IND vs ENG: ತಂದೆಯ ಗೆಲುವಿಗಾಗಿ ಪಾಕಿಸ್ತಾನದವರಿಂದ ಪ್ರಾರ್ಥನೆ; ಟ್ವಿಟ್ಟರ್​ನಲ್ಲಿ ಭಾರೀ ಟ್ರೋಲ್​

ಬುಧವಾರ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ಗೆದ್ದು ಬೀಗಿದೆ. ಈ ಮೂಲಕ ಸೆಮಿಫೈನಲ್​ ಕನಸನ್ನು ಉಳಿಸಿಕೊಂಡಿದೆ. ಒಂದೊಮ್ಮೆ ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋತರೆ ಸೆಮಿಫೈನಲ್​ಗೆ ಏರಲು ಪಾಕ್​ ಹಾದಿ ಸುಗಮವಾಗಲಿದೆ.

Rajesh Duggumane | news18
Updated:June 30, 2019, 8:37 AM IST
IND vs ENG: ತಂದೆಯ ಗೆಲುವಿಗಾಗಿ ಪಾಕಿಸ್ತಾನದವರಿಂದ ಪ್ರಾರ್ಥನೆ; ಟ್ವಿಟ್ಟರ್​ನಲ್ಲಿ ಭಾರೀ ಟ್ರೋಲ್​
ಸಾಂದರ್ಭಿಕ ಚಿತ್ತ
Rajesh Duggumane | news18
Updated: June 30, 2019, 8:37 AM IST
ವಿಶ್ವಕಪನ್​ಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಭಾರತ-ಪಾಕಿಸ್ತಾನ ಪಂದ್ಯ. ಇದರಲ್ಲಿ ಭಾರತ ಗೆದ್ದು ಬೀಗಿತ್ತು. ಇದು ಪಾಕಿಸ್ತಾನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಈ ಮಧ್ಯೆ ಪಾಕ್​ ಬೌಲರ್​ ಹಸನ್​ ಅಲಿ ಭಾರತ ಕ್ರಿಕೆಟ್​ ತಂಡದ ಬೆಂಬಲಕ್ಕೆ ನಿಂತಿದ್ದು ಈ ಅಸಮಾಧಾನವನ್ನು ಹೆಚ್ಚಿಸಿತ್ತು. ಅಚ್ಚರಿ ಎಂದರೆ ಇಂದು ನಡೆಯುತ್ತಿರುವ ಭಾರತ-ಇಂಗ್ಲೆಂಡ್​ ಪಂದ್ಯದಲ್ಲಿ ಪಾಕ್​ ಅಭಿಮಾನಿಗಳು ವಿರಾಟ್​ ಕೊಹ್ಲಿ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದು ಟ್ವಿಟ್ಟರ್​ನಲ್ಲಿ ಟ್ರೋಲ್​ ಆಗಿದೆ.

ಪಾಕ್​  ಅಭಿಮಾನಿಗಳು ಈ ರೀತಿ ಮಾಡಲು ಒಂದು ಕಾರಣವಿದೆ. ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್​ ತಲುಪಿದೆ. ಭಾರತ-ನ್ಯೂಜಿಲೆಂಡ್​ಗೆ ಒಂದು ಅಂಕ ಸಿಕ್ಕರೆ ಈ ದೇಶಗಳು ಸೆಮೀಸ್​ ತಲುಪಲಿವೆ.  ಆದರೆ, ನಾಲ್ಕನೇ ಸ್ಥಾನಕ್ಕೆ ಇಂಗ್ಲೆಂಡ್​,ಪಾಕಿಸ್ತಾನ, ಬಾಂಗ್ಲಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಇಂಗ್ಲೆಂಡ್​ 7ರಲ್ಲಿ 4 ಪಂದ್ಯ ಗೆದ್ದಿದ್ದು, ಮೂರು ಪಂದ್ಯಗಳನ್ನು ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಹಾಗೂ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಭಾರತ ತಂಡವನ್ನು ಎದುರಿಸಬೇಕಿದೆ. ಈ ವೇಳೆ ಒಂದು ಪಂದ್ಯ ಸೋತರೂ ಇಂಗ್ಲೆಂಡ್​ನ ಸೆಮಿಫೈನಲ್​ ಏರುವ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಬಾಂಗ್ಲಾ, ಪಾಕ್​ ಅಥವಾ ಸೆಮಿ ಫೈನಲ್​ಗೆ ಏರುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂಗ್ಲೆಂಡ್ ಸೋಲನ್ನು ಒಂದಾಗಿ ಸಂಭ್ರಮಿಸಿದ ಪಾಕ್, ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳು; ಏಕೆ ಗೊತ್ತಾ?

ಬುಧವಾರ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ಗೆದ್ದಿದೆ. ಈ ಮೂಲಕ ಸೆಮಿಫೈನಲ್​ ಕನಸನ್ನು ಉಳಿಸಿಕೊಂಡಿದೆ. ಒಂದೊಮ್ಮೆ ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋತರೆ ಸೆಮಿಫೈನಲ್​ಗೆ ಏರಲು ಪಾಕ್​ ಹಾದಿ ಸುಗಮವಾಗಲಿದೆ.

ಈ  ಕಾರಣಕ್ಕೆ ಭಾರತ-ಇಂಗ್ಲೆಂಡ್​ ಪಂದ್ಯದಲ್ಲಿ ಕೊಹ್ಲಿ ಪಡೆಯ ಪರವಾಗಿ ಪಾಕಿಸ್ತಾನದವರು ನಿಂತಿದ್ದಾರೆ. ಈ ವಿಚಾರ ಟ್ವಿಟ್ಟರ್​ನಲ್ಲಿ ಟ್ರೋಲ್​ ಆಗಿದೆ. ಈಗಲಾದರೂ ಪಾಕಿಸ್ತಾನದವರು ತಂದೆಯ ಬೆಂಬಲಕ್ಕೆ ನಿಂತರಲ್ಲ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು  'ತಂದೆಯ ಗೆಲುವಿಗಾಗಿ ಪಾಕಿಸ್ತಾನದವರಿಂದ ಪ್ರಾರ್ಥನೆ ಮಾಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.









First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...