HOME » NEWS » Sports » CRICKET IND VS ENG WHY ARE ENGLAND CRICKETERS WEARING BLACK ARMBANDS ZP

IND vs ENG: ಇಂಗ್ಲೆಂಡ್ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು ಗೊತ್ತಾ?

ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಇಂಗ್ಲೆಂಡ್ ತಂಡವು ಮೂರನೇ ಸೇಷನ್ ವೇಳೆ ಕೇವಲ 2 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

news18-kannada
Updated:February 5, 2021, 5:25 PM IST
IND vs ENG: ಇಂಗ್ಲೆಂಡ್ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು ಗೊತ್ತಾ?
ಇಂಗ್ಲೆಂಡ್ ಟೀಮ್
  • Share this:
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ನಾಯಕನ ನಿರ್ಧಾರವನ್ನು ಸಿಬ್ಲಿ ಹಾಗೂ ಬರ್ನ್ಸ್​ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿರುವುದು ಎಲ್ಲರ ಗಮನ ಸೆಳೆಯಿತು.

ಅಲ್ಲದೆ ಇಂಗ್ಲೆಂಡ್ ಆಟಗಾರರು ತೋಳಿಗೆ ಕಪ್ಪ ಬ್ಯಾಂಡ್ ಯಾಕೆ ಧರಿಸಿದ್ದಾರೆ ಎಂಬ ಚರ್ಚೆಗಳು ಕೂಡ ಶುರುವಾಗಿತ್ತು. ಇದೀಗ ಆಂಗ್ಲ ಪಡೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣ ಶೋಕಾಚರಣೆ ಸಂಕೇತ ಎಂಬುದು ಬಹಿರಂಗವಾಗಿದೆ. ಹೌದು, ಇತ್ತೀಚೆಗೆ ನಿಧನರಾದ ಮಾಜಿ ಆರ್ಮಿ ಕ್ಯಾಪ್ಟನ್ ಸರ್ ಟಾಮ್ ಮೂರ್ ಅವರ ನಿಧನ ಶೋಕಾಚರಣೆ ಸಲುವಾಗಿ ಇಂಗ್ಲೆಂಡ್ ಆಟಗಾರರು ಬ್ಲ್ಯಾಕ್ ಬ್ಯಾಂಡ್ ಧರಿಸಿದ್ದಾರೆ.

ಕ್ಯಾಪ್ಟನ್ ಟಾಮ್ ಮೂರ್ ತಮ್ಮ ಇಳಿವಯಸ್ಸಿನಲ್ಲೂ ಕೊರೋನಾ ವೈರಸ್ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತಮ್ಮ 100ನೇ ಹುಟ್ಟುಹಬ್ಬದ ಬೆನ್ನಲ್ಲೇ ಕೊರೋನಾ ಸೋಂಕಿಗೆ ಒಳಗಾಗಿದ್ದ ಮಾಜಿ ಯೋಧ ಇತ್ತೀಚೆಗೆ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಇದೀಗ ಅವರ ನಿಸ್ವಾರ್ಥ ಸೇವೆಯ ಗೌರವಾರ್ಥಕವಾಗಿ ಇಂಗ್ಲೆಂಡ್ ಆಟಗಾರರು ಚೆನ್ನೈ ಮೈದಾನದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಇಂಗ್ಲೆಂಡ್ ತಂಡವು ಮೂರನೇ ಸೇಷನ್ ವೇಳೆ ಕೇವಲ 2 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಆಕರ್ಷಕ ಶತಕ ಸಿಡಿಸಿರುವ ಇಂಗ್ಲೆಂಡ್ ನಾಯಕ ಜೋ ರೂಟ್ (116) ಹಾಗೂ ಆರಂಭಿಕ ಸಿಬ್ಲಿ (85) ಉತ್ತಮ ಜೊತೆಯಾಟ ಪ್ರದರ್ಶಿಸುತ್ತಿದ್ದಾರೆ. ಟೀಮ್ ಇಂಡಿಯಾ ಪರ ಅಶ್ವಿನ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
Published by: zahir
First published: February 5, 2021, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories