ಟೀಂ ಇಂಡಿಯಾದಲ್ಲಿದ್ದಾನೆ ಕೊಹ್ಲಿಗಿಂತ ಅತ್ಯಂತ ಫಿಟ್ ಹಾಗೂ ಶರ ವೇಗದ ಸರದಾರ; ಯಾರು ಗೊತ್ತಾ..?

ಟೀಂ ಇಂಡಿಯಾ ಅಭ್ಯಾಸದ ವೇಳೆ ರಿಷಭ್‌ ಪಂತ್‌ ಮತ್ತು ಜಡೇಜಾ ಅವರೊಟ್ಟಿಗೆ ಓಡುತ್ತಿರುವ ಫೋಟೊ ಒಂದನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಬೆಂಗಳೂರು (ನ. 27): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕರ್ಷಕ ಶಾಟ್ಸ್​ ಹೊಡೆಯುವುದರಿಂದ ಹಿಡಿದು ವಿಕೆಟ್​ಗಳ ಮಧ್ಯೆ ಚಿರತೆಯಂತೆ ಓಡುವ ಹಾಗೂ ಮೈದಾನದಲ್ಲಿ ಗಮನವಹಿಸಿ ಆಡುವುದನ್ನು ಕಂಡರೆ ಅವರು ವಿಶ್ವದ ಅತ್ಯಂತ ಫಿಟ್​ ಕ್ರಿಕೆಟಿಗರಲ್ಲಿ ಒಬ್ಬರು ಎಂಬುವುದು ಸಾಬೀತಾಗುತ್ತದೆ.

ಪೀಲ್ಡ್​ನಲ್ಲಿ ಹಾಗೂ ಮೈದಾನದಿಂದ ಹೊರಗೂ ಕೊಹ್ಲಿ ತಮ್ಮ ಫಿಟ್ನೆಸ್​ಗೆ ಸಂಬಂಧಿಸಿದಂತೆ ಬಹಳಷ್ಟು ನಿಗಾ ವಹಿಸುತ್ತಾರೆ. ಪ್ರತಿಯೊಬ್ಬ ಭಾರತೀಯನೂ ಕೊಹ್ಲಿಯಿಂದ ಫಿಟ್ನೆಸ್​ನ ಪ್ರೇರಣೆ ಪಡೆಯುತ್ತಾರೆ. ಆದರೆ, ಟೀಂ ಇಂಡಿಯಾದಲ್ಲೇ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯನ್ನು ಮೀರಿಸುವ ಆಟಗಾರನಿದ್ದಾನಂತೆ. ಈ ಬಗ್ಗೆ ಸ್ವತಃ ಕೊಹ್ಲಿಯೇ ಹೇಳಿದ್ದಾರೆ.

IND vs WI: ಇದೀಗ ಅಧಿಕೃತ; ವಿಂಡೀಸ್ ವಿರುದ್ಧದ ಟಿ-20 ಸರಣಿಯಿಂದ ಶಿಖರ್ ಧವನ್ ಔಟ್!

ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಓಟದಲ್ಲಿ ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಕೊಹ್ಲಿ ಬಹಿರಂಗ ಪಡಿಸಿದ್ದಾರೆ. ಕೊಹ್ಲಿ ಪ್ರಕಾರ ಟೀಂ ಇಂಡಿಯಾದಲ್ಲಿ ಅತ್ಯಂತ ವೇಗವಾಗಿ ಓಡುವ ಹಾಗೂ ಫಿಟ್ ಆಟಗಾರನೆಂದರೆ ರವೀಂದ್ರ ಜಡೇಜಾ ಎಂದು ಕೊಹ್ಲಿ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಅಭ್ಯಾಸದ ವೇಳೆ ರಿಷಭ್‌ ಪಂತ್‌ ಮತ್ತು ಜಡೇಜಾ ಅವರೊಟ್ಟಿಗೆ ಓಡುತ್ತಿರುವ ಫೋಟೊ ಒಂದನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. "ಗುಂಪಾಗಿ ಪ್ರಾಕ್ಟೀಸ್ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಜಡ್ಡು ಗುಂಪಿನಲ್ಲಿ ಇರುವಾಗ ಆತನನ್ನು ಓಟದಲ್ಲಿ ಸೋಲಿಸುವವರೇ ಇಲ್ಲ" ಎಂದು ಜಡೇಜಾರನ್ನು ಹಾಡಿಹೊಗಳಿದ್ದಾರೆ.

 MS Dhoni: ಟಿ-20 ವಿಶ್ವಕಪ್​ಗೆ ಧೋನಿ ಬೇಕೋ- ಬೇಡವೋ?; ಕೋಚ್ ರವಿಶಾಸ್ತ್ರಿ ಹೇಳಿದ್ದೇನು ಗೊತ್ತಾ?

ನಿನ್ನೆಯಷ್ಟೆ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಬೌಲರ್​​ಗಳ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆಯಾಗಿ 15ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಆಲ್‍ರೌಂಡರ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಬಾಂಗ್ಲಾ ವಿರುದ್ಧದ ಡೇ-ನೈಟ್ ಟೆಸ್ಟ್​ನಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಕೊಹ್ಲಿ (928) ಹಾಗೂ ಸ್ಮಿತ್ (931) ನಡುವೆ ಅಗ್ರಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಪರಿಷ್ಕೃತ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಕೇವಲ 3 ಅಂಕಗಳಿಂದ ರನ್ ಮಿಷಿನ್ ಹಿಂದೆ ಉಳಿದಿದ್ದಾರೆ.

First published: