• Home
 • »
 • News
 • »
 • sports
 • »
 • Ind vs Pak T20 WC: ಭಾರತ ಪಾಕಿಸ್ತಾನವನ್ನು ಸೋಲಿಸಿದರೆ ಟ್ವಿಟರ್‌ನಿಂದ ನಿರ್ಗಮಿಸ್ತೀನಿ! ಹೀಗೆ ಹೇಳಿದ್ದ ನಟಿಗೆ ನೆಟ್ಟಿಗರ ತರಾಟೆ

Ind vs Pak T20 WC: ಭಾರತ ಪಾಕಿಸ್ತಾನವನ್ನು ಸೋಲಿಸಿದರೆ ಟ್ವಿಟರ್‌ನಿಂದ ನಿರ್ಗಮಿಸ್ತೀನಿ! ಹೀಗೆ ಹೇಳಿದ್ದ ನಟಿಗೆ ನೆಟ್ಟಿಗರ ತರಾಟೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಸವಾಲು ಹಾಕುವ ಪೋಸ್ಟ್ ಶೇರ್ ಮಾಡಿದ್ದರು. ಭಾರತವು ಪಾಕಿಸ್ತಾನವನ್ನು ಸೋಲಿಸಿದರೆ ತನ್ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಾಗಿ ಹೇಳಿದ್ದರು. ಇದೀಗ ನೆಟ್ಟಿಗರು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ!

ಮುಂದೆ ಓದಿ ...
 • Share this:

  ಭಾನುವಾರ (Sunday) ನಡೆದ ಭಾರತ ಮತ್ತು ಪಾಕಿಸ್ತಾನ (India And Pakistan) ನಡುವಿನ ಮೊದಲ ಟಿ20 (T20) ಪಂದ್ಯದಲ್ಲಿ (Match) ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ, ಜಯಗಳಿಸಿದೆ (Win). ಎಲ್ಲರೂ ವಿರಾಟ್​ ಕೊಹ್ಲಿಯ ಅದ್ಭುತ ಆಟವನ್ನು (Game) ಕೊಂಡಾಡುತ್ತಿದ್ದಾರೆ. ಹಲವು ನಟರು ಸೇರಿದಂತೆ, ಇಡೀ ದೇಶದ ಜನತೆ ಭಾರತದ ಯಶಸ್ಸಿನ ಬಗ್ಗೆ ಸಂಭ್ರಮಿಸಿದ್ದಾರೆ. ಭಾನುವಾರ ಅಂದರೆ ಅಕ್ಟೋಬರ್ 23, 2022 ರಂದು ನಡೆದ T20 ವಿಶ್ವಕಪ್‌ ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು. ಈ ಮಧ್ಯೆ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ, ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


  ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಟ್ವೀಟ್ ಮೂಲಕ ಸವಾಲು


  ವಾಸ್ತವದಲ್ಲಿ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಸವಾಲು ಹಾಕುವ ಪೋಸ್ಟ್ ಅನ್ನು ಶೇರ್ ಮಾಡಿದ್ದರು.


  ಅಕ್ಟೋಬರ್ 23, 2022 ರಂದು ಭಾರತವು T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ, ತನ್ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಾಗಿ ಹೇಳಿದ್ದರು. ಮತ್ತು ಯಾವತ್ತೂ ಟ್ವಿಟ್ಟರ್ ವೇದಿಕೆಯಲ್ಲಿ ಮರಳಿ ಬರುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.


  ಇದನ್ನೂ ಓದಿ: Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!


  ಎರಡು ದಿನ ಕಳೆದರೂ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಖಾತೆ ಡಿಲೀಟ್ ಮಾಡಿರಲಿಲ್ಲ


  ಆದರೆ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಅವರ ಟ್ವೀಟ್ ಅವರಿಗೆ ಈಗ ಭಾರೀ ಹೊಡೆತ ಕೊಟ್ಟಿದೆ. ಯಾಕಂದ್ರೆ ಪಾಕಿಸ್ತಾನದ ವಿರುದ್ಧದ ಭಾನುವಾರದ ಟಿ 20 ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ಮೂಲಕ ಪಾಕಿಸ್ತಾನ, ಭಾರತವನ್ನು ಸೋಲಿಸುತ್ತದೆ ಎಂಬ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಕನಸು ನುಚ್ಚು ನೂರಾಗಿದೆ.


  ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಗೆಲ್ಲುವ ಅವರ ಕನಸು ನನಸಾಗಲಿಲ್ಲ. ಆದರೆ ಹೇಳಿದ್ದ ಮಾತಿನಂತೆ ಎರಡು ದಿನ ಕಳೆದರೂ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ತಮ್ಮ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿರಲಿಲ್ಲ.


  ಹೀಗಾಗಿ ಒಬ್ಬ ಬಳಕೆದಾರರು, "ನಿಮ್ಮ ಖಾತೆಯನ್ನು ನೀವು ಇನ್ನೂ ಡಿಲೀಟ್ ಮಾಡಿಲ್ಲ. ಫಕಿಸ್ತಾನ್ ನಕಲಿ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ. "ನೀನು ಇನ್ನೂ ಇಲ್ಲಿ ಇದ್ದೀಯಾ, ನಿನ್ನ ಅಕೌಂಟ್ ನ್ನು ಡಿಲೀಟ್ ಮಾಡಿ ಹೋಗು” ಎಂದು ಬರೆದಿದ್ದಾರೆ. ಇನ್ನೊಬ್ಬರು “ ಇನ್ನೂ ಅಕೌಂಟ್ ಡಿಲೀಟ್ ಮಾಡಿಲ್ವಾ? “ ಎಂದು ಪ್ರಶ್ನಿಸಿದ್ದಾರೆ.


  ಭಾರತೀಯರ ಕೆಂಗಣ್ಣಿಗೆ ಗುರಿಯಾದ ನಟಿ ಸೆಹರ್ ಶಿನ್ವಾರಿ ಟ್ವೀಟ್


  ಮತ್ತೊಬ್ಬ ಬಳಕೆದಾರರು, "ಯಾರೂ ನಿಮ್ಮನ್ನು ಏಕೆ ನಂಬುವುದಿಲ್ಲ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ, ಇನ್ನೂ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾ ಗೆಲುವಿನ ಬಳಿಕ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಮತ್ತೊಂದು ಟ್ವೀಟ್ ಮಾಡಿದ್ದು, 'ಪಾಕಿಸ್ತಾನ ಇಂದು ತನ್ನ ಮಗಳು ಭಾರತಕ್ಕೆ ದೀಪಾವಳಿ ಉಡುಗೊರೆ ನೀಡಿದೆ' ಎಂದು ಟ್ವೀಟ್ ಮಾಡಿದ್ದಾರೆ.


  ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಈ ಟ್ವೀಟ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬಳಕೆದಾರರು ಸಿಕ್ಕಾಪಟ್ಟೆ ಟ್ರೋಲ್ ಮತ್ತು ತರಾಟೆ ತೆಗೆದುಕೊಂಡಿದ್ದಾರೆ. ಇದರ ನಂತರ, ಪಾಕಿಸ್ತಾನದ ಸೋಲಿನಿಂದಾಗಿ ಸೆಹರ್ ಶಿನ್ವಾರಿ, ಹುಚ್ಚರಂತೆ ಆಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಷವನ್ನು ಉಗುಳಲು ಪ್ರಾರಂಭಿಸಿದ್ದಾರೆ.


  ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಮರುದಿನ ಅಂದರೆ ಸೋಮವಾರ (24 ಅಕ್ಟೋಬರ್ 2022) ಮತ್ತೊಂದು ಟ್ವೀಟ್ ಮಾಡಿದ್ದಾರೆ. “ಪ್ರಸ್ತುತ ನನ್ನ ಟ್ವಿಟರ್ ಖಾತೆಯನ್ನು ಅಳಿಸಲು #Delete ಎಂಬ ಪದವು ಭಾರತದಲ್ಲಿ ಟ್ರೆಂಡಿಂಗ್ ಆಗಿದೆ. ಹೀಗಾಗಿ ನಾನು ನನ್ನ ಖಾತೆ ಡಿಲೀಟ್ ಮಾಡಬೇಕಾಗಿದೆ. ನನ್ನ ಟ್ವೀಟ್‌ ನಿಂದಾಗಿ ಭಾರತೀಯರು ಎಷ್ಟು ಹೆದರಿದ್ದಾರೆ ಎಂಬುದು ಇದರಿಂದ ತಿಳಿಯುತ್ತೆ ಎಂದು ಟ್ವೀಟ್ ಮಾಡಿದ್ದಾಳೆ.


  ಇದನ್ನೂ ಓದಿ: ವಿರಾಟ್​ ವಿಶ್ವರೂಪಕ್ಕೆ ಫ್ಯಾನ್ಸ್​ ಫಿದಾ, ಕೊಹ್ಲಿ ಆಟಕ್ಕೆ ಮನಸೋತ ಜೂನಿಯರ್​ ಎನ್​ಟಿಆರ್!


  ಇನ್ನು ಬಳಕೆದಾರರು ಆಡಿದ ಮಾತು ಉಳಿಸಿಕೊಳ್ಳುವಂತೆ, ನೀಡಿದ ಭರವಸೆಯಂತೆ ನಡೆದುಕೊಳ್ಳುವಂತೆ ಚಾಟಿ ಬೀಸಿದ್ದಾರೆ. ಅಭಿಮಾನಿಗಳು ನಟಿಯ ಭರವಸೆಯನ್ನು ನೆನಪಿಸುವ ಮೂಲಕ ಟ್ವಿಟರ್‌ಗೆ ಶಾಶ್ವತವಾಗಿ ವಿದಾಯ ಹೇಳುವಂತೆ ನಿರಂತರವಾಗಿ ಕೇಳುತ್ತಿದ್ದಾರೆ.

  Published by:renukadariyannavar
  First published: