ಕೊನೆಗೂ ವಿವಾದಾತ್ಮಕ ಸೂಪರ್ ಓವರ್​ ನಿಯಮ ಕೈಬಿಟ್ಟ ಐಸಿಸಿ..!

ಈ ಹಿಂದೆ ಸೂಪರ್ ಓವರ್ ಟೈ ಆದಾಗ ಯಾವ ತಂಡ ಅತೀ ಹೆಚ್ಚು ಬೌಂಡರಿ ಬಾರಿಸಿರುತ್ತದೆ ಆ ತಂಡ ವಿಜಯಿ ಎಂದು ಘೋಷಿಸಲಾಗುತಿತ್ತು. ವಿಶ್ವಕಪ್ ಫೈನಲ್ ನಲ್ಲಿಇಂಗ್ಲೆಂಡ್ ತಂಡ ನ್ಯೂಜಿಲೆಂಡ್​ ವಿರುದ್ಧ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಕೂಡ ಇದೇ ನಿಯಮದಿಂದ.

zahir | news18-kannada
Updated:October 15, 2019, 4:20 PM IST
ಕೊನೆಗೂ ವಿವಾದಾತ್ಮಕ ಸೂಪರ್ ಓವರ್​ ನಿಯಮ ಕೈಬಿಟ್ಟ ಐಸಿಸಿ..!
ಸಾಂದರ್ಭಿಕ ಚಿತ್ರ
  • Share this:
ಕ್ರಿಕೆಟ್ ವಿಶ್ವಕಪ್ 2019 ಫೈನಲ್ ಪಂದ್ಯದಲ್ಲಿ ಭಾರಿ ಟೀಕೆಗೆ ಕಾರಣವಾದ ಸೂಪರ್ ಓವರ್​ನ ಬೌಂಡರಿ ಕೌಂಟ್ ನಿಯಮವನ್ನು ಕೊನೆಗೂ ಐಸಿಸಿ ಬದಲಾಯಿಸಿದೆ. ಅದರಂತೆ ಇನ್ನು ಮುಂದೆ ಸೂಪರ್ ಓವರ್ ಟೈ ಆದರೆ ಪಂದ್ಯವನ್ನು ಕೊನೆವರೆಗೂ ಮುಂದುವರೆಸುವುದಾಗಿ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.

ಕ್ರಿಕೆಟ್​ನಲ್ಲಿ ಎರಡೂ ತಂಡಗಳ ಸ್ಕೋರ್​ ಸಮಗೊಂಡರೆ  ಸೂಪರ್ ಓವರ್ ಆಡಿಸಲಾಗುತ್ತಿತ್ತು. ಇದು ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಕ್ಕೂ ಅನ್ವಯವಾಗುತ್ತಿತ್ತು. ಆದರೆ ಇದೀಗ ಬಂದಿರುವ ಹೊಸ ನಿಮಯದ ಪ್ರಕಾರ ಸೂಪರ್ ಓವರ್ ಸಮವಾದರೂ, ಒಂದು ತಂಡ ಗೆಲ್ಲುವವರೆಗೂ ಸೂಪರ್ ಓವರ್ ಮುಂದುವರೆಯಲಿದೆ.

ಇದನ್ನೂ ಓದಿ: ಭಾರತ-ಪಾಕ್ ಪರ ಬ್ಯಾಟ್ ಬೀಸಿದ್ದರು ಈ ಆಟಗಾರ..!

ಈ ಹಿಂದೆ ಸೂಪರ್ ಓವರ್ ಟೈ ಆದಾಗ ಯಾವ ತಂಡ ಅತೀ ಹೆಚ್ಚು ಬೌಂಡರಿ ಬಾರಿಸಿರುತ್ತದೆ ಆ ತಂಡ ವಿಜಯಿ ಎಂದು ಘೋಷಿಸಲಾಗುತಿತ್ತು. ವಿಶ್ವಕಪ್ ಫೈನಲ್ ನಲ್ಲಿಇಂಗ್ಲೆಂಡ್ ತಂಡ ನ್ಯೂಜಿಲೆಂಡ್​ ವಿರುದ್ಧ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಕೂಡ ಇದೇ ನಿಯಮದಿಂದ. ಆದರೆ ಈ ನಿಮಯದ ಬಗ್ಗೆ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು.ಈ ಹಿನ್ನಲೆಯಲ್ಲಿ ಐಸಿಸಿ ಈ ನಿಯಮವನ್ನು ಬದಲಿಸಿದ್ದು, ಮುಂದಿನ ದಿನಗಳಲ್ಲಿ ಸೂಪರ್ ಓವರ್ ಟೈ ಆದ ಸಂದರ್ಭ ಬೌಂಡರಿ ಪರಿಗಣನೆಗೆ ಬರುವುದಿಲ್ಲ. ಸೂಪರ್ ಓವರ್ ಮೂಲಕವೇ ತಂಡದ ಜಯವನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.
First published: October 15, 2019, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading