IND v AUS 2020: ಪಿಂಕ್ ಬಾಲ್ ಟೆಸ್ಟ್​ನಲ್ಲಿ ಮೂಡಿಬಂದ ಗರಿಷ್ಠ ಮೊತ್ತವೆಷ್ಟು?

2017 ರಲ್ಲಿ ಅಡಿಲೇಡ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 442 ಬಾರಿ ಡಿಕ್ಲೇರ್ ನೀಡಿತು. ಶಾನ್ ಮಾರ್ಷ್ ಅವರ 126 ರನ್ ಗಳ ಸಹಾಯದಿಂದ ಆಸೀಸ್ 442 ರನ್​ಗಳ ಬೃಹತ್ ಮೊತ್ತ ದಾಖಲಿಸಿತು.

Pink Ball Test

Pink Ball Test

 • Share this:
  ಭಾರತ-ಆಸ್ಟ್ರೇಲಿಯಾ ನಡುವೆ ಅಡಿಲೇಡ್​ ಮೈದಾನದಲ್ಲಿ ಪಿಂಕ್ ಬಾಲ್ ಟೆಸ್ಟ್ ಶುರುವಾಗಿದೆ. ಹೊನಲು ಬೆಳಕಿನಲ್ಲಿ ನಡೆಯುವ ಈ ಟೆಸ್ಟ್ ಪಂದ್ಯಾವಳಿಯು ಇದುವರೆಗೆ ಡ್ರಾನಲ್ಲಿ ಅಂತ್ಯಗೊಂಡಿಲ್ಲ ಎಂಬುದು ವಿಶೇಷ. ಇನ್ನು ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಇತ್ತ ಬಾರ್ಡರ್-ಗವಾಸ್ಕರ್ ಟೂರ್ನಿಯ ಮೊದಲ ಪಿಂಕ್ ಬಾಲ್ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ಭಾರತ  244 ರನ್ ಗಳಿಸಿದೆ.  ಅತ್ತ ಆಸ್ಟ್ರೇಲಿಯಾ ಕೂಡ ಮುಗ್ಗರಿಸುವ ಮೂಲಕ 191 ರನ್​ಗೆ ಸರ್ವಪತನ ಕಂಡಿದೆ. ಅಂದರೆ ಪಿಂಕ್ ಬಾಲ್ ಟೆಸ್ಟ್​ನಲ್ಲಿ ದೊಡ್ಡ ಮೊತ್ತ ಮೂಡಿಬಂದಿಲ್ಲ ಎಂದು ನೀವಂದುಕೊಳ್ಳಬೇಡಿ. ಏಕೆಂದರೆ ಡೇ-ನೈಟ್ ಟೆಸ್ಟ್​ನಲ್ಲಿ 3 ಬಾರಿ ಮೊದಲ ಇನಿಂಗ್ಸ್​ನಲ್ಲಿ  500 ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.

  ಇನ್ನು ಪಿಂಕ್ ಬಾಲ್ ಟೆಸ್ಟ್​ನಲ್ಲಿ ಇನಿಂಗ್ಸ್​ವೊಂದರಲ್ಲಿ ಯಾವ ತಂಡ ಅತೀ ಹೆಚ್ಚು ರನ್ ಕಲೆಹಾಕಿದೆ ಎಂದು ನೋಡುವುದಾದರೆ, ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಪಾಕಿಸ್ತಾನವಿದೆ. ಹಾಗಿದ್ರೆ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಮೂಡಿಬಂದ ಟಾಪ್ 5 ಇನಿಂಗ್ಸ್​ ನೋಡೋಣ.

  1. 589-3 ಡಿಕ್ಲೇರ್: 2019 ರಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಅಡಿಲೇಡ್ ಮೈದಾನದಲ್ಲಿ ಮೊದಲ ಇನಿಂಗ್ಸ್​ನಲ್ಲಿ 589 ರನ್ ಬಾರಿಸಿತ್ತು. ಡೇವಿಡ್ ವಾರ್ನರ್ ಭರ್ಜರಿ 335 ರನ್ ಹಾಗೂ ಮಾರ್ನಸ್ ಲಾಬುಶೇನ್ ಅವರ 162 ರನ್​ಗಳ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿತ್ತು.

  2. 579-3 ಡಿಕ್ಲೇರ್ : 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದುಬೈನಲ್ಲಿ ನಡೆದ ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 579 ರನ್​ ಕಲೆಹಾಕಿತ್ತು. ಪಾಕ್ ಆರಂಭಿಕ ಆಟಗಾರ ಅಜರ್ ಅಲಿ ತಮ್ಮ ಚೊಚ್ಚಲ ಅಜೇಯ 302 ರನ್ ಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸುವಂತಾಗಿತ್ತು.

  3. 514-8 ಡಿಕ್ಲೇರ್: 2017 ರಲ್ಲಿ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 514 ರನ್ ಬಾರಿಸಿ ಡಿಕ್ಲೇರ್ ನೀಡಿತು. ಅಲೆಸ್ಟರ್ ಕುಕ್ (243 ರನ್), ಜೋ ರೂಟ್ (136 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತ ದಾಖಲಿಸಿತು.

  4. 482 ಆಲೌಟ್: 2017 ರಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಶ್ರೀಲಂಕಾ 485 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ದಿಮುತ್ ಕರುಣರತ್ನ ಅವರ 196 ರನ್​ಗಳ ನೆರವಿನಿಂದ ಲಂಕಾ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

  5. 442-8 ಡಿಕ್ಲೇರ್: 2017 ರಲ್ಲಿ ಅಡಿಲೇಡ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 442 ಬಾರಿ ಡಿಕ್ಲೇರ್ ನೀಡಿತು. ಶಾನ್ ಮಾರ್ಷ್ ಅವರ 126 ರನ್ ಗಳ ಸಹಾಯದಿಂದ ಆಸೀಸ್ 442 ರನ್​ಗಳ ಬೃಹತ್ ಮೊತ್ತ ದಾಖಲಿಸಿತು.
  Published by:zahir
  First published: