ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ (Team India) ಸೋಲುಂಡಿದೆ. ಬಾಂಗ್ಲಾದಂತಹ (Bangladesh) ತಂಡದ ವಿರುದ್ಧ ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲುಂಡ ಕಾರಣ ಟೀಂ ಇಂಡಿಯಾ ಸಾಕಷ್ಟು ವಿಮರ್ಶೆಗಳನ್ನು ಎದುರಿಸುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್ ಉತ್ತಮ ಮೊತ್ತಗಳಿಸುವಲ್ಲಿ ವಿಫಲವಾದರೇ, ಎರಡನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾರ (Rohit Sharma) ಸ್ಫೋಟಕ ಬ್ಯಾಟಿಂಗ್ ಬಳಿಕವೂ ಫಲಿತಾಂಶ ಟೀಂ ಇಂಡಿಯಾ ಪರವಾಗಿ ಬಂದಿರಲಿಲ್ಲ. ಈ ನಡುವೆ ಟೀಂ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲಿಯಾದರೂ ಗೆದ್ದು ವೈಟ್ವಾಶ್ ಮುಖಭಂಗ ತಪ್ಪಿಸಿಕೊಳ್ಳುವ ಸಿದ್ಧತೆಯಲ್ಲಿದ್ದು, ಮೊದಲ ಎರಡು ಪಂದ್ಯಗಳಲ್ಲಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಕ್ಲಾರಿಟಿ ಪಡೆದುಕೊಳ್ಳಬೇಕಿದೆ.
ಟೀಂ ಇಂಡಿಯಾದಲ್ಲಿ ಫಿಟ್ನೆಸ್ ಸಮಸ್ಯೆ
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗ್ಯಾಯಗೊಂಡಿದ್ದರೂ ಬ್ಯಾಟ್ ಮಾಡಿದ್ದರು. ಆದರೆ ಈ ಟೂರ್ನಿಯಲ್ಲಿ ಕೆಲ ಆಟಗಾರರ ಫಿಟ್ನೆಸ್ ಸಮಸ್ಯೆ ಪ್ರಶ್ನೆಯಾಗಿ ಉಳಿದಿದೆ. ಈ ವರ್ಷ ಟೀಂ ಇಂಡಿಯಾದಲ್ಲಿ ದೀಪಕ ಚಹರ್ ಆಡಿದ ಪಂದ್ಯಗಳಿಗಿಂತ ಗಾಯದ ಸಮಸ್ಯೆಯಿಂದ ದೂರವಾದ ಪಂದ್ಯಗಳ ಸಂಖ್ಯೆಯೇ ಹೆಚ್ಚಿದೆ.
ಫಿಟ್ನೆಸ್ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ನಾಯಕ ರೋಹಿತ್, ಫಿಟ್ನೆಸ್ ಇಲ್ಲದ ಆಟಗಾರರು ತಂಡದಲ್ಲಿರೋದು ತಂಡಕ್ಕೆ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಇಂಜುರಿ ಸಮಸ್ಯೆ ಮಾತ್ರವಲ್ಲ, ಆಟಗಾರರ ಫೀಲ್ಡಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಇಂತಹ ಆಟವನ್ನು ನೋಡಿದ ಅಭಿಮಾನಿಗಳಿಗೆ ಆಟಗಾರರ ರಿಹ್ಯಾಬ್ ಬಗ್ಗೆಯೂ ಸಂದೇಹಗಳು ಮೂಡುತ್ತದೆ. ಮುಂದಿನ ವರ್ಷ ಎದುರಾಗಲಿರುವ ಏಕದಿನ ವಿಶ್ವಕಪ್ನಲ್ಲಿ ನೂರಕ್ಕೆ ನೂರರಷ್ಟು ಫಿಟ್ ಅಲ್ಲದ ಆಟಗಾರರನ್ನು ಆಯ್ಕೆ ಮಾಡಿದ್ರೆ ಅದು ತಂಡಕ್ಕೆ ಭಾರೀ ನಷ್ಟವನ್ನು ಉಂಟು ಮಾಡುತ್ತದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
🗣️ 🗣️ Head Coach Rahul Dravid takes us through the injury status of captain Rohit Sharma, Deepak Chahar & Kuldeep Sen #TeamIndia | #BANvIND pic.twitter.com/r6CEj5gHgv
— BCCI (@BCCI) December 8, 2022
ಗೆಲುವಿನ ಸನಿಹ ಬಂದು ಎಡವುತ್ತಿರೋ ಟೀಂ ಇಂಡಿಯಾ
ಟೀಂ ಇಂಡಿಯಾ ಪ್ರತಿಷ್ಠಿತ ಪಂದ್ಯಗಳಲ್ಲಿ ಗೆಲುವಿನ ಸನಿಹ ಬಂದು ಸ್ವಯಂಕೃತ ಅಪರಾಧದಿಂದ ಸೋಲುಗಳನ್ನು ಎದುರಿಸುತ್ತಿದೆ. ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ136 ರನ್ಗಳಿಗೆ 9 ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ಅಂತಿಮ ವಿಕೆಟ್ ಉರುಳಿಸುವಲ್ಲಿ ಎಡವಿತ್ತು. ಇದರೊಂದಿಗೆ ಬಾಂಗ್ಲಾ ತಂಡ ಸ್ಮರಣೀಯ ಗೆಲುವು ಸಾಧಿಸಿತ್ತು.
ಎರಡನೇ ಏಕದಿನ ಪಂದ್ಯದಲ್ಲಿ 69 ರನ್ ಗಳಿಗೆ ಪ್ರಮುಖ 6 ವಿಕೆಟ್ಗಳನ್ನು ಪಡೆದುಕೊಂಡರು, ಬಾಂಗ್ಲಾ ಬ್ಯಾಟರ್ಗಳ ವಿರುದ್ಧ ಮತ್ತಷ್ಟು ಒತ್ತಡ ತಂದು ಆಲೌಟ್ ಮಾಡಲು ವಿಫಲವಾಗಿತ್ತು. ಪರಿಣಾಮ ಎದುರಾಳಿ ತಂಡ 271 ರನ್ ಪೇರಿಸಿತ್ತು. ಇದೇ ರೀತಿ ಗೆಲುವು ನಮ್ಮದೇ ಅನ್ನೋ ಪಂದ್ಯಗಳಲ್ಲಿ ಸೋಲುವುದನ್ನೇ ಟೀಂ ಇಂಡಿಯಾ ಅಭ್ಯಾಸ ಮಾಡಿಕೊಂಡಂತಿದೆ. ಇದನ್ನು ಬದಲಿಸಿಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆಗಳು ತಂಡದಲ್ಲಿ ಉದ್ಭವಿಸೋ ಅವಕಾಶಗಳಿದೆ.
ಇದನ್ನೂ ಓದಿ: IND vs BAN: ರೋಹಿತ್ ಬದಲಿಗೆ ಬಂಗಾಳದ ಯಂಗ್ ಪ್ಲೇಯರ್ ಆಯ್ಕೆ? ಇವ್ರ ದಾಖಲೆ ನೋಡಿದ್ರೆ ಎಂಥವರೂ ಸೈಲೆಂಟ್ ಆಗ್ತಾರೆ!
ಟೀಂ ಇಂಡಿಯಾ ನಂ.4 ಸಮಸ್ಯೆಗೆ ಸಿಕ್ತು ಪರಿಹಾರ
ಬಾಂಗ್ಲಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ಸಿಕ್ಕ ಒಂದೇ ಒಂದು ಪಾಸಿಟಿವ್ ಅಂಶ ಎಂದರೆ ಅದು ಶ್ರೇಯಸ್ ಅಯ್ಯರ್ ಬ್ಯಾಟಿಂಗ್. ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಸಾಕಷ್ಟು ದಿನಗಳಿಂದ ತಲೆನೋವಾಗಿದ್ದ ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ ಉತ್ತಮ ಪ್ರದರ್ಶನ ನೀಡ್ತಿದ್ದಾರೆ.
ಈ ವರ್ಷದ ಆರಂಭದಿಂದಲೂ ತಂಡದಲ್ಲಿ ಸಿಕ್ಕ ಅವಕಾಶಗಳಲ್ಲಿ ಅಯ್ಯರ್, ಮಿಂಚುತ್ತಲೇ ಬರ್ತಿದ್ದಾರೆ. ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಗಳು ವಿಫಲವಾದರು. ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಕಾರ್ಯವನ್ನು ಮಾಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ