ಕುಂಬ್ಳೆ ಕೋಚ್ ಹುದ್ದೆ ಬಿಡಲು ಕೊಹ್ಲಿ ಕಾರಣ: ವಿರಾಟ್ ಧೋರಣೆಗೆ ಬ್ರೇಕ್ ಹಾಕ್ತಾರಾ ಗಂಗೂಲಿ..!

Anil Kumble - Virat Kohli: ಸಿಎಸಿ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಅಂದು ಕೊಹ್ಲಿ ಮನವೊಲಿಸಲು ಯತ್ನಿಸಿದ್ದರು. ಆದರೆ ಹಿರಿಯ ಆಟಗಾರರ ನಿರ್ಧಾರವನ್ನು ಒಪ್ಪಲು ನಾಯಕ ಕೊಹ್ಲಿ ತಯಾರಾಗಿರಲಿಲ್ಲ ಎಂದು ವಿನೋದ್ ರಾಯ್ ಹೇಳಿದ್ದಾರೆ.

zahir | news18-kannada
Updated:October 24, 2019, 2:26 PM IST
ಕುಂಬ್ಳೆ ಕೋಚ್ ಹುದ್ದೆ ಬಿಡಲು ಕೊಹ್ಲಿ ಕಾರಣ: ವಿರಾಟ್ ಧೋರಣೆಗೆ ಬ್ರೇಕ್ ಹಾಕ್ತಾರಾ ಗಂಗೂಲಿ..!
Kumble-kohli
  • Share this:
ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರಾ? ಇಂತಹದೊಂದು ಪ್ರಶ್ನೆ ಈ ಹಿಂದೆ ವಿಶ್ವಕಪ್​ ವೇಳೆ ಕೇಳಿ ಬಂದಿತ್ತು. ತಂಡದ ಉಪನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ಕೊಹ್ಲಿ ತಮಗೆ ಆಪ್ತರಾದವರನ್ನು ತಂಡದಲ್ಲಿರಿಸಿಕೊಳ್ಳಲು ಬಯಸುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಬಿಸಿಸಿಐನ ಮಾಜಿ ಸಿಓಎ ವಿನೋದ್ ರಾಯ್ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ಜಗಳವಾಗಿತ್ತು. ಹೀಗಾಗಿಯೇ ಕೋಚ್ ಹುದ್ದೆಯನ್ನು ಲೆಜೆಂಡ್ ಕ್ರಿಕೆಟಿಗ ತೊರೆದಿದ್ದರು. ಕುಂಬ್ಳೆ ಕೋಚ್ ಆಗಿ ಮುಂದುವರೆಯಬೇಕೆಂದು ನಮ್ಮೆಲ್ಲರ ಇಚ್ಛೆಯಾಗಿತ್ತು. ಆದರೆ ಇದು ಕೊಹ್ಲಿಗೆ ಇಷ್ಟವಿರಲಿಲ್ಲ ಎಂದು ರಾಯ್ ತಿಳಿಸಿದ್ದಾರೆ.

ಈ ಟೀಂ ಇಂಡಿಯಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿವಿಎಸ್ ಲಕ್ಷ್ಮಣ್ ಅವರು ಅನಿಲ್ ಕುಂಬ್ಳೆ ಅವರನ್ನೆ ಮುಂದಿನ ಅವಧಿಗೂ ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಸಲು ಬಿಸಿಸಿಐಗೆ ಸೂಚಿಸಿತ್ತು. ಅಷ್ಟರಲ್ಲಾಗಲೇ ಅನಿಲ್ ಕುಂಬ್ಳೆ ಹುದ್ದೆ ಬಿಡಲು ನಿರ್ಧಾರ ಮಾಡಿದ್ದರು. ಕೊಹ್ಲಿ- ಕುಂಬ್ಳೆ ವೈಮನಸ್ಯವನ್ನು ತೊಡೆದುಹಾಕಲು ಸಲಹಾ ಸಮಿತಿ ಸದಸ್ಯರು ಕೂಡ ಪ್ರಯತ್ನಿಸಿದ್ದರು.

ಸಿಎಸಿ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಅಂದು ಕೊಹ್ಲಿ ಮನವೊಲಿಸಲು ಯತ್ನಿಸಿದ್ದರು. ಆದರೆ ಹಿರಿಯ ಆಟಗಾರರ ನಿರ್ಧಾರವನ್ನು ಒಪ್ಪಲು ನಾಯಕ ಕೊಹ್ಲಿ ತಯಾರಾಗಿರಲಿಲ್ಲ ಎಂದು ವಿನೋದ್ ರಾಯ್ ಹೇಳಿದ್ದಾರೆ.

ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎನು ನಡೆದಿದೆ ಎಂಬುದನ್ನು ನಾವು ಯೋಚಿಸುವುದಿಲ್ಲ. ಕೋಚ್ ಸ್ಥಾನದಲ್ಲಿ ಕುಂಬ್ಳೆ ಇರಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಆ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ಲೆಜೆಂಡ್ ಸ್ಪಿನ್ ಮಾಂತ್ರಿಕ ತಿಳಿಸಿದ್ದರು ಎಂದು ಲಕ್ಷ್ಮಣ್ ಈ ಹಿಂದೆ ಹೇಳಿದ್ದರು.

ಇದೀಗ ಭಾರತ ತಂಡದ ಕೋಚ್​ ಕುಂಬ್ಳೆ ತೊರೆಯಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಎಂದು ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ. ತಂಡದಲ್ಲಿ ಕೊಹ್ಲಿ ನಡೆಯಿಂದ ಕುಂಬ್ಳೆ ತೀವ್ರ ಬೇಸರಗೊಂಡು ತರಬೇತುದಾರನಾಗಿ ಮುಂದುವರೆಯಲು ಇಚ್ಛಿಸಲಿಲ್ಲ ಎಂದು ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ: ಎಲ್ಲ ಮಾದರಿ ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲೂ ರೋಹಿಟ್: ಹೊಸ ದಾಖಲೆ ಬರೆದ ಹಿಟ್​ಮ್ಯಾನ್24 ಜೂನ್​ 2016 ರಂದು ಟೀಂ ಇಂಡಿಯಾ ಕೋಚ್​ ಹುದ್ದೆಯನ್ನು ಅಲಂಕರಿಸಿದ್ದ ಕನ್ನಡಿಗ, 2017 ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆಯೇ ಕೊಹ್ಲಿ-ಕುಂಬ್ಳೆ ನಡುವೆ ಜಗಳವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದರೆ ಇದ್ಯಾವುದಕ್ಕೂ ಸ್ಪಷ್ಟನೆ ಸಿಕ್ಕಿರಲಿಲ್ಲ.

ವಿನೋದ್ ರಾಯ್ ಪ್ರಕಾರ ಈ ವಿಷಯ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೂ ತಿಳಿದಿದೆ. ಒಂದು ವೇಳೆ ಇಂದು ಆ ಘಟನೆ ಜರುಗಿದ್ದರೆ ಕೊಹ್ಲಿಯನ್ನು ದಾದಾ ನಿಯಂತ್ರಿಸುತ್ತಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಟೀಂ ಇಂಡಿಯಾದಲ್ಲಿರುವ ನಾಯಕನ ಸರ್ವಾಧಿಕಾರ ಧೋರಣೆಯನ್ನು ಮಟ್ಟಹಾಕಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. 

Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್
First published: October 24, 2019, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading