IND vs NZ- ಅಯ್ಯರ್, ಜಡೇಜಾ ಶತಕದ ಜೊತೆಯಾಟ; ಭಾರತಕ್ಕೆ ಮೊದಲ ದಿನದ ಗೌರವ

India vs New Zealand 1st Test 1st Day- ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವ ಪಡೆದಿದೆ.

ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ

ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ

 • Share this:
  ಕಾನಪುರ್, ನ. 25: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಅದೇ ಆತ್ಮವಿಶ್ವಾಸದಿಂದ ಮುಂದಡಿ ಇಟ್ಟಿದೆ. ಇಂದು ಆರಂಭಗೊಂಡ ಮೊದಲ ಪಂದ್ಯದ ಮೊದಲ ದಿನದಾಟದ ಗೌರವ ಭಾರತ ತಂಡಕ್ಕೆ ಸಿಕ್ಕಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿ ದಿನದಂತ್ಯಕ್ಕೆ 84 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ. ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಈ ಮೂವರು ಬ್ಯಾಟರ್ಸ್ ಅರ್ಧಶತಕ ಭಾರಿಸಿದ್ಧಾರೆ. ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ.

  ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ನಡುವೆ ಐದನೇ ವಿಕೆಟ್​ಗೆ 113 ರನ್​ಗಳ ಮುರಿಯದ ಜೊತೆಯಾಟ ಬಂದದ್ದು ಭಾರತದ ಮೊದಲ ಇನ್ನಿಂಗ್ಸ್​ನ ಹೈಲೈಟ್ ಆಗಿದೆ. 3 ವಿಕೆಟ್ ನಷ್ಟಕ್ಕೆ 106 ರನ್ ಸ್ಕೋರ್ ಇದ್ದಾಗ ಕ್ರೀಸ್​ಗೆ ಬಂದ ಶ್ರೇಯಸ್ ಅಯ್ಯರ್ ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಜಡೇಜಾ ಜೊತೆ ಶತಕದ ಜೊತೆಯಾಟದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ನಾಯಕ ಅಜಿಂಕ್ಯ ರಹಾನೆ ಜೊತೆ 4ನೇ ವಿಕೆಟ್​ಗೆ 39 ರನ್ ಪಾರ್ಟ್ನರ್​ಶಿಪ್ ಆಡಿದ್ದರು.

  ಟಾಸ್ ಗೆದ್ದು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ನಿರಾಸೆ ಮೂಡಿಸಿತು. ಕರ್ನಾಟಕದ ಮಯಂಕ್ ಅಗರ್ವಾಲ್ ಕೇವಲ 13 ರನ್ ಗಳಿಸಿ ಔಟಾದರು. ಆದರೆ, ನಂತರ ಶುಬ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ 2ನೇ ವಿಕೆಟ್​ಗೆ 61 ರನ್ ಜೊತೆಯಾಟ ಆಡಿದ್ದು ತಂಡದ ಇನ್ನಿಂಗ್ಸ್​ಗೆ ಜೀವ ಸಿಕ್ಕಿತು. ಶುಬ್ಮನ್ ಗಿಲ್ 1 ಸಿಕ್ಸರ್ ಸಹಿತ 93 ಬಾಲ್​ನಲ್ಲಿ 52 ರನ್ ಗಳಿಸಿದರು. ಈ ಜೊತೆಯಾಟವನ್ನು ಮೀರಿಸುವಂತೆ ಆಡಿದ್ದು ಶ್ರೇಯಸ್ ಅಯ್ಯರ್ ಮತ್ತು ಆರ್ ಜಡೇಜಾ.

  ಇದನ್ನೂ ಓದಿ: Bengaluru Bulls Koo: ಧೂಳ್ ಧೂಳ್… ಗೆಲ್ಲಕ್ಕೆ ಬಿಡಲ್ಲ…! ಬೆಂಗಳೂರು ಬುಲ್ಸ್ ಕಬಡ್ಡಿ ಕಹಳೆಯ ಕೂ

  ಶ್ರೇಯಸ್ ಅಯ್ಯರ್ 136 ಬಾಲ್​ನಲ್ಲಿ ಅಜೇಯ 75 ರನ್ ಭಾರಿಸಿದರು. ಅವರ ಇನ್ನಿಂಗ್ಸಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡಿವೆ. ಜಡೇಜಾ 100 ಬಾಲ್​ನಲ್ಲಿ ಸರಿಯಾಗಿ 50 ರನ್ ಭಾರಿಸಿ ಅಜೇಯರಾಗಿ ಉಳಿದಿದ್ದಾರೆ. ನಾಳೆ ಎರಡನೇ ದಿನದಾಟದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಟೆಸ್ಟ್ ಶತಕ ದಾಖಲಿಸಬಲ್ಲರಾ ಎಂಬ ಕುತೂಹಲ ಇದೆ.

  ಜೇಮಿಸನ್​ಗೆ 3 ವಿಕೆಟ್:

  ನ್ಯೂಜಿಲೆಂಡ್ ಬೌಲರ್​ಗಳ ಪೈಕಿ ಕೈಲೆ ಜೇಮಿಸನ್ ಯಶಸ್ಸು ಗಳಿಸಿದರು. ಅವರು 3 ವಿಕೆಟ್ ಪಡೆದರೆ ಟಿಮ್ ಸೌದಿಗೆ ವಿಕೆಟ್ ಸಿಕ್ಕಿದ್ದು ಒಂದು ಮಾತ್ರ. ಕಿವೀಸ್ ತಂಡದ ಯಾವ ಸ್ಪಿನ್ ಬೌಲರ್​ಗೂ ವಿಕೆಟ್ ಸಿಗಲಿಲ್ಲ. ನ್ಯೂಜಿಲೆಂಡ್ ತಂಡದ ಆಲ್​ರೌಂಡರ್ ರಚಿನ್ ರವೀಂದ್ರ ಅವರು ಈ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

  ಇದನ್ನೂ ಓದಿ: Maradona death anniversary: 13ನೇ ವಯಸ್ಸಿಗೆ ಕನ್ಯತ್ವ ಕಳೆದುಕೊಂಡಿದ್ದರು ಡಿಯಾಗೊ ಮರಡೋನಾ!

  ಪ್ರಮುಖ ಆಟಗಾರರ ಅನುಪಸ್ಥಿತಿ:

  ಭಾರತ ಈ ಪಂದ್ಯವನ್ನು ನಾಲ್ವರು ಪ್ರಮುಖ ಆಟಗಾರರಿಲ್ಲದೇ ಆಡಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್ ಬುಮ್ರಾ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಪಂದ್ಯಕ್ಕೆ ಬರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು ಅಜಿಂಕ್ಯ ರಹಾನೆ.

  ಸ್ಕೋರು ವಿವರ ಮೊದಲ ದಿನದಾಟದ ಅಂತ್ಯಕ್ಕೆ:

  ಭಾರತ ಮೊದಲ ಇನ್ನಿಂಗ್ಸ್ 84 ಓವರ್ 258/4
  (ಶ್ರೇಯಸ್ ಅಯ್ಯರ್ ಅಜೇಯ 75, ರವೀಂದ್ರ ಜಡೇಜಾ ಅಜೇಯ 50, ಶುಬ್ಮನ್ ಗಿಲ್ 52, ಅಜಿಂಕ್ಯ ರಹಾನೆ 35, ಚೇತೇಶ್ವರ್ ಪೂಜಾರ 26 ರನ್- ಕೈಲೆ ಜೇಮಿಸನ್ 47/3)
  Published by:Vijayasarthy SN
  First published: