ಇಂದಿನ ಆ ದಿನ: ಟಿ-20 ವಿಶ್ವಕಪ್​ನಲ್ಲಿ ಕಾಂಗರೂಗಳಿಗೆ ಕೊಹ್ಲಿಯ ವಿರಾಟ ಪ್ರದರ್ಶನ; ಸೆಮೀಸ್​ಗೆ ಎಂಟ್ರಿ!

ICC World T20 2016: ಕೊನೆಯ 2 ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 20 ರನ್​ಗಳು ಬೇಕಾಗಿದ್ದವು. 19ನೇ ಓವರ್​ನ ನೇಥನ್ ಕಲ್ಟರ್ ನೈಲ್ ಬೌಲಿಂಗ್​ನಲ್ಲೂ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 5 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಖಚಿತ ಪಡಿಸಿದರು.

Vinay Bhat | news18-kannada
Updated:March 27, 2020, 11:19 AM IST
ಇಂದಿನ ಆ ದಿನ: ಟಿ-20 ವಿಶ್ವಕಪ್​ನಲ್ಲಿ ಕಾಂಗರೂಗಳಿಗೆ ಕೊಹ್ಲಿಯ ವಿರಾಟ ಪ್ರದರ್ಶನ; ಸೆಮೀಸ್​ಗೆ ಎಂಟ್ರಿ!
ದಾಖಲೆಯ ಶಿಖರವನ್ನು ಏರುತ್ತಿರುವ ಕಿಂಗ್ ಕೊಹ್ಲಿ, ಇನ್ನು ಕೆಲವೇ ವರ್ಷಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶತಕದ ದಾಖಲೆಯನ್ನೂ ಮುರಿಯಲ್ಲಿದ್ದಾರೆ ಎಂದೇ ನಂಬಲಾಗಿದೆ.
  • Share this:
ಕಳೆದ ಆವೃತ್ತಿಯ ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಅತ್ಯಂತ ರೋಚಕವಾಗಿದ್ದ ಪಂದ್ಯವದು. ಚೇಸಿಂಗ್​ನಲ್ಲಿ ರಾಜನಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ, ಐಸಿಸಿ ಟಿ-20 ವಿಶ್ವಕಪ್​ನ ಮಾರ್ಚ್​ 27, 2016 ರಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಟ್ಟಹಾಸ ಮೆರೆಯಿತು. ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಕಾಂಗರೂಗಳ ಪಾಲಿಗೆ ಅಕ್ಷರಶಃ ವಿಲನ್ ಆದರು.

ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಭಾರತಕ್ಕೆ ಈ ಪಂದ್ಯ ಬಹಳ ಮುಖ್ಯವಾಗಿತ್ತು. ಸೆಮಿ ಫೈನಲ್​ ತಲುಪಲು ಆಸ್ಟ್ರೇಲಿಯಾ ವಿರುದ್ಧ ಎಂಎಸ್ ಧೋನಿ ಪಡೆ ಗೆಲ್ಲಲೇ ಬೇಕಾಗಿತ್ತು. ಅದರಂತೆ ಭಾರತ ಈ ಹೈವೋಲ್ಟೇಜ್ ಪಂದ್ಯದಲ್ಲಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸೆಮೀಸ್​ಗೆ ಲಗ್ಗೆಯಿಟ್ಟಿತು. ಭಾರತದ ಗೆಲುವಿಗೆ ಕಾರಣವಾಗಿದ್ದು, ಈಗಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ICC World T20 2016: King Kohli's Match-Winning Knock Against Australia in Mohali
ವಿರಾಟ್ ಕೊಹ್ಲಿ.


VIDEO: ಸಖತ್ ವೈರಲ್ ಆಗುತ್ತಿದೆ ಅಪ್ಪನೊಂದಿಗೆ ಚಹಾಲ್ ಮಾಡಿದ ಟಿಕ್ ಟಾಕ್ ವಿಡಿಯೋ

ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾಕ್ಕೆ ಉಸ್ಮಾನ್ ಖ್ವಾಜಾ(26) ಹಾಗೂ ಆ್ಯರೋನ್ ಫಿಂಚ್(43) ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ 31 ರನ್ ಚಚ್ಚಿದ ಪರಿಣಾಮ ಆಸ್ಟ್ರೇಲಿಯಾ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಸುರೇಶ್ ರೈನಾ 10 ರನ್​ಗೆ ಸುಸ್ತಾದರೆ, ಯುವರಾಜ್ ಸಿಂಗ್ 21 ರನ್​​ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾನ್ನರಿಗೆ ಭಯ ಹುಟ್ಟಿಸಿದ್ದರು.

ಭಾರತ 7.5 ಓವರ್ ಆಗುವ ಹೊತ್ತಿಗೆ 49 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ಯುವಿ ಔಟ್ ಆಗುವ ಹೊತ್ತಿಗೆ ಭಾರತಕ್ಕೆ ಗೆಲ್ಲಲು 36 ಎಸೆತಗಳಲ್ಲಿ 66 ರನ್​ಗಳ ಅವಶ್ಯಕತೆಯಿತ್ತು. ಒಂದು ಓವರ್​ಗೆ 11 ರನ್​ಗಳು ಹೊಡೆಯಬೇಕಿತ್ತು.ಕೊರೋನಾ ವಿರುದ್ಧ ಹೋರಾಡಲು ಮಹತ್ವದ ಹೆಜ್ಜೆ ಇಟ್ಟ ಪಾಕ್- ಬಾಂಗ್ಲಾ ಕ್ರಿಕೆಟಿಗರು

ಈ ಸಂದರ್ಭ ನಾಯಕ ಎಂ ಎಸ್ ಧೋನಿ ಜೊತೆಗೂಡಿದ ಕೊಹ್ಲಿ ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕಯ ಆಟವಾಡಿದರು. 17 ಓವರ್ ಪೂರ್ಣವಾಗುವ ಹೊತ್ತಿಗೆ 18 ಎಸೆತಗಳಲ್ಲಿ ಭಾರತದ ಗೆಲುವಿಗೆ 39 ರನ್​ಗಳು ಬೇಕಾಗಿದ್ದವು. ಒಂದು ಓವರ್​ಗೆ 13 ರನ್​ಗಳ ಅವಶ್ಯಕತೆಯಿತ್ತು.

ಇದೇವೇಳೆ ಅರ್ಧಶತಕ ಸಿಡಿಸಿ ಅಬ್ಬರಿಸಲು ಶುರು ಮಾಡುದ ಕೊಹ್ಲಿ ಯಾರೂ ಊಹಿಸಲಾಗದ ರೀತಿ ಬ್ಯಾಟ್ ಬೀಸಿದರು. ಭಾರತವನ್ನು ಸೆಮೀಸ್​ಗೆ ತಲುಪಿಸಲು ಎಲ್ಲಿಲ್ಲದ ಹೋರಾಟ ನಡೆಸಿದ ವಿರಾಟ್, 18ನೇ ಓವರ್​ನ ಜೇಮ್ಸ್ ಫಾಲ್ಕನ್ನರ್ ಬೌಲಿಂಗ್​ನಲ್ಲಿ ಬೌಲಿಂಗ್- ಸಿಕ್ಸರ್​ಗಳ ಮಳೆ ಸುರಿಸಿದರು. ಆ ಓವರ್​ನಲ್ಲಿ 19 ರನ್ ಮೂಡಿಬಂತು.

ಕೊನೆಯ 2 ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 20 ರನ್​ಗಳು ಬೇಕಾಗಿದ್ದವು. 19ನೇ ಓವರ್​ನ ನೇಥನ್ ಕಲ್ಟರ್ ನೈಲ್ ಬೌಲಿಂಗ್​ನಲ್ಲೂ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 5 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಖಚಿತ ಪಡಿಸಿದರು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಧೋನಿ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಭಾರತ 6 ವಿಕೆಟ್​ಗಳ ಜಯ ಸಾಧಿಸಿ ಸೆಮೀಸ್​ಗೆ ತಲುಪಿತು.

ನಿಮಗಿದು ಗೊತ್ತಾ?: ಏಕದಿನ ಕ್ರಿಕೆಟ್​​ನಲ್ಲಿ ಹಿಟ್​ಮ್ಯಾನ್​​ ಸಿಡಿಸಿದ 264 ರನ್ ಗರಿಷ್ಠ ಸ್ಕೋರ್ ಅಲ್ಲ; ಮತ್ಯಾರದ್ದು?

ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 82 ರನ್ ಚಚ್ಚಿದರು. ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಈ ಪಂದ್ಯ ನಡೆದು ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ, ಸೆಮಿ ಫೈನಲ್​ನಲ್ಲಿ ಭಾರತ ತಂಡ ವೆಸ್ಟ್​ ಇಂಡೀಸ್ ವಿರುದ್ಧ ಸೋಲುಕಂಡು ತನ್ನ ಅಭಿಯಾನ ಅಂತ್ಯಗೊಳಿಸಿತು.

First published: March 27, 2020, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading