(VIDEO): ಚೆಂಡನ್ನು ಸಿಕ್ಸ್​ಗೆ ಅಟ್ಟು; ಪೆವಿಲಿಯನ್​ನಿಂದಲೇ ಮಯಾಂಕ್​ಗೆ ಹಿಟ್​ಮ್ಯಾನ್ ಸಿಗ್ನಲ್!

ಭಾರತ ಅದಾಗಲೆ 300 ರನ್​ಗಳತ್ತ ಮುನ್ನಡೆ ಸಾಧಿಸಿತ್ತಾದರು ಡಿಕ್ಲೇರ್ ಮಾಡಿಕೊಳ್ಳುವ ಅಂದಾಜಿನಲ್ಲಿರಲಿಲ್ಲ. ಹೀಗಾಗಿ ಸ್ಫೋಟಕ ಆಟವಾಡು ಎಂದು ಮಯಾಂಕ್​ಗೆ ರೋಹಿತ್ ಸೂಚನೆ ನೀಡಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಬೆಂಗಳೂರು (ನ. 16): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಓಪನರ್ ಮಯಾಂಕ್ ಅಗರ್ವಾಲ್ ಆಟ ಎಲ್ಲರ ಗಮನ ಸೆಳೆಯಿತು. ಇವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ 493 ರನ್​ ಕಲೆಹಾಕಿತು. 343 ರನ್​ಗಳ ಮುನ್ನಡೆ ಸಾಧಿಸುವಂತಾಯಿತು.

ಮಯಾಂಕ್ 330 ಎಸೆತಗಳಲ್ಲಿ 28 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ 243 ರನ್​ಗೆ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿದರು. ಅಗರ್ವಾಲ್ ಶತಕ ಬಾರಿಸಿದ ವೇಳೆ ಪೆವಿಲಿಯನ್​ ಕಡೆ ತಿರುಗಿ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಈ ವೇಳೆ ಪೆವಿಲಿಯನ್​ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ, ಮಯಾಂಕ್​ಗೆ 200 ರನ್ ಬಾರಿಸು ಎಂದು ಕೈಯಲ್ಲಿ ಸಿಗ್ನಲ್ ಕೊಟ್ಟಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು.

 



71 ಆಟಗಾರರನ್ನು ರಿಲೀಸ್ ಮಾಡಿದ 8 ಫ್ರಾಂಚೈಸಿ; ಯಾವ ತಂಡದ ಬಳಿ ಎಷ್ಟು ಹಣವಿದೆ?; ಇಲ್ಲಿದೆ ಫುಲ್ ಲಿಸ್ಟ್​!

ಸದ್ಯ ಮಯಾಂಕ್ ದ್ವಿಶತಕ ಸಿಡಿಸಿದ ವೇಳೆ, ರೋಹಿತ್ ಶರ್ಮಾ ಬಿರುಸಿನ ಆಟ ಆಡು, ಬೌಂಡರಿ-ಸಿಕ್ಸರ್ ಬಾರಿಸು ಎಂದು ಕೈಸನ್ನೆ ಮೂಲಕ ಹೇಳುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಭಾರತ ಅದಾಗಲೆ 300 ರನ್​ಗಳತ್ತ ಮುನ್ನಡೆ ಸಾಧಿಸಿತ್ತಾದರು ಡಿಕ್ಲೇರ್ ಮಾಡಿಕೊಳ್ಳುವ ಅಂದಾಜಿನಲ್ಲಿರಲಿಲ್ಲ. ಹೀಗಾಗಿ ಸ್ಫೋಟಕ ಆಟವಾಡು ಎಂದು ಮಯಾಂಕ್​ಗೆ ರೋಹಿತ್ ಸೂಚನೆ ನೀಡಿದ್ದಾರೆ.

ರೋಹಿತ್ ಹೇಳಿದಂತೆ ದ್ವಿಶತಕದ ಬಳಿಕ ಅಗರ್ವಾಲ್ ಬಿರುಸಿನ ಆಟವಾಡಿದರು. ಬೌಂಡರಿ, ಸಿಕ್ಸರ್ ಬಾರಿಸಿದರು. ಅಂತಿಮವಾಗಿ 243 ರನ್ ಗಳಿಸಿರುವಾಗ ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸ್ ಸಿಡಿಸಲೋಗಿ ಕ್ಯಾಚ್​ಗೆ ಬಲಿಯಾದಾರು.

 



IPL: 12 ಆಟಗಾರರನ್ನು ಕೈಬಿಟ್ಟ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಉಳಿದುಕೊಂಡ ಆಟಗಾರರು ಇವರೆ!

ಬಾಂಗ್ಲಾದೇಶವನ್ನು ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​ಗೆ ಆಲೌಟ್ ಮಾಡಿ ಬ್ಯಾಟಿಂಗ್ ಮಾಡಿದ ಭಾರತ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 493 ರನ್ ಬಾರಿಸಿತ್ತು. ಆದರೆ, ಇಂದು ಮೂರನೇ ದಿನದ ಆರಂಭದಲ್ಲೇ ಬ್ಯಾಟಿಂಗ್ ಮುಂದುವರಿಸಲು ಬಯಸದ ಭಾರತ ಡಿಕ್ಲೇರ್ ಘೋಷಿಸಿತು.

ಸದ್ಯ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿರುವ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
First published: