HOME » NEWS » Sports » CRICKET ICC WTC FINAL 2021 CHANCES OF PRASIDH KRISHNA TRAVELLING TO UK ALONG WITH TEAM INDIA ZP

ICC WTC Final 2021: ಟೀಮ್ ಇಂಡಿಯಾ ಜೊತೆ ಪ್ರಸಿದ್ಧ್ ಕೃಷ್ಣ ತೆರಳುವುದು ಅನುಮಾನ..!

news18-kannada
Updated:May 9, 2021, 9:25 PM IST
ICC WTC Final 2021: ಟೀಮ್ ಇಂಡಿಯಾ ಜೊತೆ ಪ್ರಸಿದ್ಧ್ ಕೃಷ್ಣ ತೆರಳುವುದು ಅನುಮಾನ..!
prasidh krishna
  • Share this:
ಕೊರೋನಾವೈರಸ್ ಕಾರಣ ಐಪಿಎಲ್ 14 ನೇ ಸೀಸನ್​ನ್ನು ಮುಂದೂಡಲಾಯಿತು. ಕಟ್ಟುನಿಟ್ಟಿನ ಜೈವಿಕ ಗುಳ್ಳೆಯ ಹೊರತಾಗಿಯೂ, ಸಾಂಕ್ರಾಮಿಕ ವೈರಸ್ ಬಯೋಬಬಲ್​ನ್ನು ಪ್ರವೇಶಿಸಿತ್ತು. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ), ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಸೇರಿದಂತೆ ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದರು. ಈ ಕಾರಣದಿಂದಾಗಿ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಐಪಿಎಲ್ ಅನ್ನು ಮುಂದೂಡಿದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ವೇಗದ ಬೌಲರ್ ಪ್ರಸಿದ್ಧ ಪ್ರಸಿದ್ಧ್ ಕೃಷ್ಣ ಅವರು ಕೊರೋನಾ ಪಾಸಿಟಿವ್ ಆಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಗಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಪ್ರಸಿದ್ಧ್ ಕೃಷ್ಣ ಸ್ಟ್ಯಾಂಡ್-ಬೈ ಆಟಗಾರನಾಗಿ ಅವಕಾಶ ಪಡೆದಿದ್ದರು. ಆದರೀಗ ಕೊರೋನಾ ಕಾರಣದಿಂದ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ 8 ದಿನಗಳ ಕಾಲ ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ಈ ವೇಳೆ ಆಟಗಾರರಿಗೆ ಮೊದಲ ಹಂತದ ಕೋವಿಡ್ ಲಸಿಕೆ ನೀಡಲಾಗುತ್ತದೆ. ಆದರೆ ಕೊರೋನಾ ಕಾರಣದಿಂದ ಪ್ರಸಿದ್ಧ್ ಕೃಷ್ಣ 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ. ಅಲ್ಲದೆ ಈ ವೇಳೆ ವಾಕ್ಸಿನ್ ಪಡೆದುಕೊಳ್ಳುವಂತಿಲ್ಲ ಎಂದು ತಿಳಿದು ಬಂದಿದೆ.

ಅತ್ತ ಟೀಮ್ ಇಂಡಿಯಾ ಕ್ವಾರಂಟೈನ್ ಮುಗಿಸಿ ಜೂ. 2 ರಂದು ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದೆ. ಹಾಗೆಯೇ ಇಂಗ್ಲೆಂಡ್​ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಹಾಗಾಗಿ ಮೇ. 22 ರೊಳಗೆ ಪ್ರಸಿದ್ಧ್ ಕೃಷ್ಣ ಸಂಪೂರ್ಣವಾಗಿ ಗುಣಮುಖರಾದರೆ ಮಾತ್ರ ತಂಡದೊಂದಿಗೆ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ. ಇತ್ತ ಸ್ಟ್ಯಾಂಡ್​ ಬೈ ಆಟಗಾರನಾಗಿರುವುದರಿಂದ ಪ್ರಸಿದ್ಧ್ ಕೃಷ್ಣ ಅವರ ಬದಲಿ ಆಟಗಾರನ ಆಯ್ಕೆಯ ಬಗ್ಗೆ ಕೂಡ ಬಿಸಿಸಿಐ ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಇನ್ನು 2 ವಾರದೊಳಗೆ ಪ್ರಸಿದ್ಧ್ ಕೃಷ್ಣ ಅವರ ಅದೃಷ್ಟ ಕೈ ಹಿಡಿಯಲಿದೆಯಾ ಕಾದು ನೋಡಬೇಕಿದೆ.
Youtube Video

ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕುರ್, ಉಮೇಶ್ ಯಾದವ್ (ಕೆಎಲ್ ರಾಹುಲ್, ವೃದ್ಧಿಮಾನ್ ಸಾಹ ಫಿಟ್​ನೆಸ್ ಸಾಬೀತುಪಡಿಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ)
Published by: zahir
First published: May 9, 2021, 9:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories