IND vs NZ: ಸೆಮಿ ಫೈನಲ್​ನಲ್ಲಿ ಭಾರತದ ಎದುರು ನ್ಯೂಜಿಲೆಂಡ್​ಗೆ ಸೋಲು ಖಚಿತ; ಇಲ್ಲಿದೆ 8 ಕಾರಣ

ವಿಶ್ವಕಪ್​ ಲೀಗ್​ ಹಂತದ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್​ ಪಂದ್ಯ ಮಳೆಗೆ ರದ್ದಾಗಿತ್ತು. ಈಗ ಈ ತಂಡಗಳು ಸೆಮಿ ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. ಫಾರ್ಮ್​​ನಲ್ಲಿರುವ ವಿರಾಟ್​ ಕೊಹ್ಲಿ ಪಡೆ ನ್ಯೂಜಿಲೆಂಡ್​ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿಯಲಿದೆ ಎಂಬುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರ. ಅದಕ್ಕೆ ಇಲ್ಲಿ 8 ಕಾರಣಗಳನ್ನು ಉಲ್ಲೇಖಿಸಲಾಗಿದೆ.

Rajesh Duggumane | news18
Updated:July 8, 2019, 2:58 PM IST
IND vs NZ: ಸೆಮಿ ಫೈನಲ್​ನಲ್ಲಿ ಭಾರತದ ಎದುರು ನ್ಯೂಜಿಲೆಂಡ್​ಗೆ ಸೋಲು ಖಚಿತ; ಇಲ್ಲಿದೆ 8 ಕಾರಣ
ಭಾರತ V/S ನ್ಯೂಜಿಲ್ಯಾಂಡ್
  • News18
  • Last Updated: July 8, 2019, 2:58 PM IST
  • Share this:
ವಿಶ್ವಕಪ್​ ಸೆಮಿಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ಮ್ಯಾಂಚೆಸ್ಟರ್​ನಲ್ಲಿ ಭಾರತ-ನ್ಯೂಜಿಲೆಂಡ್​ ತಂಡಗಳು ಸೆಣೆಸುತ್ತಿವೆ. ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಹಾಟ್​ ಫೆವರಿಟ್​ ತಂಡ. ಇದಕ್ಕೆ ಕಾರಣಗಳು ಸಾಕಷ್ಟಿವೆ.

ವಿಶ್ವಕಪ್​ ಲೀಗ್​ ಹಂತದ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್​ ಪಂದ್ಯ ಮಳೆಗೆ ರದ್ದಾಗಿತ್ತು. ಈಗ ಈ ತಂಡಗಳು ಸೆಮಿ ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. ಫಾರ್ಮ್​​ನಲ್ಲಿರುವ ವಿರಾಟ್​ ಕೊಹ್ಲಿ ಪಡೆ ನ್ಯೂಜಿಲೆಂಡ್​ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿಯಲಿದೆ ಎಂಬುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರ. ಅದಕ್ಕೆ ಇಲ್ಲಿ 8 ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಫಾರ್ಮ್​ನಲ್ಲಿದೆ ಭಾರತ ತಂಡ:

ಭಾರತ ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಫಾರ್ಮ್​​ನಲ್ಲಿದೆ. ಆರಂಭಿಕರಾದ ರೋಹಿತ್​ ಶರ್ಮಾ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಹೀಗಾಗಿ ಇವರ ವಿಕೆಟ್​ ಕೀಳುವುದು ಸುಲಭದ ಮಾತೇನು ಅಲ್ಲ. ಇನ್ನು, ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯಾ, ರಿಷಭ್​ ಪಂತ್​ ಬ್ಯಾಟಿಂಗ್​ನಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲೂ ರೊಹಿತ್​-ರಾಹುಲ್​ ಅಬ್ಬರದ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.

ಬೌಲರ್​ಗಳ ಮೇಲುಗೈ:

ಈ ಬಾರಿಯ ವಿಶ್ವಕಪ್​ನಲ್ಲಿ ಕಡಿಮೆ ಸ್ಕೋರ್​ ಮಾಡಿದ ಸಂದರ್ಭದಲ್ಲೂ ಬೌಲರ್​ಗಳು ಜಾದೂ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಶಮಿ, ಚಹಾಲ್​ ಬಾಲಿಂಗ್​ ದಾಳಿಗೆ ನ್ಯೂಜಿಲೆಂಡ್​ ಬ್ಯಾಟ್ಸ್​​ಮನ್​ಗಳು ತರಗೆಲೆಯಂತೆ ಉದುರುವ ಎಲ್ಲಾ ಸಾಧ್ಯತೆಗಳಿವೆ.

ಆಲ್​ರೌಂಡರ್​ಗಳ ಹವಾ:ಭಾರತ ಕ್ರಿಕೆಟ್​ ತಂಡದಲ್ಲಿ ಈ ಬಾರಿ ಆಲ್​ರೌಂಡರ್​ಗಳು ಕಮಾಲ್​ ಮಾಡುತ್ತಿದ್ದಾರೆ. ಕಷ್ಟಕಾಲದಲ್ಲಿ ಬ್ಯಾಟಿಂಗ್​ನಲ್ಲಿ ನೆರವಾಗುತ್ತಿರುವ ಹಾರ್ದಿಕ್​ ಪಾಂಡ್ಯಾ, ವಿಕೆಟ್​ ಕೂಡ ಪಡೆಯುತ್ತಿದ್ದಾರೆ. ಈ ಪಂದ್ಯದಲ್ಲೂ ರವೀಂದ್ರ ಜಡೇಜಾ ಕಣಕ್ಕೆ ಇಳಿದರೆ, ಅವರು ಉತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚೇಸಿಂಗ್​ನಲ್ಲೂ ಕಮಾಲ್​:

ನಾಳಿನ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು, ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ​  ಗೆಲ್ಲುವುದು ಬಹುತೇಕ ಖಚಿತ. ಇನ್ನು, ಚೇಸಿಂಗ್​ನಲ್ಲೂ ಭಾರತ ವಿಶ್ವಾಸ ಹೊಂದಿದೆ. ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 265 ರನ್​ಗಳ ಮೊತ್ತದ ಗುರಿಯನ್ನು ಅನಾಯಾಸವಾಗಿ ಮುಟ್ಟಿದ್ದರು. ಹೀಗಾಗಿ,ಭಾರತ ಹೊಸ ವಿಶ್ವಾಸದೊಂದಿಗೆ ನಾಳಿನ ಪಂದ್ಯವನ್ನು ಎದುರಿಸುತ್ತಿದೆ.

ನ್ಯೂಜಿಲೆಂಡ್​ ಸೆಮಿಫೈನಲ್​ ಏರಿದ್ದೇ ಹೆಚ್ಚು:

ಈ ಬಾರಿಯ ಟೂರ್ನಿಯಲ್ಲಿ ನ್ಯೂಜಿಲೆಂಡ್​ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಪಾಕಿಸ್ತಾನ ನೀಡಿದ್ದ 241 ರನ್​ ಗುರಿಯನ್ನು ನ್ಯೂಜಿಲೆಂಡ್​ ಮುಟ್ಟಿಲ್ಲ. ಇಂಗ್ಲೆಂಡ್​ ವಿರುದ್ಧವಂತೂ ಹೀನಾಯವಾಗಿ ಸೋತಿತ್ತು. ಬಾಂಗ್ಲಾ ನೀಡಿದ್ದ ಸಣ್ಣ ಮೊತ್ತವನ್ನು ತಡಕಾಡಿ ಗೆದ್ದಿತ್ತು. ಹಾಗಾಗಿ, ಭಾರತವನ್ನು ಎದುರಿಸುವುದು ನ್ಯೂಜಿಲೆಂಡ್​ಗೆ ಅಷ್ಟು ಸುಲಭದ ಮಾತಲ್ಲ.

ಸೀರೀಸ್​ ಸೋತ ಭಯ

ಫೆಬ್ರವರಿ ತಿಂಗಳಲ್ಲಿ ನ್ಯೂಜಿಲೆಂಡ್​ ತಂಡವನ್ನು ಅವರ ನೆಲದಲ್ಲೇ ಭಾರತ 4-1 ಅಂತರದಿಂದ ಸೋಲಿಸಿತ್ತು. ಈ ಸೋಲಿನ ಕಹಿ ನೆನಪನ್ನು ನ್ಯೂಜಿಲೆಂಡ್ ಇನ್ನೂ ಮರೆತಿಲ್ಲ. ಇದು ಕೂಡ ನ್ಯೂಜಿಲೆಂಡ್ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ.

ನ್ಯೂಜಿಲೆಂಡ್​ ಬ್ಯಾಟ್ಸ್​​​ಮನ್​​ಗಳ ಫಾರ್ಮ್​ ಕೊರತೆ:

ನ್ಯೂಜಿಲೆಂಡ್​ ತಂಡದಲ್ಲಿ ಫಾರ್ಮ್​ನ ಕೊರತೆ ಎದ್ದು ಕಾಣುತ್ತಿದೆ. ಕೇನ್​ ವಿಲಿಯಮ್ಸನ್​ ಹಾಗೂ ರಾಸ್​ ಟೈಲರ್​ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್​ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು.

ನ್ಯೂಜಿಲೆಂಡ್​ಗೆ ಕಾಡುವ ಇತಿಹಾಸ:

ಈವರೆಗೆ ನ್ಯೂಜಿಲೆಂಡ್​ 7 ಬಾರಿ ಸೆಮಿಫೈನಲ್​ ಪ್ರವೇಶಿಸಿದೆ. ಅದರಲ್ಲಿ ಗೆದ್ದಿದ್ದು ಕೇವಲ ಒಂದು ಬಾರಿ ಮಾತ್ರ. ಹೀಗಾಗಿ ನ್ಯೂಜಿಲೆಂಡ್​ಗೆ ಈ ಇತಿಹಾಸ ಕಾಡುತ್ತಿದೆ. ಈ ವಿಚಾರ ತಂಡವನ್ನು ಕಂಗೆಡಿಸಿದೆ.

First published: July 8, 2019, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading