ಮೊಹಮ್ಮದ್ ಸಿರಾಜ್...ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಅದರಲ್ಲೂ ಐಪಿಎಲ್ ಕಾರಣದಿಂದ ಸಿರಾಜ್ಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಲಾಗಿತ್ತು. ಇದರ ನಡುವೆ ತಂದೆಯನ್ನು ಕಳೆದುಕೊಂಡರು. ಅತ್ತ ಆಸೀಸ್ ವಿರುದ್ದ ಕಣಕ್ಕಿಳಿದ ಸಿರಾಜ್ ಜನಾಂಗೀಯ ನಿಂದನೆಗೂ ಗುರಿಯಾದರು. ಇದೆಲ್ಲವನ್ನೂ ಮೀರಿ ಇದೀಗ ಟೀಮ್ ಇಂಡಿಯಾ ವೇಗಿ ಎಲ್ಲಾ ಟೀಕಾಗಾರರಿಗೆ ಬೌಲಿಂಗ್ ಮೂಲಕವೇ ಉತ್ತರ ನೀಡಿದ್ದಾರೆ.
ಹೌದು, 3ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸುವ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಗೆ ಕಡಿವಾಣ ಹಾಕಲು ಯಶಸ್ವಿಯಾಗಿದ್ದಾರೆ. 4ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ 19.5 ಓವರ್ ಬೌಲಿಂಗ್ ಮಾಡಿದ ಹೈದರಾಬಾದ್ ವೇಗಿ 73 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ
ಅದ್ಭುತ ಪ್ರದರ್ಶನದ ಬಳಿಕ ಮಾತನಾಡಿದ ಸಿರಾಜ್, ನನ್ನ ಈ ಯಶಸ್ಸಿನ ಶ್ರೇಯಸ್ಸು ತಾಯಿಗೆ ಸೇರಬೇಕು ಎಂದಿದ್ದಾರೆ.
ಏಕೆಂದರೆ ತಂದೆಯನ್ನು ಕಳೆದುಕೊಂಡ ನಂತರ ತಾಯಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರು. ನಾನು ತಾಯಿಗೆ ಕರೆ ಮಾಡಿದಾಗ ನನ್ನ ತಂದೆಯ ಕನಸನ್ನು ಅವರು ನೆನಪಿಸಿದ್ದರು. ಅವರ ಮಾತುಗಳು ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಎಂದಿದ್ದಾರೆ.
ಅಲ್ಲದೆ ಭಾರತಕ್ಕಾಗಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಏಕೆಂದರೆ ಟೀಮ್ ಇಂಡಿಯಾ ಪರ ಟೆಸ್ಟ್ ಆಡುವುದು ನನ್ನ ತಂದೆಯ ಕನಸಾಗಿತ್ತು. ಅವರು ಇಂದು ಇದ್ದಿದ್ದರೆ ತುಂಬಾ ಖುಷಿಪಡುತತ್ಇದ್ದರು. ಆದರೂ ಅವರ ಆಶೀರ್ವಾದ ನನ್ನ ಜೊತೆಗಿದೆ. ಅವರ ಅಗಲಿಕೆಯು ನನನ್ನು ಕಠಿಣ ಪರಿಸ್ಥಿತಿಗೆ ದೂಡಿತ್ತು. ಆದರೆ ತಾಯಿಯ ಜೊತೆ ಮಾತನಾಡಿದಾಗ ಮೇಲೆ ಸ್ವಲ್ಪ ಆತ್ಮ ವಿಶ್ವಾಸವನ್ನು ಪಡೆದುಕೊಂಡೆ.
ಅಮ್ಮನ ಮಾತುಗಳಿಂದಾಗಿ ನಾನು ಮಾನಸಿಕವಾಗಿ ಬಲಿಷ್ಠನಾದೆ. ಅದರಂತೆ ತಂದೆಯ ಕನಸನ್ನು ಈಡೇರಿಸಲು ನಿರ್ಧರಿಸಿದೆ. ಹೀಗಾಗಿ ಐದು ವಿಕೆಟ್ಗಳನ್ನು ಪಡೆದಿರುವುದನ್ನು ಸಂತೋಷವನ್ನು ನನಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಷ್ಟೊಂದು ಖುಷಿಯಿದೆ ಎಂದು ಸಿರಾಜ್ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ