.

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸೂಚನೆ ಸಿಕ್ಕಿದೆ. ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಲ್ಲು ಒಂದೇ ಪಂದ್ಯದಲ್ಲಿ ಮೋಡಿ ಮಾಡಲು ಚಹಾರ್ ಬ್ರದರ್ಸ್​ ಕಾದು ಕುಳಿತಿದ್ದಾರೆ.

ರಾಹುಲ್ ಚಹಾರ್ ಮೂರನೇ ಟಿ-20 ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದ್ದು, ಪದಾರ್ಪಣೆ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಹುಲ್ 16 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತಿದ್ದಾರೆ. 19 ರನ್ ನೀಡಿ 3 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. ದೀಪಕ್ ಚಹಾರ್ ಕೂಡ ಈಗಾಗಲೇ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಅನುಭವವಿದೆ.

India vs West Indies: ಇಂದು ಅಂತಿಮ ಟಿ-20; ಸರಣಿ ಕ್ಲೀನ್ ಸ್ವೀಪ್ ಮಾಡಲು ಕೊಹ್ಲಿ ಮಾಸ್ಟರ್​ ಪ್ಲ್ಯಾನ್​​

ವಾಷಿಂಗ್ಟನ್ ಸುಂದರ್ ಹಾಗೂ ಖಲೀಲ್ ಅಹ್ಮದ್​ಗೆ ವಿಶ್ರಾಂತಿ ನೀಡಿ ಚಹಾರ್ ಬ್ರದರ್ಸ್​​ ಅವಕಾಶ ಪಡೆದುಕೊಂಡರೆ, ಮನೀಶ್ ಪಾಂಡೆ ಜಾಗದಲ್ಲಿ ಅಯ್ಯರ್ ಆಡಬಹುದು.

ಒಟ್ಟಾರೆ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡುದ ಅಂದಾಜಲ್ಲಿದ್ದರೆ, ಇತ್ತ ವಿಂಡೀಸ್ ಕನಿಷ್ಠ ಕೊನೆಯ ಪಂದ್ಯವನ್ನಾದರು ಗೆದ್ದು ಮಾನಉಳಿಸಿಕೊಳ್ಳಲು ಹೊಂಚು ಹಾಕಿದೆ. ಭಾರತದ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...