India vs England 3rd Test: ಇಂತಹ ಪಿಚ್ ಸಿಕ್ಕಿದ್ರೆ ಕುಂಬ್ಳೆ, ಹರ್ಭಜನ್ 1000 ವಿಕೆಟ್ ಕ್ಲಬ್ ನಲ್ಲಿರ್ತಿದ್ರು; ಯುವರಾಜ್ ಸಿಂಗ್ ಟೀಕೆ!

ಫೆಬ್ರವರಿ 24 ರಂದು ಶುರುವಾದ ಪಂದ್ಯದಲ್ಲಿ ಟಾಸ್ ಗೆದ್ದ ಜೋ ರೂಟ್‌ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಡರು. ಆದರೆ, ಜೋ ರೂಟ್ ಟಾಸ್ ಗೆದ್ರು ಅನ್ನೋದು ಬಿಟ್ರೆ, ಮುಂದಿನದೆಲ್ಲಾ ದುರಂತ ಕಥೆ.

ಯುವರಾಜ್​ ಸಿಂಗ್.

ಯುವರಾಜ್​ ಸಿಂಗ್.

  • Share this:
ಭಾರತ ಇಂಗ್ಲೆಂಡ್ ನಡುವಿನ ಹೊನಳು ಬೆಳಕಿನ ಟೆಸ್ಟ್ ಪಂದ್ಯವನ್ನು ಭಾರತ ಭರ್ಜರಿಯಾಗಿಯೇ ಗೆದ್ದಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಆ ಮೂಲಕ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಆಡೋ ಅವಕಾಶವನ್ನ ಜೀವಂತವಾಗಿ ಇಟ್ಟುಕೊಂಡಂತಾಗಿದೆ. ಅಹಮದಾಬಾದ್​ನಲ್ಲಿಯೇ ನಡೆಯಲಿರುವ ಮುಂದಿನ ಟೆಸ್ಟ್ ಡ್ರಾ ಆದರೂ ಸಾಕು ನ್ಯೂಜಿಲೆಂಡ್ ವಿರುದ್ಧ ಕಾದಾಡೋ ತಂಡವಾಗಿ ಇಂಡಿಯಾ ಅರ್ಹತೆ ಪಡೆದುಕೊಳ್ಳಲಿದೆ. ಆದರೆ, ಒಂದೂವರೆ ದಿನದಲ್ಲಿಯೇ ಆಂಗ್ಲ ದಾಂಡಿಗರನ್ನ ಎಡೆಮುರಿ ಕಟ್ಟಿ ಸೈ ಎನಿಸಿಕೊಂಡರೂ ಸಹ ಪಿಚ್ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಇದು ಟೆಸ್ಟ್ ಆಡೋಕೆ ಯೋಗ್ಯವಲ್ಲದ ಪಿಚ್ ಅನ್ನೋ ಟೀಕೆಗಳು ದಶದಿಕ್ಕುಗಳಿಂದಲೂ ಕೇಳಿ ಬರ್ತಿವೆ. ಭಾರತೀಯ ಕ್ರೀಡಾ ಅಭಿಮಾನಿಗಳೇ ಈ ಪಿಚ್ ಬಗ್ಗೆ ಸಾಕಷ್ಟು ಅಸಮಾಧಾನ, ಬೇಸರ ವ್ಯಕ್ತಪಡಿಸ್ತಿದ್ದಾರೆ ಅನ್ನೋದು ಪಿಚ್ ಯಾವ ರೀತಿ ಇತ್ತು ಅನ್ನೋದಕ್ಕೆ ಸಾಕ್ಷಿ..

ಹೌದು..ಫೆಬ್ರವರಿ 24 ರಂದು ಶುರುವಾದ ಪಂದ್ಯದಲ್ಲಿ ಟಾಸ್ ಗೆದ್ದ ಜೋ ರೂಟ್‌ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಡರು. ಆದರೆ, ಜೋ ರೂಟ್ ಟಾಸ್ ಗೆದ್ರು ಅನ್ನೋದು ಬಿಟ್ರೆ, ಮುಂದಿನದೆಲ್ಲಾ ದುರಂತ ಕಥೆ.  ಆಹ್ಮದಬಾದ್ ನ ಪಿಚ್ ಯಾವ ರೀತಿ ವರ್ತಿಸ್ತಿತ್ತು ಅಂದರೆ ಯಾವ ಆಂಗ್ಲ ದಾಂಡಿಗನೂ ಸಹ ಭಾರತಿಯ ದಾಳಿಗೆ ಪ್ರತಿರೋದ ಒಡ್ಡಲೇ ಇಲ್ಲ.

ಜೋ ರೂಟ್ ರಂತಹ ವಿಶ್ವ ಶ್ರೇಷ್ಠ ದಾಂಡಿಗ ಸಹ ಸುಲಭಕ್ಕೆ ವಿಕೆಟ್ ಕೈ ಚೆಲ್ಲಿದರೆ, ಸ್ಪಿನ್ ದಾಳಿಗೆ ತತ್ತರಿಸಿ ಹೋಗೋ ಉಳಿದ ಬ್ಯಾಟ್ಸ್ ಮನ್ ಗಳ ಕಥೆ ಹೇಳಲೇಬೇಕಿಲ್ಲ. ಡಾಮಿನಿಕ್ ಸಿಬ್ಲಿ ಆರ್ಧ ಶತಕ ಗಳಿಸಿದ್ರೂ ಕೂಡ ಇಂಗ್ಲೆಂಡ್ 112 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಕೊನೆ ಗೊಳಿಸಿತ್ತು.

ಇನ್ನು ಇಂಗ್ಲೆಂಡ್ ಇನ್ನಿಂಗ್ಸ್ ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ನಿನ್ನೆ ಮೂರು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತ್ತು. ಎರಡನೇ ದಿನ ಅದ್ಭುತ ಆಟ ಮುಂದುವರೆಸಿ ೩೦೦ ಕ್ಕಿಂತಲೂ ಹೆಚ್ಚು ರನ್ ಪೇರಿಸಬಹುದೆಂದು ಕ್ರೀಡಾ ಅಭಿಮಾನಿಗಳು ಭಾವಿಸಿದ್ದರು ಆದರೆ, ಗಿರ ಗಿರ ತಿರುಗೋ ಪಿಚ್ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. ಭಾರತ ಎರಡನೇ ದಿನ 40 ರಿಂದ 50 ರನ್ ಪೇರಿಸಲು ಒದ್ದಾಡಿಬಿಡ್ತು. ಅರೆ ಕಾಲಿಕ ಬೌಲರ್ ಜೋ ರೂಟ್ ಕೇವಲ ೮ ರನ್ ನೀಡಿ ಐದು ವಿಕೆಟ್ ಕಿತ್ತು ಜೀವನ ಶ್ರೇಷ್ಠ ಸಾಧನೆ ಮಾಡಿದರು.

ಮೊದಲ ಇನ್ನಿಂಗ್ಸ್ ನಲ್ಲಿ 33 ರನ್ ಹಿನ್ನಡೆ ಅನುಭವಿಸಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಇನ್ನಷ್ಟು ನಿಕೃಷ್ಟವಾಗಿ ಆಡಿತು. ಕೇವಲ 81 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಗಂಟುಮೂಟೆ ಕಟ್ತು. ಭಾರತಕ್ಕೆ 49 ರನ್ ಗುರಿಯನ್ನಷ್ಟೆ ನೀಡಲು ಶಕ್ತವಾಯಿತು. ಅಕ್ಷರ್ ಪಟೇಲ್ 5 ವಿಕೆಟ್ ಕಿತ್ರೆ, ಅಶ್ವಿನ್ 4 ವಿಕೆಟ್ ಪಡೆದುಕೊಂಡು ಆಂಗ್ಲರ ಪಾಲಿಗೆ ಮಾರಕವಾದರು.



ನಿರೀಕ್ಷೆಯಂತೆ 49 ರನ್  ಬೆನ್ನಟ್ಟಿದ ಇಂಡಿಯಾ ಸುಲಭವಾಗಿ ವಿಜಯ ಸಾಧಿಸಿತು. 10 ವಿಕೆಟ್ ಗಳ ದಿಗ್ವಿಜಯ ಸಾಧಿಸಿ ಪರಾಕ್ರಮ ಮೆರೆಯಿತು.. ಈ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಹರ್ಷ ವ್ಯಕ್ತಪಡಿಸೋ ಬದಲು ಟೀಕೆ ವ್ಯಕ್ತ ಪಡಿಸ್ತಿದ್ದಾರೆ. ಅದರಲ್ಲೂ ದಿ ಗ್ರೇಟ್ ಆಲ್ ರೌಂಡರ್ ಯುವರಾಜ್ ಸಿಂಗ್ ಇಂತಹ ಪಿಚ್, ಅನಿಲ್ ಕುಂಬ್ಳೆ, ಹರ್ಭಜನ್​ರಿಗೆ ಸಿಕ್ಕಿದ್ರೆ, 800,1000 ವಿಕೆಟ್ ಪಡೆದ ಸಾಲಿನಲ್ಲಿ ಮೊದಲಿಗೆ ಕೂರ್ತಿದ್ರು ಅಂತೇಳಿದ್ದಾರೆ. ಈ ಮೂಲಕ ಮೊಟೇರಾ ಪಿಚ್​ ಬಗ್ಗೆ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published by:MAshok Kumar
First published: