news18-kannada Updated:January 8, 2020, 12:38 PM IST
ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯರ್
ನಿನ್ನೆ ಇಂದೋರ್ನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ಬೌಲರ್ಗಳ ಸಂಘಟಿತ ದಾಳಿ ಮತ್ತು ಬ್ಯಾಟ್ಸ್ಮನ್ಗಳ ಅಮೋಘ ಪ್ರದರ್ಶನದ ನೆರವಿನಿಂದ ಕೊಹ್ಲಿ ಪಡೆ 7 ವಿಕೆಟ್ಗಳಿಂದ ಗೆದ್ದು ಬೀಗಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಶ್ರೀಲಂಕಾ ನೀಡಿದ್ದ 143 ರನ್ಗಳ ಟಾರ್ಗೆಟ್ ಬೆನ್ನಟ್ಟಿದ
ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತ್ತು. ಓಪನರ್ಗಳಾದ ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್ ಬೊಂಬಾಟ್ ಆಟ ಪ್ರದರ್ಶಿಸಿದರು. ಇವರಿಬ್ಬರು ಔಟ್ ಆದ ಬಳಿಕ ನಡೆದಿದ್ದು ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಆಟ.
IPL 2020; ಈ ಬಾರಿಯ ಐಪಿಎಲ್ ಎಷ್ಟು ದಿನ ನಡೆಯಲಿದೆ ಗೊತ್ತಾ?; ಸಮಯದಲ್ಲೂ ಬದಲಾವಣೆ!
ಬೇಗನೆ ಪಂದ್ಯವನ್ನು ಮುಗಿಸಬೇಕೆಂದುಕೊಂಡಿದ್ದ ಐಯರ್ ಬಿರುಸಿನ ಆಟವಾಡಿ 34 ರನ್ ಚಚ್ಚಿದರು. ಅದರಲ್ಲು ಐಯರ್ ಸಿಡಿಸಿದ ಒಂದು ಸಿಕ್ಸ್ ನೆರೆದಿದ್ದವರನ್ನು ಒಮ್ಮೆ ದಂಗಾಗಿಸಿತು. 16ನೇ ಓವರ್ನ ಹಸರಂಗ ಬೌಲಿಂಗ್ನಲ್ಲಿ ಐಯರ್ ಲಾಂಗ್ನಲ್ಲಿ ಬಿಗ್ ಸಿಕ್ಸ್ ಸಿಡಿಸಿದರು. ಇದನ್ನು ಕಂಡು ಸ್ವತಃ ಕೊಹ್ಲಿ ಕೂಡ ಒಮ್ಮೆ ಶಾಕ್ ಆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು. ತಂಡದ ಪರ ಕುಸಲ್ ಪೆರೇರಾ 34 ರನ್ ಗಳಿಸಿದ್ದೇ ಹೆಚ್ಚು. ಭಾರತ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತು ಮಿಂಚಿದರು.
IPL 2020: (VIDEO) ಐಪಿಎಲ್ನಲ್ಲಿ ಅಭಿಮಾನಿಗಳನ್ನು ಮೂಕವಿಸ್ಮಿತಗೊಳಿಸಿದ 5 ಅದ್ಭುತ ಹೊಡೆತ ಯಾವುವು ಗೊತ್ತಾ?
143 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಓಪನರ್ಗಳಾದ ಶಿಖರ್ ಧವನ್(32) ಹಾಗೂ ಕೆ ಎಲ್ ರಾಹುಲ್(45) ಗೆಲುವನ್ನ ಸನಿಹ ಮಾಡಿ ನಿರ್ಗಮಿಸಿದರು. ಕೊನೆಯಲ್ಲಿ ಶ್ರೇಯಸ್ ಐಯರ್ 34 ಹಾಗೂ ವಿರಾಟ್ ಕೊಹ್ಲಿ ಅಜೇಯ 30 ರನ್ ಸಿಡಿಸಿ 17.3 ಓವರ್ನಲ್ಲೇ ತಂಡಕ್ಕೆ ಗೆಲುವು ತಂದಿಟ್ಟರು.
7 ವಿಕೆಟ್ಗಳ ಜಯದೊಂದಿಗೆ ಭಾರತ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಗೆ ರದ್ದಾಗಿತ್ತು. ಅಂತಿಮ ಟಿ-20 ಕದನ ಜ. 10 ಶುಕ್ರವಾರದಂದು ಪುಣೆಯಲ್ಲಿ ನಡೆಯಲಿದೆ.
Published by:
Vinay Bhat
First published:
January 8, 2020, 12:38 PM IST