HOME » NEWS » Sports » CRICKET IND VS AUS ROHIT SHARMA ISHANT SHARMA LIKELY TO MISS AUSTRALIA FOUR TEST SERIES BIGG LOSS FOR TEAM INDIA VB

IND vs AUS: ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೆ 3 ದಿನ ಇರುವಾಗ ಭಾರತಕ್ಕೆ ಎರಡು ದೊಡ್ಡ ಆಘಾತ

ಮುಂಬೈ ಮಿರರ್ ಪ್ರಕಟಿಸಿರುವ ವರದಿಯ ಪ್ರಕಾರ, ರೋಹಿತ್ ಹಾಗೂ ಇಶಾಂತ್ ಫಿಟ್​ನೆಟ್ ಟೆಸ್ಟ್​ನಲ್ಲಿ ಸಂಪೂರ್ಣವಾಗಿ ಪಾಸ್ ಆಗಿಲ್ಲ. ಅಲ್ಲದೆ ಎನ್​ಸಿಎ ಇವರ ಫಿಟ್​ನೆಸ್ ಬಗ್ಗೆ ತೃಪ್ತಿಗೊಂಡಿಲ್ಲ ಎಂದು ಹೇಳಿದೆ.

news18-kannada
Updated:November 24, 2020, 11:17 AM IST
IND vs AUS: ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೆ 3 ದಿನ ಇರುವಾಗ ಭಾರತಕ್ಕೆ ಎರಡು ದೊಡ್ಡ ಆಘಾತ
Team India
  • Share this:
ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಗೆ ಮೂರು ದಿನಗಳಲ್ಲಿ ಚಾಲನೆ ಸಿಗಲಿದೆ. ನವೆಂಬರ್ 27 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರು ಕಾಂಗರೂ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಹೌದು, ಡಿಸೆಂಬರ್ 17 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಟೆಸ್ಟ್​ ಸರಣಿಗೆ ಇಂಜುರಿಯಿಂದ ಬಳಲುತ್ತಿರುವ ಟೀಂ ಇಂಡಿಯಾದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ವೇಗಿ ಇಶಾಂತ್ ಶರ್ಮಾ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದು ತಂದೆಗೆ ಅರ್ಪಿಸುವೆ, ಅಪ್ಪನ ಕನಸು ನನಸು ಮಾಡುವೆ: ಮೊಹಮ್ಮದ್ ಸಿರಾಜ್

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆ ರೋಹಿತ್ ಶರ್ಮಾ ತೊಡೆಯ ಸ್ನಾಯು ಸೆಳೆತ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಬಿಸಿಸಿಐ ಇವರನ್ನು ಏಕದಿನ ಹಾಗೂ ಟಿ-20 ಸರಣಿಯಿಂದ ವಿಶ್ರಾಂತಿ ನೀಡಿತ್ತು.ಇತ್ತ ಇಶಾಂತ್ ಶರ್ಮಾ ಕೂಡ ಐಪಿಎಲ್ ಮಧ್ಯದಲ್ಲಿ ಸೈಡ್ ಸ್ಟ್ರೇನ್‌ಗೆ (ಹೊಟ್ಟೆ ಭಾಗದ ಬದಿಯ ಸ್ನಾಯುಗಳು ಅಥವಾ ಜಾಯಿಂಟ್ ಬೇನೆ) ಒಳಗಾಗಿದ್ದರು. ಸದ್ಯ ರೋಹಿತ್ ಹಾಗೂ ಇಶಾಂತ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಮುಂಬೈ ಮಿರರ್ ಪ್ರಕಟಿಸಿರುವ ವರದಿಯ ಪ್ರಕಾರ, ರೋಹಿತ್ ಹಾಗೂ ಇಶಾಂತ್ ಫಿಟ್​ನೆಟ್ ಟೆಸ್ಟ್​ನಲ್ಲಿ ಸಂಪೂರ್ಣವಾಗಿ ಪಾಸ್ ಆಗಿಲ್ಲ. ಅಲ್ಲದೆ ಎನ್​ಸಿಎ ಇವರ ಫಿಟ್​ನೆಸ್ ಬಗ್ಗೆ ತೃಪ್ತಿಗೊಂಡಿಲ್ಲ ಎಂದು ಹೇಳಿದೆ. ಈ ವಿಚಾರದ ಬಗ್ಗೆ ಎಸ್​ಸಿಎ ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಿದ್ದು ಸದ್ಯದಲ್ಲೆ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು, ರೋಹಿತ್, ಇಶಾಂತ್ ಯಾವಾಗ ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂಬುದನ್ನು ಬಿಸಿಸಿಐ ಇನ್ನೂ ತಿಳಿಸಲಿಲ್ಲ. ರೋಹಿತ್ ವೈಟ್‌ಬಾಲ್‌ನಲ್ಲಿ ಆಡುತ್ತಿಲ್ಲ. ನೀವು ಟೆಸ್ಟ್ ಸರಣಿ ಆಡಬೇಕಾದರೆ ಮುಂದಿನ 3-4 ದಿನಗಳಲ್ಲಿ ನೀವು ಆಸ್ಟ್ರೇಲಿಯಾದ ವಿಮಾನ ಹತ್ತಬೇಕಾಗುತ್ತದೆ. ಇಲ್ಲದಿದ್ದರೆ ಸಂಗತಿ ಕಠಿಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

IPL 2020: ಐಪಿಎಲ್ 2020ರಲ್ಲಿ ಬಿಸಿಸಿಐ ಗಳಿಸಿದ ಲಾಭವೆಷ್ಟು?: ಅಧಿಕೃತವಾಗಿ ಹೊರಬಿತ್ತು ಲೆಕ್ಕಾಚಾರಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.
Published by: Vinay Bhat
First published: November 24, 2020, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories