Ind vs Eng: ಟೀಮ್ ಇಂಡಿಯಾ ಓಪನಿಂಗ್ ಜೋಡಿ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ..!

ರೋಹಿತ್ ಮತ್ತು ಧವನ್ ಜೋಡಿ 52 ಇನ್ನಿಂಗ್ಸ್‌ಗಳಲ್ಲಿ 34 ಸರಾಸರಿಯಲ್ಲಿ 1743 ರನ್ ಕಲೆಹಾಕಿದ್ದಾರೆ. ಅವರು 4 ಶತಕದ ಜೊತೆಯಾಟ ಹಾಗೂ 7 ಅರ್ಧಶತಕದ ಜೊತೆಯಾಟ ಮೂಡಿಬಂದಿದೆ. ಇನ್ನು ಕೆಎಲ್ ರಾಹುಲ್ ಮತ್ತು ರೋಹಿತ್ ಆರಂಭಿಕ ಜೋಡಿಯಾಗಿ ಯಶಸ್ಸು ಕಾಣುತ್ತಿದ್ದಾರೆ.

rahul-viral-dhawan

rahul-viral-dhawan

 • Share this:
  ಭಾರತ-ಇಂಗ್ಲೆಂಡ್ ನಡುವಣ ಟಿ20 ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿರುವುದರಿಂದ ಇಂಗ್ಲೆಂಡ್ ವಿರುದ್ಧದ ಈ ಸರಣಿ ಮಹತ್ವ ಪಡೆದುಕೊಂಡಿದೆ. ಇತ್ತ 19 ಸದಸ್ಯರನ್ನು ಒಳಗೊಂಡಿರುವ ಬಲಿಷ್ಠ ಪಡೆಯನ್ನೇ ಆಯ್ಕೆ ಸಮಿತಿ ಪ್ರಕಟಿಸಿದ್ದು, ಹೀಗಾಗಿ ಪ್ಲೇಯಿಂಗ್ ಇಲೆವೆನ್​ಗೆ ಯಾರನ್ನು ಆಯ್ಕೆ ಮಾಡುವುದು ಎಂಬ ಸಂದಿಗ್ಥತೆ ತಲೆದೂರಿದೆ.

  ನಾಯಕನಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ, ಉಪನಾಯಕನಾಗಿ ರೋಹಿತ್ ಶರ್ಮಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಹಿಟ್​ಮ್ಯಾನ್ ಜೊತೆ ಯಾರನ್ನು ಆರಂಭಿಕರಾಗಿ ಕಣಕ್ಕಿಳಿಸುವುದು ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ ಶುರುವಾಗಿದೆ. ಏಕೆಂದರೆ ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಈ ಹಿಂದಿನಂತೆ ರೋಹಿತ್ ಶರ್ಮಾ ಜೊತೆ ಶಿಖರ್​ ಆರಂಭಿಕನಾಗಿ ಅವಕಾಶ ಪಡೆದರೆ, ಭರ್ಜರಿ ಫಾರ್ಮ್​ನಲ್ಲಿರುವ ಕೆಎಲ್ ರಾಹುಲ್​ಗೆ ಅವಕಾಶ ತಪ್ಪಿಸಿದಂತಾಗುತ್ತದೆ.

  ಹೀಗಾಗಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್..ಇವರಿಬ್ಬರಲ್ಲಿ ಯಾರನ್ನು ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಎಲ್ಲಾ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖುದ್ದು ಉತ್ತರ ನೀಡಿದ್ದಾರೆ. ಹೌದು, ಮೊದಲ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ನಮ್ಮ ಮೊದಲ ಆಯ್ಕೆ ಎಂದು ಕೊಹ್ಲಿ ತಿಳಿಸಿದ್ದಾರೆ.

  ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, 'ಮೊದಲ ಪಂದ್ಯದಲ್ಲಿ ರಾಹುಲ್ ಮತ್ತು ರೋಹಿತ್ ಉನ್ನತ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ರೋಹಿತ್ ಅಥವಾ ರಾಹುಲ್ ಆಡದಿದ್ದರೆ, ನಾವು ಶಿಖರ್ ಧವನ್ ಅವರನ್ನು ಬ್ಯಾಕಪ್ ಓಪನರ್ ಆಗಿ ಹೊಂದಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

  ಇದರೊಂದಿಗೆ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಹಿಟ್​ಮ್ಯಾನ್ ಜೊತೆ ಕನ್ನಡಿಗ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಅತ್ತ ಐದು ಪಂದ್ಯಗಳ ಚುಟುಕು ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಬೆಂಚ್ ಕಾಯಲಿದ್ದಾರೆ.

  ಇದಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಅವರು ರೋಹಿತ್ ಶರ್ಮಾ ಮತ್ತು ರಾಹುಲ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಬೇಕು ಎಂದಿದ್ದರು. ಅಲ್ಲದೆ, ಶಿಖರ್ ಧವನ್ ಅವರನ್ನು ಮೂರನೇ ಓಪನರ್ ಆಗಿ ತಂಡದಲ್ಲಿ ಇರಿಸಿಕೊಳ್ಳುವುದು ಉತ್ತಮಈ ವರ್ಷ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಅಂತಹ ಪರಿಸ್ಥಿತಿಯಲ್ಲಿ, ಬ್ಯಾಕಪ್ ಓಪನರ್ ಆಗಿ ಧವನ್ ತಂಡದಲ್ಲಿರುವು ಮುಖ್ಯ ಎಂದು ಲಕ್ಷ್ಮಣ್ ಹೇಳಿದ್ದರು.

  ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭಾರತ ಟಿ20 ತಂಡದ ಅತ್ಯಂತ ಯಶಸ್ವಿ ಓಪನಿಂಗ್ ಜೋಡಿ. ರೋಹಿತ್ ಮತ್ತು ಧವನ್ ಜೋಡಿ 52 ಇನ್ನಿಂಗ್ಸ್‌ಗಳಲ್ಲಿ 34 ಸರಾಸರಿಯಲ್ಲಿ 1743 ರನ್ ಕಲೆಹಾಕಿದ್ದಾರೆ. ಅವರು 4 ಶತಕದ ಜೊತೆಯಾಟ ಹಾಗೂ 7 ಅರ್ಧಶತಕದ ಜೊತೆಯಾಟ ಮೂಡಿಬಂದಿದೆ. ಇನ್ನು ಕೆಎಲ್ ರಾಹುಲ್ ಮತ್ತು ರೋಹಿತ್ ಆರಂಭಿಕ ಜೋಡಿಯಾಗಿ ಯಶಸ್ವಿಯಾಗುತ್ತಿದ್ದಾರೆ. ಇಬ್ಬರೂ 11 ಇನ್ನಿಂಗ್ಸ್‌ಗಳಲ್ಲಿ 51 ಸರಾಸರಿಯಲ್ಲಿ 558 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕದ ಜೊತೆಯಾಟ ಮತ್ತು ಒಂದು ಅರ್ಧಶತಕದ ಜೊತೆಯಾಟ ಮೂಡಿ ಬಂದಿದೆ. ಒಟ್ಟಿನಲ್ಲಿ ಮೊದಲ ಟಿ20 ಪಂದ್ಯದಲ್ಲಿ ರಾಹುಲ್-ರೋಹಿತ್ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
  Published by:zahir
  First published: