Shaheen Afridi- ಶಾಹೀನ್ ಮೊದಲ ಓವರ್ ತಂಬಾ ಡೇಂಜರ್ ಎಂದು ಇವರಂದದ್ದು ನಿಜ ಆಯ್ತು

T20 World Cup, India vs Pakistan Match: ವೇಗದ ಬೌಲರ್ ಶಾಹೀನ್ ಅಫ್ರಿದಿ ತಮ್ಮ ಮೊದಲ ಓವರ್​ನಲ್ಲಿ ವಿಕೆಟ್ ತೆಗೆಯುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಕ ಉಸ್ಮಾನ್ ಸಮೀವುದ್ದೀನ್ ನಿನ್ನೆ ಅಭಿಪ್ರಾಯಪಟ್ಟಿದ್ದು ನಿಜವಾಗಿದೆ.

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ

 • Share this:
  ದುಬೈ, ಅ. 24: ಶಾಹೀನ್ ಅಫ್ರಿದಿ ವಿಶ್ವ ಕ್ರಿಕೆಟ್​ನ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದಾರೆ. ಎತ್ತರ ಕಾಯ ಹೊಂದಿರುವ ಇವರು ವೇಗದ ಬೌಲಿಂಗ್​ಗೆ ಬೇಕಾದ ಮೈಕಟ್ಟು ಹೊಂದಿದ್ದಾರೆ. ವೇಗ, ಸ್ವಿಂಗ್, ಯಾರ್ಕರ್, ಬೌನ್ಸರ್ ಇತ್ಯಾದಿ ಫಾಸ್ಟ್ ಬೌಲರ್​ಗೆ ಬೇಕಾದ ಅಸ್ತ್ರಗಳು ಇವರಲ್ಲಿವೆ. ಆದರೆ ಎಲ್ಲರೂ ಶಾಹೀನ್ ಅಫ್ರಿದಿಗೆ ಹೆಚ್ಚಾಗಿ ಎದುರುವುದು ಇವರ ಮೊದಲ ಓವರ್ ಎದುರಿಸುವಾಗ. ಇಎಸ್​ಪಿಎನ್ ಕ್ರಿಕ್ ಇನ್ಫೋ ವೆಬ್ ಸೈಟ್​ನ ಕ್ರಿಕೆಟ್ ವಿಶ್ಲೇಷಕ ಉಸ್ಮಾನ್ ಸಮೀವುದ್ದೀನ್ ಅವರು ನಿನ್ನೆ ಬರೆದ ತಮ್ಮ ಒಂದು ಲೇಖನದಲ್ಲಿ ಶಾಹೀನ್ ಅಫ್ರಿದಿ ಅವರ ಮೊದಲ ಓವರ್ ಕರಾಮತ್ತಿನ ಬಗ್ಗೆ ಬೆಳಕು ಚೆಲ್ಲಿದ್ದರು. ಶಾಹೀನ್ ಅವರ ಮೊದಲ ಓವರ್ ಅನ್ನು ದಾಟಿದರೆ ಅದು ನಿಮ್ಮ ಅದೃಷ್ಟ ಎಂದು ಭಾರತೀಯ ಕ್ರಿಕೆಟಿಗರನ್ನ ಅವರು ಎಚ್ಚರಿಸಿದ್ದರು. ಅದು ನಿಜವಾಗಿದೆ. ಶಾಹೀನ್ ಅವರ ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ ಬಲಿಯಾಗಿ ಹೋದರು.

  “ನಿಮ್ಮ ತಂಡದ ಅನಾಲಿಸ್ಟ್ ಪ್ರಾಮಾಣಿಕರಾಗಿದ್ದರೆ ಶಾಹೀನ್ ಅಫ್ರಿದಿಯ ಮೊದಲ ಓವರ್​ನಲ್ಲಿ ನೀವು ಔಟಾಗುವ ಸಾಧ್ಯತೆ ಹೆಚ್ಚು ಎಂದು ಸಂದೇಶ ಕೊಟ್ಟಿರಬಹುದು… ಅವರು ಹೇಳದೇ ಇದ್ದರೂ ನೀವು ಶಾಹೀನ್ ಅಫ್ರಿದಿ ಅವರ ಮೊದಲ ಓವರ್​ನಲ್ಲಿ ಔಟಾಗುವ ಸಾಧ್ಯತೆ ಮೂರನೇ ಒಂದು ಭಾಗದಷ್ಟು” ಎಂದು ಉಸ್ಮಾನ್ ಸಮೀವುದ್ದೀನ್ ತಮ್ಮ ಲೇಖನದ ಆರಂಭದಲ್ಲಿ ಬರೆದಿದ್ದರು.

  2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶಾಹೀನ್ ಅಫ್ರಿದಿ ಬಹಳ ಡೇಂಜರಸ್ ಬೌಲರ್. ಟೆಸ್ಟ್ ಕ್ರಿಕೆಟ್​ನಲ್ಲಿ 19 ಪಂದ್ಯಗಳಿಂದ 76 ವಿಕೆಟ್ ಪಡೆದಿದ್ದಾರೆ. ಓಡಿಐ ಕ್ರಿಕೆಟ್​ನಲ್ಲಿ 28 ಪಂದ್ಯಗಳಿಂದ 53 ವಿಕೆಟ್ ಕಿತ್ತಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 30 ಪಂದ್ಯಗಳಿಂದ 32 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ಹೋಲಿಸಿದರೆ ಟಿ20ಯಲ್ಲಿ ಅವರು ವಿಕೆಟ್ ಪಡೆದಿರುವುದು ಕಡಿಮೆಯಾದರೂ ಅವರ ಮೊದಲ ಓವರ್ ಎಲ್ಲಾ ಮಾದರಿ ಕ್ರಿಕೆಟ್​ನಲ್ಲೂ ಅಪಾಯವೆನಿಸಿದೆ.

  ಉಸ್ಮಾನ್ ಸಮೀವುದ್ದೀನ್ ನೀಡಿರುವ ಅಂಕಿ ಅಂಶದ ಪ್ರಕಾರ ಶಾಹೀನ್ ಅಫ್ರಿದಿ ಆಡಿರುವ 61 ಇನ್ನಿಂಗ್ಸ್ ಪೈಕಿ ಮೊದಲ ಓವರ್​ನಲ್ಲಿ ವಿಕೆಟ್ ಪಡೆದಿರುವುದು 20 ಬಾರಿಯಂತೆ. ಇವತ್ತಿನ ಪಂದ್ಯದ್ದನ್ನ ಸೇರಿಸಿಕೊಂಡರೆ 62 ಇನ್ನಿಂಗ್ಸಲ್ಲಿ 21 ಬಾರಿ ಮೊದಲ ಓವರ್​ನಲ್ಲಿ ವಿಕೆಟ್ ಪಡೆದಿದ್ದಾರೆ.

  ಇದನ್ನೂ ಓದಿ: Ind vs Pak T20: ಖ್ಯಾತ ಜ್ಯೋತಿಷಿ ಭವಿಷ್ಯ; ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?

  ರೋಹಿತ್ ಶರ್ಮಾ ಔಟ್ ಮಾಡುವ ತಂತ್ರ ತಿಳಿಸಿದ್ದ ಮುಷ್ಕಾಕ್ ಅಹ್ಮದ್:

  ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲಲು ಈ ಬಾರಿ ರಣತಂತ್ರಗಳನ್ನ ರೂಪಿಸಿದಂತಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪಾಕಿಸ್ತಾನ ವಿರುದ್ಧ ಚೆನ್ನಾಗಿ ಆಡುವವರೇ. ಹೀಗಾಗಿ ಈ ಇಬ್ಬರು ಬ್ಯಾಟರ್​ಗಳನ್ನ ಔಟ್ ಮಾಡುವುದೇ ಪಾಕಿಸ್ತಾನಕ್ಕೆ ಸವಾಲಿನದ್ದು. ಈ ಇಬ್ಬರನ್ನು ಔಟ್ ಮಾಡುವುದು ಹೇಗೆಂದು ಮಾಜಿ ಪಾಕ್ ಸ್ಪಿನ್ನರ್ ಮುಷ್ತಾಕ್ ಅಹ್ಮದ್ ತಂತ್ರ ತಿಳಿಸಿಕೊಟ್ಟಿದ್ದರು.

  “ರೋಹಿತ್ ಬ್ಯಾಟಿಂಗ್​ಗೆ ಕುದುರಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಇನ್ನಿಂಗ್ಸ್​ನ ಆರಂಭದಲ್ಲೇ ಇನ್​ಸ್ವಿಂಗ್ ಬೌಲರ್​ನಿಂದ ದಾಳಿ ಮಾಡಿಸಿದರೆ ರೋಹಿತ್ ವಿಕೆಟ್ ಪಡೆಯಬಹುದು. ಅಥವಾ ಈ ಮಂದ ಪಿಚ್​ನಲ್ಲಿ ಬೌನ್ಸರ್ ಎಸೆದರೂ ಪರಿಣಾಮಕಾರಿ ಎನಿಸುತ್ತದೆ. ಯಾಕೆಂದರೆ ಇಂಥ ಪಿಚ್​ನಲ್ಲಿ ಬೌನ್ಸರ್ ಬಂದರೆ ರೋಹಿತ್ ಬಹಳ ಸಹಜವಾಗಿ ಪುಲ್ ಶಾಟ್ ಹೊಡೆಯುತ್ತಾರೆ. ಫೀಲ್ಡಿಂಗ್ ಸರಿಯಾಗಿ ಸೆಟ್ ಮಾಡಿದರೆ ಅವರು ಕ್ಯಾಚಿತ್ತು ಔಟಾಗುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ಮುಷ್ತಾಕ್ ಹೇಳಿದ್ದರು.

  ಮುಷ್ತಾಕ್ ಹೇಳಿದಂತೆ ಇನ್ನಿಂಗ್ಸ್​ನ ಆರಂಭದಲ್ಲೇ ಶಾಹೀನ್ ಅಫ್ರಿದಿ ತಮ್ಮ ಸ್ವಿಂಗ್ ಎಸೆತದ ಮೂಲಕ ರೋಹಿತ್ ಶರ್ಮಾ ಅವರನ್ನ ಬಲಿತೆಗೆದುಕೊಂಡರು. ರೋಹಿತ್ ತಾನು ಎಸೆದ ಮೊದಲ ಬಾಲ್​ನಲ್ಲೇ ಔಟಾಗಿ ಹೋದರು.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಕೊಹ್ಲಿ ಔಟ್ ಮಾಡುವ ತಂತ್ರ:

  ಇದೇ ವೇಳೆ, ವಿರಾಟ್ ಕೊಹ್ಲಿ ಅವರನ್ನ ಔಟ್ ಮಾಡುವ ತಂತ್ರವನ್ನ ಮುಷ್ತಾಕ್ ಅಹ್ಮದ್ ಬಹಿರಂಗಪಡಿಸಿದ್ದರು. “ಕೊಹ್ಲಿಗೆ ನೀವು ಫಿಲ್ಡ್ ಸೆಟಿಂಗ್ ಮೂಲಕ ಆಟ ಆಡಿಸಬೇಕು. ಸ್ವಿಂಗ್ ಹೆಚ್ಚು ಪರಿಣಾಮಕಾರಿಯಲ್ಲ. ಕೊಹ್ಲಿ ರನ್ ಗಳಿಸಲು ಕಷ್ಟಪಡುವ ರೀತಿಯಲ್ಲಿ ಫೀಲ್ಡಿಂಗ್ ಸೆಟ್ ಮಾಡಬೇಕು. ಆಗ ಕೊಹ್ಲಿ ಫೀಲ್ಡರ್​ಗಳ ಮೇಲಿಂದ ಚೆಂಡನ್ನ ಹೊಡೆಯಲು ಪ್ರಯತ್ನಿಸುತ್ತಾರೆ. ಆ ರೀತಿಯಾಗಿ ಅವರು ಔಟ್ ಆಗುವ ಅವಕಾಶ ಹೆಚ್ಚಿರುತ್ತದೆ” ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಮುಷ್ತಾಕ್ ಅಭಿಪ್ರಾಯಪಟ್ಟಿದ್ದರು.

  ಆದರೆ, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ರನ್ ದಾಹ ಈ ಪಂದ್ಯದಲ್ಲೂ ಮುಂದುವರಿಸಿದರು. ಅಮೋಘ ಅರ್ಧಶತಕ ಭಾರಿಸಿ ಭಾರತಕ್ಕೆ ಗೌರವಯುತ ಸ್ಕೋರ್ ಸಿಗುವಂತೆ ಮಾಡಿದರು. ಕೊಹ್ಲಿ 49 ಬಾಲ್​ನಲ್ಲಿ 57 ರನ್ ಗಳಿಸಿದರು. ಆದರೆ, ಔಟ್ ಆಗಿದ್ದು ಶಾಹೀನ್ ಅಫ್ರಿದಿಗೆಯೇ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಈ ಮೂರು ಪ್ರಮುಖ ವಿಕೆಟ್​ಗಳನ್ನ ಶಾಹೀನ್ ಅವರೇ ಬಲಿ ತೆಗೆದುಕೊಂಡರು.
  Published by:Vijayasarthy SN
  First published: