ಕೊಹ್ಲಿ-ರೋಹಿತ್ ನಡುವೆ ಎಲ್ಲವು ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ!

ಕಳೆದ ಏಕದಿನ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೆ ಕೊಹ್ಲಿ ಹಾಗೂ ರೋಹಿತ್ ನಡುವೆ ಮನಸ್ಥಾನ ಉಂಟಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಪುಷ್ಠಿ ನೀಡುವ ಅನೇಕ ಘಟನೆಗಳು ಆ ಸಂದರ್ಭ ನಡೆದಿದ್ದವು.

Vinay Bhat | news18-kannada
Updated:October 22, 2019, 8:45 AM IST
ಕೊಹ್ಲಿ-ರೋಹಿತ್ ನಡುವೆ ಎಲ್ಲವು ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಅ. 22): ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಗೆಲುವಿಗೆ ಇನ್ನು ಕೇವಲ ಎರಡು ಮೆಟ್ಟಿಲುಗಳಷ್ಟೆ ಬಾಕಿಯಿದೆ. ಟೂರ್ನಿಯುದ್ದಕ್ಕು ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಭಾರತೀಯರು ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಅಂತಿಮ ಟೆಸ್ಟ್​ ಕೂಡ ಗೆದ್ದು ಸರಣಿ ಕ್ಲೀನ್​ಸ್ವೀಪ್​ ಮಾಡಿ ಕೊಹ್ಲಿ ಪಡೆ ಅಭಿಮಾನಿಗಳಿಗೆ ದೀಪಾವಳಿಯ ಉಡುಗೊರೆ ನೀಡಲಿದೆ.

ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೈದಾನದಲ್ಲಿ ಮಾತುಕತೆ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

IND v SA 3rd Test: Virat Kohli and Rohit Sharma share a laugh while fielding in the slip cordon; video goes viral
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ


IND vs SA: ಭಾರತದ ಗೆಲುವಿಗಿನ್ನು ಎರಡನೇ ಮೆಟ್ಟಿಲು; ಇಂದೇ ಸರಣಿ ಕ್ಲೀನ್​ಸ್ವೀಪ್ ಮಾಡಲಿದೆ ಕೊಹ್ಲಿ ಪಡೆ!

ಕೊಹ್ಲಿ ಹಾಗೂ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ ಎಂದು ಕೆಲವರು ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ನಿನ್ನೆ ಮೂರನೇ ದಿನದಾಟದಲ್ಲಿ ಆಫ್ರಿಕಾ ಬ್ಯಾಟಿಂಗ್ ನಡೆಸುತ್ತಿರುವ ವೇಳೆ ಕೊಹ್ಲಿ ಹಾಗೂ ರೋಹಿತ್ ಮೈದಾನದಲ್ಲಿ ನಗು ನಗುತ್ತಾ ಸಂತೋಷದಲ್ಲಿ ಕಾಲ ಕಳೆದಿದ್ದಾರೆ. ಇಬ್ಬರೂ ವಿಕೆಟ್ ಹಿಂದುಗಡೆ ಸ್ಪಿಪ್​ನಲ್ಲಿ ನಿಂತು ಫಿಲ್ಡಿಂಗ್ ಮಾಡುವ ವೇಳೆ ತಮಾಷೆಯಾಗಿ ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಖತ್ ಸದ್ದು ಮಾಡುತ್ತಿದೆ.

 


ಕಳೆದ ಏಕದಿನ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೆ ಕೊಹ್ಲಿ ಹಾಗೂ ರೋಹಿತ್ ನಡುವೆ ಮನಸ್ಥಾನ ಉಂಟಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಪುಷ್ಠಿ ನೀಡುವ ಅನೇಕ ಘಟನೆಗಳು ಆ ಸಂದರ್ಭ ನಡೆದಿದ್ದವು.

ಈ ವಿಚಾರ ತಾರಕ್ಕಕ್ಕೇರುತ್ತಿದೆ ಎಂಬೊತ್ತಿಗೆ ಸ್ವತಃ ಕೊಹ್ಲಿ ಅವರೇ ಪತ್ರಿಕಾಗೋಷ್ಠಿಯಲ್ಲಿ ನಮ್ಮಿಬ್ಬರ ನಡುವೆ ಯಾವುದೇ ಮೈಮನಸ್ಸಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

First published: October 22, 2019, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading