HOME » NEWS » Sports » CRICKET IND VS ENG MAJOR SETBACK FOR ENGLAND STAR OPENER RULED OUT ZP

Ind vs Eng: ಟೆಸ್ಟ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಆಘಾತ: ಸ್ಟಾರ್ ಆಟಗಾರ ಔಟ್..!

ಇಂಗ್ಲೆಂಡ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿರುವ 23 ವರ್ಷದ ಝಾಕ್ ಕ್ರಾವ್ಲೆ 16 ಇನಿಂಗ್ಸ್​ಗಳಿಂದ 616 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕಗಳು ಮೂಡಿಬಂದಿದ್ದವು.

news18-kannada
Updated:February 4, 2021, 5:21 PM IST
Ind vs Eng: ಟೆಸ್ಟ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಆಘಾತ: ಸ್ಟಾರ್ ಆಟಗಾರ ಔಟ್..!
England Team
  • Share this:
ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಶುಕ್ರವಾರ (ಫೆ.5) ಶುರುವಾಗಲಿದೆ. ಒಂದೆಡೆ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗೆದ್ದ ಹುಮ್ಮಸ್ಸಿನಲ್ಲಿದ್ದರೆ, ಇತ್ತ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದೆ. ಇನ್ನು ಉಭಯ ತಂಡಗಳಿಗೂ ಈ ಸರಣಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಏಕೆಂದರೆ ಈ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಉಭಯ ತಂಡಗಳಿಗೂ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಪ್ರವೇಶಿಸಬಹುದು. ಇದಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದ ಇಂಗ್ಲೆಂಡ್​ಗೆ ಇದೀಗ ಆಘಾತ ಎದುರಾಗಿದೆ. ತಂಡದ ಆರಂಭಿಕ ಆಟಗಾರ ಝಾಕ್ ಕ್ರಾವ್ಲೆ ಗಾಯಗೊಂಡು ಮೊದಲೆರಡು ಟೆಸ್ಟ್​ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್​ ಬಳಿ ಹಾಕಿದ್ದ ಮಾರ್ಬೆಲ್​ ಮೇಲೆ ಜಾರಿಬಿದ್ದ ಝಾಕ್ ಕ್ರಾವ್ಲೆ ಬಲಗೈಗೆ ಗಾಯವಾಗಿದೆ. ಸದ್ಯ ಸ್ಕ್ಯಾನಿಂಗ್ ನಡೆಸಲಾಗಿದ್ದು, ಇದೇ ವೇಳೆ ಮಣಿಕಟ್ಟಿಗೆ ಗಾಯವಾಗಿರುವುದು ಕಂಡು ಬಂದಿದೆ. ಹೀಗಾಗಿ ಯುವ ಬ್ಯಾಟ್ಸ್​ಮನ್​ಗೆ 2 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅದರಂತೆ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಕ್ರಾವ್ಲೆ ಹೊರಗುಳಿಯಲಿದ್ದಾರೆ. ಇನ್ನು ಝಾಕ್ ಕ್ರಾವ್ಲೆ ಜಾಗದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿರುವ 23 ವರ್ಷದ ಝಾಕ್ ಕ್ರಾವ್ಲೆ 16 ಇನಿಂಗ್ಸ್​ಗಳಿಂದ 616 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕಗಳು ಮೂಡಿಬಂದಿದ್ದವು. ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದ ಯುವ ಆಟಗಾರ ಇದೀಗ ಹೊರಬಿದ್ದಿದ್ದು, 3ನೇ ಟೆಸ್ಟ್ ವೇಳೆ ಝಾಕ್​ ಕ್ರಾವ್ಲೆ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಾ ಕಾದು ನೋಡಬೇಕಿದೆ.

ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಹೀಗಿದೆ:
ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್, ಡೊಮಿನಿಕ್ ಸಿಬ್ಲಿ, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ರೋರಿ ಬರ್ನ್ಸ್, ಜೋ ಬಟ್ಲರ್ (ವಿಕೆಟ್ ಕೀಪರ್), ಬೆನ್ ಫಾಕ್ಸ್, ಜೋಫ್ರಾ ಆರ್ಚರ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಡೊಮ್ ಬೆಸ್ , ಜ್ಯಾಕ್ ಲೀಚ್, ಒಲ್ಲಿ ಸ್ಟೋನ್ಸ್, ಒಲ್ಲಿ ಪೋಪ್.
Published by: zahir
First published: February 4, 2021, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories